ಸಿನಿಮಾ ಸುದ್ದಿ

ಅನುರಾಗ್ ಕಶ್ಯಪ್ ಅದ್ಭುತ ನಿರ್ದೇಶಕ:ಶಾಹಿದ್ ಕಪೂರ್

ದೇಶದ ಅತ್ಯದ್ಭುತ ನಿರ್ದೇಶಕರಲ್ಲಿ ಅನುರಾಗ್ ಕಶ್ಯಪ್ ಒಬ್ಬರು ...

ಅನುರಾಗ್ ಕಶ್ಯಪ್ ಅದ್ಭುತ ನಿರ್ದೇಶಕ:ಶಾಹಿದ್ ಕಪೂರ್
ಶಾಹಿದ್ ಕಪೂರ್
Published On :

ಮುಂಬೈ: ದೇಶದ ಅತ್ಯದ್ಭುತ ನಿರ್ದೇಶಕರಲ್ಲಿ ಅನುರಾಗ್ ಕಶ್ಯಪ್ ಒಬ್ಬರು ಎಂದಿದ್ದಾರೆ ಬಾಲಿವುಡ್ ನಟ ಶಾಹಿದ್ ಕಪೂರ್.

"ಅವರು ದೇಶದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು ಹಾಗೂ ಅನುರಾಗ್ ಅವರ ಕೆಲಸವನ್ನು ನಾನು ಮನಸಾರೆ ಮೆಚ್ಚುತ್ತೇನೆ. ಅವರು ಸಾಮಾನ್ಯವಾಗಿ ಅತ್ಯುತ್ತಮ ಸಿನೆಮಾಗಳನ್ನೆ ನಿರ್ದೇಶಿಸುತ್ತಾರೆ" ಎಂದು ಅನುರಾಗ್ ಕಶ್ಯಪ್ ಅವರ ಸಿನೆಮಾ 'ಅಗ್ಲಿ' ವಿಶೇಷ ಪ್ರದರ್ಶನದ ವೇಳೆ ಮುಂಬೈನಲ್ಲಿ ಮಂಗಳವಾರ ಶಾಹಿದ್ ಕಪೂರ್ ತಿಳಿಸಿದ್ದಾರೆ.

"ನನ್ನ ಸಿನೆಮಾ 'ತೇರಿ ಮೇರಿ ಕಹಾನಿ' ಚಲನಚಿತ್ರದ ವೇಳೆ ಅನುರಾಗ್ ಅವರ 'ಗ್ಯಾಂಗ್ಸ್ ಆಫ್ ವಸೀಪುರ್' ಚಲನಚಿತ್ರ ಬಿಡುಗಡೆಗೊಂಡಿದ್ದು ನೆನಪಿದೆ. ನನ್ನ ಚಲನಚಿತ್ರಕ್ಕಿಂತ ಅದು ಒಳ್ಳೆಯ ಪ್ರದರ್ಶನ ನೀಡಿತ್ತು ಏಕೆಂದರೆ ಆ ಸಿನೆಮಾ ಹೆಚ್ಚು ಚೆನ್ನಾಗಿತ್ತು" ಎಂದು ಈ ಹಿಂದೆ ಅನುರಾಗ್ ಕಶ್ಯಪ್ ಅವರ 'ಫೂಲ್ ಅಂಡ್ ಫೈನಲ್' ಸಿನೆಮಾದಲ್ಲಿ ಈ ಹಿಂದೆ ಕೆಲಸ ಮಾಡಿದ್ದ ನಟ ಶಾಹಿದ್ ಕಪೂರ್ ತಿಳಿಸಿದ್ದಾರೆ.

ರಾಹುಲ್ ಭಟ್, ರೋನಿತ್ ರಾಯ್, ತೇಜಸ್ವಿನಿ ಕೊಲ್ಹಾಪುರೆ ಮತ್ತು ಸುರ್ವೀನ್ ಚಾವ್ಲಾ ಅಭಿನಯದ 'ಅಗ್ಲಿ' ಚಲನಚಿತ್ರವನ್ನು ಅನುರಾಗ್ ಕಶ್ಯಪ್ ಅವರೇ ಬರೆದು ನಿರ್ದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.