ಬಾಲಿವುಡ್

ಮುದುಕ ಗಂಡನ ಜೊತೆ ಖುಷಿಯಾಗಿದ್ದೀರಾ? ಅಭಿಮಾನಿಗೆ Bollywood ನಟ ಅರ್ಬಾಜ್ ಖಾನ್ ಪತ್ನಿ ಖಡಕ್ ತಿರುಗೇಟು

ಬಾಲಿವುಡ್ ನಟ ಅರ್ಬಾಜ್ ಖಾನ್ ಮತ್ತು ಶುರಾ ಖಾನ್ ಉದ್ಯಮದ ಅತ್ಯಂತ ಜನಪ್ರಿಯ ದಂಪತಿಗಳಲ್ಲಿ ಒಬ್ಬರಾಗಿದ್ದಾರೆ. ಮುಂಬೈನಲ್ಲಿ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ.

ಮುದುಕ ಗಂಡನ ಜೊತೆ ಖುಷಿಯಾಗಿದ್ದೀರಾ? ಅಭಿಮಾನಿಗೆ Bollywood ನಟ ಅರ್ಬಾಜ್ ಖಾನ್ ಪತ್ನಿ ಖಡಕ್ ತಿರುಗೇಟು
ಅರ್ಬಾಜ್ ಖಾನ್, ಶುರಾ ಖಾನ್
Published On :

ಬಾಲಿವುಡ್ ನಟ ಅರ್ಬಾಜ್ ಖಾನ್ ಮತ್ತು ಶುರಾ ಖಾನ್ ಉದ್ಯಮದ ಅತ್ಯಂತ ಜನಪ್ರಿಯ ದಂಪತಿಗಳಲ್ಲಿ ಒಬ್ಬರಾಗಿದ್ದಾರೆ. ಮುಂಬೈನಲ್ಲಿ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಅಭಿಮಾನಿಗಳು ಅವರ ಬಗ್ಗೆ ಉತ್ಸುಕರಾಗಿದ್ದಾರೆ. ಆದಾಗ್ಯೂ ನೆಟ್ಟಿಗರು ಸಹ ಟ್ರೋಲ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ, ಶುರಾ ಖಾನ್‌ಗೆ ಅರ್ಬಾಜ್ ಖಾನ್ ಬಗ್ಗೆ ವೈಯಕ್ತಿಕ ಪ್ರಶ್ನೆ ಕೇಳಿದ್ದು ಅದಕ್ಕೆ ಶುರಾ ತಿರುಗೇಟು ನೀಡಿದ್ದಾರೆ.

ಶುರಾ ಖಾನ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ನನಗೆ ಏನಾದರೂ ಕೇಳಬಹುದು ಎಂಬ ಸಂವಾದ ನಡೆಸಿದರು. ಅಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸಿದರು. ಇದೇ ವೇಳೆ, ಅಭಿಮಾನಿಯೊಬ್ಬ ನೀವು ಮುದಿ ವ್ಯಕ್ತಿಯೊಂದಿಗೆ ಸಂತೋಷವಾಗಿದ್ದೀರಾ?" ಎಂದು ಕೇಳಿದನು. ಇದಕ್ಕೆ ಶುರಾ ಖಾನ್ ನೇರ ಉತ್ತರ ನೀಡಿದರು. ನೀವು ಏನು ಮಾತನಾಡುತ್ತಿದ್ದೀರಿ? ಅವರು ವಯಸ್ಸಾದವರಲ್ಲ. ನನ್ನ ಗಂಡ ಸೀಮಿತ ಆವೃತ್ತಿಯ ವಿಂಟೇಜ್ ಮಾಡೆಲ್ ಎಂದು ಶುರಾ ಖಾನ್ ಪ್ರತಿಕ್ರಿಯಿಸಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಅರ್ಬಾಜ್ ಖಾನ್ ಮತ್ತು ಶುರಾ ಖಾನ್ ನಡುವಿನ ವಯಸ್ಸಿನ ಅಂತರ 22 ವರ್ಷಗಳಷ್ಟಿದೆ. ಅರ್ಬಾಜ್ ಖಾನ್ 58 ವರ್ಷ ವಯಸ್ಸಿನವರಾಗಿದ್ದರೆ, ಅವರ ಎರಡನೇ ಪತ್ನಿ 36 ವರ್ಷ. ಅರ್ಬಾಜ್ ಒಬ್ಬ ನಟ ಮತ್ತು ನಿರ್ಮಾಪಕ, ಆದರೆ ಶುರಾ ಖಾನ್ ಮೇಕಪ್ ಕಲಾವಿದೆ. ಅರ್ಬಾಜ್ ಮತ್ತು ಶುರಾ ಖಾನ್ ಡಿಸೆಂಬರ್ 2023 ರಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಕುಟುಂಬ ಮತ್ತು ಆಪ್ತರು ಮಾತ್ರ ಸಮಾರಂಭದಲ್ಲಿ ಭಾಗವಹಿಸಿದ್ದರು. ಅವರ ವಿವಾಹದ ಸುಮಾರು ಎರಡು ವರ್ಷಗಳ ನಂತರ, ಅಕ್ಟೋಬರ್ 5, 2025 ರಂದು, ದಂಪತಿಗಳು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.