ಬಾಲಿವುಡ್

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬ್ಯಾನ್: FWICE ವಿರುದ್ಧ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಿಡಿ! ಹೇಳಿದ್ದೇನು?

ಮೂರು ವರ್ಷಗಳಿಂದ ತಯಾರಾಗುತ್ತಿದ್ದ ಫರ್ಹಾನ್ ಅಖ್ತರ್ ಅವರ ಡಾನ್ 3 ಚಿತ್ರದಿಂದ ರಣವೀರ್ ಸಿಂಗ್ ಹೊರ ನಡೆದ ನಂತರ ಇನ್ನೂ ಮುಂದೆ ಅವರ ಮುಂದಿನ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE) ಸೋಮವಾರ ಹೇಳಿತ್ತು.

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬ್ಯಾನ್: FWICE ವಿರುದ್ಧ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಿಡಿ! ಹೇಳಿದ್ದೇನು?
ರಣವೀರ್ ಸಿಂಗ್, ರಾಮ್ ಗೋಪಾಲ್ ವರ್ಮಾ
Published On :

ಬಾಲಿವುಡ್ ಚಿತ್ರರಂಗದಿಂದ ಖ್ಯಾತ ನಟ ರಣವೀರ್ ಸಿಂಗ್ ಅವರ ಬ್ಯಾನ್ ವಿರುದ್ಧ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಿಡಿಕಾರಿದ್ದಾರೆ. ಅವರಂತಹ ನಟರು ಲಕ್ಷಾಂತರ ಸಿನಿಮಾ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುತ್ತಾರೆ. ಆದರೆ ಈ ಒಕ್ಕೂಟ ಸೃಷ್ಟಿಸಲ್ಲ ಎಂದಿದ್ದಾರೆ.

ಮೂರು ವರ್ಷಗಳಿಂದ ತಯಾರಾಗುತ್ತಿದ್ದ ಫರ್ಹಾನ್ ಅಖ್ತರ್ ಅವರ ಡಾನ್ 3 ಚಿತ್ರದಿಂದ ರಣವೀರ್ ಸಿಂಗ್ ಹೊರ ನಡೆದ ನಂತರ ಇನ್ನೂ ಮುಂದೆ ಅವರ ಮುಂದಿನ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE) ಸೋಮವಾರ ಹೇಳಿತ್ತು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ರಣವೀರ್ ಸಿಂಗ್ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. "'FWICE' ಅನ್ನು ನಿಷೇಧಿಸಿ, Ranveer ಸಿಂಗ್ ಅಲ್ಲ. 'BAN' ಎಂಬುದು ಅಂತಿಮವಾಗಿ FWICE ಕುರಿತು ದೊಡ್ಡ ಫ್ಯಾಟ್ ಜೋಕ್ ಆಗುತ್ತದೆ (BIG FAT JOKE)ಎಂದಿದ್ದಾರೆ.

ಇದು ಅವರು ಹೇಳಿಕೊಳ್ಳುತ್ತಿರುವಂತೆ ಉದ್ಯಮ ಅಥವಾ ಕಾರ್ಮಿಕರ ರಕ್ಷಣೆಯಲ್ಲ. ಇದು ಅತ್ಯಂತ ಹಳೆಯದಾದ ಒಕ್ಕೂಟ ವ್ಯವಸ್ಥೆಯ ಭುಜ ಬಲದ ಪ್ರದರ್ಶನವಾಗಿದೆ. ಅವರ ಹಿಡಿತವನ್ನು ಹಿಡಿದಿಡಲು ಹತಾಶವಾಗಿ ಪ್ರಯತ್ನಿಸುತ್ತಿದೆ. 5 ಲಕ್ಷ ಹೆಚ್ಚು ಅಥವಾ 50 ಲಕ್ಷಕ್ಕೂ ಹೆಚ್ಚು ಕಾರ್ಮಿಕರ ಪರವಾಗಿ ಮಾತನಾಡುವುದಾಗಿ ಅದು ಹೇಳಿಕೊಳ್ಳುತ್ತದೆಯೇ ಎಂದು ಬರೆದುಕೊಂಡಿದ್ದಾರೆ.

"FWICE ನ್ಯಾಯಾಲಯವೂ ಅಲ್ಲ ಅಥವಾ ಸರ್ಕಾರದ ಅಧಿಕೃತ ನಿಯಂತ್ರಕ ಸಂಸ್ಥೆಯೂ ಅಲ್ಲ. ಅತ್ಯುತ್ತಮವಾಗಿ ಇದು ಕಾಂಗರೂ ನ್ಯಾಯಾಲಯವಾಗಿದೆ. ಇದು ಬರೀ ಹೇಳಿಕೆಯಿಂದ ನ್ಯಾಯ ನೀಡುವಂತೆ ನಾಟಕ ಮಾಡುತ್ತಿದೆ. ಆದರೆ ವಾಸ್ತವವಾಗಿ ಇರುವ ಕಾನೂನು ನಿಯಮಗಳು, ಸರಿಯಾದ ಪ್ರಕ್ರಿಯೆ ಮತ್ತು ನಿಷ್ಪಕ್ಷಪಾತತೆಯನ್ನು ನಿರ್ಲಕ್ಷಿಸುತ್ತದೆ... ಇದು FWICE ಗೆ ಭಾರಿ ಅಪತ್ತು. ಏಕೆಂದರೆ ಅದು ಹತಾಶೆಯಿಂದ ಕಿರುಚುತ್ತಿದೆ ಮತ್ತು ಅದೇ ಸಮಯದಲ್ಲಿ ಅದರ ಹಳೆಯತನವನ್ನು ಪ್ರದರ್ಶಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ರಣವೀರ್ ಸಿಂಗ್ ನಂತಹ ಸ್ಟಾರ್ ಗಳು ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗವನ್ನು ಸೃಷ್ಟಿಸುತ್ತಾರೆ ಆದರೆ ಒಕ್ಕೂಟ ಯಾವುದೇ ಉದ್ಯೋಗ ಸೃಷ್ಟಿಸಲ್ಲ.ಅಂತಹ ಸ್ಟಾರ್ ಗಳು ಇರುವುದರಿಂದ ಮಾತ್ರ ಉದ್ಯಮ ಅಸ್ತಿತ್ವದಲ್ಲಿದೆ. FWICE ಸಹ ಅಸ್ತಿತ್ವದಲ್ಲಿದೆ ಎಂದು ರಾಮ್ ಗೋಪಾಲ್ ವರ್ಮಾ ಟೀಕಾ ಪ್ರಹಾರ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.