ಬಾಲಿವುಡ್ ಚಿತ್ರರಂಗದಿಂದ ಬ್ಯಾನ್: ನಟ ರಣವೀರ್ ಸಿಂಗ್ ಪ್ರತಿಕ್ರಿಯಿಸಿದ್ದು ಹೀಗೆ..
ಡಾನ್ 3 ಚಿತ್ರದಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಆರೋಪದ ಮೇಲೆ ಫರ್ಹಾನ್ ಅಖ್ತರ್ ಅವರು ಏಪ್ರಿಲ್ 11, 2026 ರಂದು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘ (IFTDA) ಮುಂದೆ ದೂರು ನೀಡಿದ್ದರು

ಫರ್ಹಾನ್ ಅಖ್ತರ್ ನಿರ್ದೇಶನದ ಡಾನ್ 3 ಚಿತ್ರದಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಆರೋಪದ ಮೇಲೆ ನಟ ರಣವೀರ್ ಸಿಂಗ್ ಅವರ ಮುಂದಿನ ಸಿನಿಮಾಗಳಲ್ಲಿ ತನ್ನ ಯಾವುದೇ ನೌಕರರು ಕೆಲಸ ಮಾಡುವುದಿಲ್ಲ ಎಂದು ವೆಸ್ಟರ್ನ್ ಇಂಡಿಯಾ ಸಿನಿ ಉದ್ಯೋಗಿಗಳ ಒಕ್ಕೂಟ (FWICE) ಸೋಮವಾರ ಹೇಳಿತ್ತು. ಈ ಕುರಿತು ರಣವೀರ್ ಸಿಂಗ್ ಈಗ ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಿವುಡ್ ಚಿತ್ರರಂಗ ಹಾಗೂ ಡಾನ್ ಚಿತ್ರಕ್ಕೆ ಸಂಬಂಧಿಸಿದ ಪ್ರತಿಯೊಬ್ಬರ ಮೇಲೂ ರಣವೀರ್ ಸಿಂಗ್ ಅತ್ಯುನ್ನತ ಗೌರವ ಹೊಂದಿದ್ದಾರೆ. ಡಾನ್ 3 ಸಿನಿಮಾ ಸುತ್ತ ಇತ್ತೀಚಿಗೆ ಎದ್ದಿರುವ ವಿವಾದದ ಬಗ್ಗೆ ಮೌನವಾಗಿದ್ದು, ವೃತ್ತಿಪರ ಚರ್ಚೆಗಳು ಮತ್ತು ವೈಯಕ್ತಿಕ ಹೋಲಿಕೆಗಳನ್ನು ಘನತೆ, ಪ್ರಬುದ್ಧತೆ ಮತ್ತು ಪರಸ್ಪರ ಗೌರವದಿಂದ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದು ರಣವೀರ್ ಸಿಂಗ್ ಅಧಿಕೃತ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಲವು ವದಂತಿಗಳಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸುವುದು ಅಗತ್ಯವೆಂದು ಎಂದಿಗೂ ಪರಿಗಣಿಸಿಲ್ಲ. ಅವರ ಗಮನವೇನಿದ್ದರೂ ಅವರ ಕೆಲಸವಾಗಿದೆ. ಅವರು ತೊಡಗಿಸಿಕೊಂಡಿರುವ ಚಿತ್ರದ ಬಗ್ಗೆ ಆಳವಾದ ಗೌರವ ಮತ್ತು ಸದ್ಭಾವನೆಯನ್ನು ಹೊಂದಿದ್ದು, ಫ್ರಾಂಚೈಸಿಯ ನಿರಂತರ ಯಶಸ್ಸನ್ನು ಪ್ರಾಮಾಣಿಕವಾಗಿ ಬಯಸುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಇಂತಹ ಕ್ಷಣಗಳಲ್ಲಿ ಸಂಯಮದಿಂದ ಇರುವುದು ಪ್ರಜ್ಞಾಪೂರ್ವಕ ನಿರ್ಧಾರವಾಗಿದೆ ಮತ್ತು ಅವರು ಅದೇ ನಿಲುವನ್ನು ಮುಂದುವರಿಸುತ್ತಾರೆ" ಎಂದು ವಕ್ತಾರರು ಸ್ಪಷ್ಪಪಡಿಸಿದ್ದಾರೆ.
ಏನಿದು ವಿವಾದ: ಡಾನ್ 3 ಚಿತ್ರದಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಆರೋಪದ ಮೇಲೆ ಫರ್ಹಾನ್ ಅಖ್ತರ್ ಅವರು ಏಪ್ರಿಲ್ 11, 2026 ರಂದು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘ (IFTDA) ಮುಂದೆ ದೂರು ನೀಡಿದ್ದರು. ತದನಂತರ ಮುಂದಿನ ಕ್ರಮಕ್ಕಾಗಿ ಈ ವಿಷಯವನ್ನು FWICE ಗೆ ವರ್ಗಾಯಿಸಲಾಗಿತ್ತು.

ಬಾಲಿವುಡ್ ಚಿತ್ರರಂಗದಿಂದ 'ರಣವೀರ್ ಸಿಂಗ್' ಬ್ಯಾನ್: ಸಿನಿಮಾ ನೌಕರರ ಒಕ್ಕೂಟ ಮಹತ್ವದ ನಿರ್ಧಾರ; ಏನಿದು ವಿವಾದ?
ಆದರೆ ರಣವೀರ್ ಸಿಂಗ್ ಒಕ್ಕೂಟದ ಮುಂದೆ ವಿಚಾರಣೆಗೆ ಹಾಜರಾಗಿರಲಿಲ್ಲ. ಬಳಿಕ ರಣವೀರ್ ಅವರ ಪ್ರತಿಕ್ರಿಯೆಯನ್ನು FWICE ಗಂಭೀರವಾಗಿ ಪರಿಗಣಿಸಿದ್ದು, ತನ್ನ ಯಾವುದೇ ನೌಕರರು ರಣವೀರ್ ಸಿಂಗ್ ಅವರ ಸಿನಿಮಾಗಳಲ್ಲಿ ಕೆಲಸ ಮಾಡುವುದಿಲ್ಲ ಎಂದು ನಿರ್ಧರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


