'ಕಸ್ತೂರಿ ನಿವಾಸ' ಕಲರ್ ಈ ವಾರ ತೆರೆಗೆ
ವರ್ಣರಂಚಿತ 'ಕಸ್ತೂರಿ ನಿವಾಸ' ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಚಿತ್ರ...

ಕನ್ನಡ ಚಿತ್ರರಂಗ ಎಂದೂ ಮರೆಯಲಾಗದ, ಕನ್ನಡ ಚಿತ್ರ ರಂಗದಲ್ಲೇ ಮಹತ್ವದ ಮೈಲಿಗಲ್ಲು ಸಾಧಿಸಿದ ಚಿತ್ರ 'ಕಸ್ತೂರಿ ನಿವಾಸ'. 1971 ರಲ್ಲಿ ತೆರೆಕಂಡ ಈ ಚಿತ್ರ ಬೆಂಕಿಪೊಟ್ಟಣ ಉದ್ಯಮಿಯ ವಿಫಲ ಪ್ರೇಮಕಥೆಯನ್ನು ಆಧರಿಸಿದೆ. ಈ ಚಿತ್ರಕ್ಕೆ ಡಾ.ರಾಜ್ಕುಮಾರ್ ಅವರು ಜೀವ ತುಂಬಿ, ಕನ್ನಡ ಚಿತ್ರರಂಗದಲ್ಲಿ ಎಂದೆಂದೂ ಮರೆಯದ ಕ್ಲಾಸಿಕ್ ಚಿತ್ರವಾಗಿ ಉಳಿಯುವಂತಹ ಮನೋಜ್ಞ ಅಭಿನಯ ನೀಡಿದ್ದಾರೆ.
ಕಪ್ಪು ಬಿಳುಪಿನಲ್ಲಿದ್ದ ಈ ಚಿತ್ರವನ್ನು ಆಧುನೀಕ ತಂತ್ರಜ್ಞಾನವನ್ನು ಬಳಸಿಕೊಂಡು ವರ್ಣಮಯ ಮಾಡಲಾಗಿದೆ. ವರ್ಣರಂಚಿತ ಕಸ್ತೂರಿ ನಿವಾಸ ಇದೇ ನವೆಂಬರ್ 7 ರಂದು ಬಿಡುಗಡೆಗೊಳ್ಳಲಿದೆ. ಈಗಾಗಲೇ 'ಕಸ್ತೂರಿ ನಿವಾಸದ' ಕಲರ್ ಟ್ರೈಲರ್ ಬಿಡುಗಡೆಗೊಂಡಿದ್ದು ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ. ಸಂಪೂರ್ಣ ಚಿತ್ರ ವೀಕ್ಷಣೆಗೆ ಈಗಾಗಲೇ ಲಕ್ಷಾಂತರ ಮಂದಿ ಕಾಯ್ದು ಕುಳಿತಿದ್ದಾರೆ.
'ಕಸ್ತೂರಿ ನಿವಾಸ' ಚಲನಚಿತ್ರದ ನಿರ್ದೇಶಕರಾದ ಕೆಸಿಎನ್.ಮೋಹನ್ ಪ್ರೇಕ್ಷಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಲು ಮುಂದಾಗಿದ್ದಾರೆ. 60ರ ದಶಕದಲ್ಲಿ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ್ದ ಸುಪ್ರಸಿದ್ದ ಕಪ್ಪು ಬಿಳುಪು ಚಿತ್ರಗಳಾದ 'ವೀರ ಕೇಸರಿ' ಮತ್ತು 'ಶ್ರೀರಾಘವೇಂದ್ರ ಮಹಾತ್ಮೆ' ಚಿತ್ರಗಳನ್ನು ಕಲರೈಸೇಶನ್ ಮಾಡಲು ಚಿಂತನೆ ನಡೆಸಿದ್ದಾರೆ. ಅಲ್ಲದೆ 'ಬಬ್ರೂವಾಹನ' ಚಿತ್ರವನ್ನು 3ಡಿ ತಂತ್ರಜ್ಞಾನಕ್ಕೆ ಪರಿವರ್ತಿಸಲು ನಿರ್ಧರಿಸಿದ್ದಾರೆ.
ಈ ಹಿಂದೆ ನಿರ್ದೇಶಕ ಕೆಸಿಎನ್.ಮೋಹನ್ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಕಪ್ಪು ಬಿಳುಪಿನ 'ಸತ್ಯ ಹರಿಶ್ಚಂದ್ರ' ಚಿತ್ರವನ್ನು ಕಲರೈಸೇಷನ್ ಮಾಡಿದ್ದರು. 1965 ರಲ್ಲಿ ತೆರೆಕಂಡ 'ಸತ್ಯಹರಿಶ್ಚಂದ್ರ' ಚಿತ್ರವನ್ನು 2008 ರಂದು ವರ್ಣರಂಚಿತ ಚಿತ್ರವಾಗಿ ಬಿಡುಗಡೆಗೊಳಿಸಿದ್ದರು. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
1971ರಲ್ಲಿ ತೆರೆಕಂಡ 'ಕಸ್ತೂರಿ ನಿವಾಸ' ಚಿತ್ರದಲ್ಲಿ ಜಯಂತಿ, ಆರತಿ, ಅಶ್ವತ್ ಸೇರಿದಂತೆ ಪ್ರಮುಖ ತಾರಾಬಣವಿದೆ. ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ಸಂಯೋಜಿಸಿದ್ದು, ಚಿತ್ರದ 6 ಹಾಡುಗಳು ಸೂಪಟ್ ಹಿಟ್ ಆಗಿದ್ದು ಮಾತ್ರವಲ್ಲದೆ ಎವರ್ಗ್ರೀನ್ ಆಗಿವೆ. ಹೊಸ ರೂಪದ ವರ್ಣರಂಚಿತ 'ಕಸ್ತೂರಿ ನಿವಾಸ' ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಚಿತ್ರವನ್ನು ವೀಕ್ಷಿಸಲು ಪ್ರೇಕ್ಷಕರು ಉತ್ಸಾಹದಿಂದ ಕಾದು ಕುಳಿತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


