ಬಾಲಿವುಡ್

ಬಾಂದ್ರಾದ ಕನಸಿನ ಮನೆಯಲ್ಲಿ ದೀಪಿಕಾ-ರಣವೀರ್: ಬೇಬಿ ಬಂಪ್ ಫೋಟೋ ವೈರಲ್..!

ಫ್ಯಾನ್‌ ಪೇಜ್‌ಗಳಲ್ಲಿ ಹಂಚಿಕೊಳ್ಳಲಾದ ಚಿತ್ರಗಳಲ್ಲಿ ದೀಪಿಕಾ ಮತ್ತು ರಣವೀರ್ ತಮ್ಮ ಹೊಸ ಮನೆಯ ಕಾಮಗಾರಿ ಹಾಗೂ ಒಳಾಂಗಣ ವಿನ್ಯಾಸದ ಪ್ರಗತಿಯನ್ನು ಪರಿಶೀಲಿಸುತ್ತಿರುವುದು ಕಂಡುಬಂದಿದೆ.

ಬಾಂದ್ರಾದ ಕನಸಿನ ಮನೆಯಲ್ಲಿ ದೀಪಿಕಾ-ರಣವೀರ್: ಬೇಬಿ ಬಂಪ್ ಫೋಟೋ ವೈರಲ್..!
ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್
Published On :

ಮುಂಬೈ: ಬಾಲಿವುಡ್‌ ಸ್ಟಾರ್ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೋಮವಾರ ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ತಮ್ಮ ಹೊಸ ನಿವಾಸಕ್ಕೆ ಭೇಟಿ ನೀಡಿದ್ದು, ಈ ವೇಳೆ ಸೆರೆಹಿಡಿಯಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವಿಶೇಷವಾಗಿ ಗರ್ಭಿಣಿಯಾಗಿರುವ ದೀಪಿಕಾ ಅವರ ಬೇಬಿ ಬಂಪ್‌ ಅಭಿಮಾನಿಗಳ ಗಮನ ಸೆಳೆದಿದ್ದು, ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿದು ಬಂದಿದೆ.

ಫ್ಯಾನ್‌ ಪೇಜ್‌ಗಳಲ್ಲಿ ಹಂಚಿಕೊಳ್ಳಲಾದ ಚಿತ್ರಗಳಲ್ಲಿ ದೀಪಿಕಾ ಮತ್ತು ರಣವೀರ್ ತಮ್ಮ ಹೊಸ ಮನೆಯ ಕಾಮಗಾರಿ ಹಾಗೂ ಒಳಾಂಗಣ ವಿನ್ಯಾಸದ ಪ್ರಗತಿಯನ್ನು ಪರಿಶೀಲಿಸುತ್ತಿರುವುದು ಕಂಡುಬಂದಿದೆ.

ಕೆಲ ಫೋಟೋಗಳಲ್ಲಿ ಇಬ್ಬರೂ ಬಾಲ್ಕನಿಯಲ್ಲಿ ನಿಂತು ಮನೆಯ ವಿವಿಧ ಭಾಗಗಳನ್ನು ವೀಕ್ಷಿಸುತ್ತಾ ಚರ್ಚೆ ನಡೆಸುತ್ತಿರುವ ದೃಶ್ಯಗಳು ಕಂಡು ಬಂದಿವೆ.

ಈ ವೇಳೆ ದೀಪಿಕಾ ಬಿಳಿ ಬಣ್ಣದ ಸಡಿಲ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಅವರ ಮುಖದಲ್ಲಿನ ಪ್ರೆಗ್ನೆನ್ಸಿ ಗ್ಲೋ ಕಂಡು ಬಂದಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ರಣವೀರ್ ಸಿಂಗ್ ಕೆಂಪು ಟಿ-ಶರ್ಟ್ ಮತ್ತು ಕಪ್ಪು ಟ್ರ್ಯಾಕ್ ಪ್ಯಾಂಟ್ ಧರಿಸಿ ಸರಳ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ದೀಪಿಕಾ ಮತ್ತು ರಣವೀರ್ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಅಧಿಕೃತವಾಗಿ ಘೋಷಿಸಿದ್ದರು. ಈ ಘೋಷಣೆಯಲ್ಲಿ ಅವರ ಪುತ್ರಿ ದುಆ ಕೂಡ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಸಂತಸ ಮೂಡಿಸಿತ್ತು.

2018ರ ನವೆಂಬರ್‌ನಲ್ಲಿ ಇಟಲಿಯ ಪ್ರಸಿದ್ಧ Lake Comoನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ದೀಪಿಕಾ ಮತ್ತು ರಣವೀರ್ ವಿವಾಹವಾಗಿದ್ದರು. 2024ರ ಸೆಪ್ಟೆಂಬರ್‌ನಲ್ಲಿ ಈ ದಂಪತಿಗೆ ಮೊದಲ ಮಗಳು ಜನಿಸಿದ್ದು, ಬಳಿಕ ದೀಪಾವಳಿ ಸಂಭ್ರಮದ ವೇಳೆ ಮಗುವಿನ ಹೆಸರು ‘ದುಆ’ ಎಂದು ಬಹಿರಂಗಪಡಿಸಿದ್ದರು. ಅರೇಬಿಕ್ ಭಾಷೆಯಲ್ಲಿ ‘ದುಆ’ ಎಂದರೆ ‘ಪ್ರಾರ್ಥನೆ’ ಎಂಬ ಅರ್ಥ.

ಇನ್ನೊಂದೆಡೆ, ದೀಪಿಕಾ ಇತ್ತೀಚೆಗೆ ಶಾರುಖ್ ಖಾನ್ ಜೊತೆ ಅಭಿನಯಿಸುತ್ತಿರುವ ಕಿಂಗ್ ಚಿತ್ರದ ಚಿತ್ರೀಕರಣಕ್ಕಾಗಿ ದಕ್ಷಿಣ ಆಫ್ರಿಕಾಗೆ ತೆರಳಿದ್ದರು. ಅಲ್ಲಿನ ಪ್ರಮುಖ ಶೂಟಿಂಗ್ ವೇಳಾಪಟ್ಟಿಯನ್ನು ಪೂರ್ಣಗೊಳಿಸಿ ಭಾರತಕ್ಕೆ ಮರಳಿರುವ ಅವರು ಮತ್ತೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಸ್ತುತ ದೀಪಿಕಾ ‘ಕಿಂಗ್’ ಚಿತ್ರದ ಜೊತೆಗೆ ನಿರ್ದೇಶಕ ಅಟ್ಲೀ ಅವರ ರಾಕಾ ಚಿತ್ರದಲ್ಲಿ ನಟಿಸುತ್ತಿದ್ದು, ಅದರಲ್ಲಿ ಅಲ್ಲು ಅರ್ಜುನ್ ಎದುರು ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ವೇಳೆ ರಣವೀರ್ ಸಿಂಗ್ ತಮ್ಮ ಮುಂದಿನ ಝಾಂಬಿ ಸಾಹಸ ಚಿತ್ರ ಪ್ರಳಯ ಬಿಡುಗಡೆಗೆ ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.