'ಮೈ ನೇಮ್ ಈಸ್ ಗಿಲ್, ಅಂಡ್ ಐ ನೋ ಹೌ ಟು ಕಿಲ್': 'ದಿ ಟ್ರೈಟರ್ಸ್ 2' ರಿಯಾಲಿಟಿ ಶೋಗೆ ಕ್ರಿಕೆಟಿಗ ಶುಭಮನ್ ಗಿಲ್ ಸಹೋದರಿ ಎಂಟ್ರಿ!
ಕಂಟೆಂಟ್ ಕ್ರಿಯೇಟರ್ ಆಗಿರುವ ಶಾನೀಲ್ ಗಿಲ್, ತಮ್ಮ ಆ ಪರಿಚಯದ ಮೂಲಕ ದೇಶದಾದ್ಯಂತ ಇರುವ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ.

'ದಿ ಟ್ರೈಟರ್ಸ್ 2' (The Traitors 2) ನ ಮುಂಬರುವ ಸೀಸನ್‌ನಲ್ಲಿ ಭಾಗವಹಿಸುವ ಸೆಲೆಬ್ರಿಟಿಗಳ ತಾರಾಬಳಗವನ್ನು ಪ್ರೈಮ್ ವಿಡಿಯೋ ಅನಾವರಣಗೊಳಿಸಿದೆ. ಸಾಮಾನ್ಯವಾಗಿ ಪ್ರಚಾರದಿಂದ ದೂರವೇ ಉಳಿದಿದ್ದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಶುಭಮನ್ ಗಿಲ್ ಅವರ ಸಹೋದರಿ ಶಾನೀಲ್ ಗಿಲ್, ಈ ರಿಯಾಲಿಟಿ ಶೋ ಮೂಲಕ ಬಿಗ್ ಎಂಟ್ರಿ ನೀಡಿದ್ದಾರೆ.
ಗುರುವಾರ ನಡೆದ 'ದಿ ಟ್ರೈಟರ್ಸ್ 2' ಕಾರ್ಯಕ್ರಮದ ಉದ್ಘಾಟನೆಯ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ತಮ್ಮ ಪರಿಚಯ ಮಾಡಿಕೊಂಡಿರುವ ಶಾನೀಲ್, 'ಮೈ ನೇಮ್ ಈಸ್ ಗಿಲ್, ಐ ನೋ ಹೌ ಟು ಕಿಲ್' (ನನ್ನ ಹೆಸರು ಗಿಲ್ ಮತ್ತು ಎದುರಾಳಿಯನ್ನು ಮಣಿಸುವುದು ನನಗೆ ಚೆನ್ನಾಗಿ ಗೊತ್ತು) ಎಂದಿದ್ದಾರೆ.
ಕಂಟೆಂಟ್ ಕ್ರಿಯೇಟರ್ ಆಗಿರುವ ಶಾನೀಲ್ ಗಿಲ್, ತಮ್ಮ ಆ ಪರಿಚಯದ ಮೂಲಕ ದೇಶದಾದ್ಯಂತ ಇರುವ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ.
ಕ್ರಿಕೆಟ್ ಮತ್ತು ಗ್ಲಾಮರ್ ಲೋಕ ಸಾಮಾನ್ಯವಾಗಿ ಜೊತೆಜೊತೆಯಾಗಿ ಸಾಗುತ್ತವೆ. ಕೆಲ ತಿಂಗಳ ಹಿಂದೆ, ಶ್ರೇಯಸ್ ಅಯ್ಯರ್ ಅವರ ಸಹೋದರಿ ಶ್ರೇಷ್ಠಾ ಅಯ್ಯರ್ ನೆಟ್‌ಫ್ಲಿಕ್ಸ್‌ನ 'ಲಾಕ್ ಅಪ್' (Lock Upp) ಕಾರ್ಯಕ್ರಮದ ಎರಡನೇ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೇ ಹಾದಿಯನ್ನು ಅನುಸರಿಸುವ ಮೂಲಕ ಶಾನೀಲ್ ಗಿಲ್ ಕೂಡ ತಮ್ಮದೇ ಆದ ಛಾಪು ಮೂಡಿಸಲು ಸಜ್ಜಾಗಿದ್ದಾರೆ.
'ದಿ ಟ್ರೈಟರ್ಸ್ ಸೀಸನ್ 2' ಆಗಸ್ಟ್ 13 ರಂದು ಜಾಗತಿಕವಾಗಿ ಪ್ರದರ್ಶನ ಆರಂಭಿಸಲಿದೆ ಎಂದು ಪ್ರೈಮ್ ವಿಡಿಯೋ ಘೋಷಿಸಿದೆ.
ಕರಣ್ ಜೋಹರ್ ಹೋಸ್ಟ್ ಮಾಡುವ ಈ ರಿಯಾಲಿಟಿ ಶೋ ಆವೃತ್ತಿಯು ಆಲ್3ಮೀಡಿಯಾ ಇಂಟರ್‌ನ್ಯಾಷನಲ್‌ನಿಂದ ಅಂತರರಾಷ್ಟ್ರೀಯವಾಗಿ ಜನಪ್ರಿಯವಾಗಿರುವ ಸ್ವರೂಪದ ಭಾರತೀಯ ರೂಪಾಂತರವಾಗಿದ್ದು, ಇದನ್ನು ಧರ್ಮಟಿಕ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ.
ಈ ಸೀಸನ್‌ನ ನಿರೂಪಕರಾಗಿ ಕರಣ್ ಜೋಹರ್ ಮರಳುತ್ತಿದ್ದಾರೆ. ಈ ರಿಯಾಲಿಟಿ ಶೋ ಆವೃತ್ತಿಯು ಅಂತರರಾಷ್ಟ್ರೀಯ ಟಿವಿ ಸ್ವರೂಪವೊಂದರ ಭಾರತೀಯ ಆವೃತ್ತಿಯಾಗಿದೆ. ಇದರ ಮೂಲ ಪರಿಕಲ್ಪನೆಯನ್ನು 'All3Media International' ಸಿದ್ಧಪಡಿಸಿ ಪರವಾನಗಿ ನೀಡಿದೆ ಮತ್ತು ಇದು ಅನೇಕ ದೇಶಗಳಲ್ಲಿ ಯಶಸ್ವಿಯಾಗಿದೆ. 'Dharmatic Entertainment' ಭಾರತೀಯ ಆವೃತ್ತಿಯನ್ನು ನಿರ್ಮಿಸಿದೆ.
ಮಲ್ಲಿಕಾ ಶೆರಾವತ್, ಮುನಾವರ್ ಫಾರುಕಿ, ರಿಯಾ ಚಕ್ರವರ್ತಿ, ಕ್ರಿಸ್ಟಲ್ ಡಿಸೋಜಾ, ಪಾರುಲ್ ಗುಲಾಟಿ, ಸೆಲೆಬ್ರಿಟಿ ಚೆಫ್ ರಣವೀರ್ ಬ್ರಾರ್, ಹಿರಿಯ ನಟ ದಲೀಪ್ ತಾಹಿಲ್, ಹರ್ಮನ್ ಸಿಂಘಾ ಮತ್ತು ತಾನ್ಯಾ ಪುರಿ ಅವರೊಂದಿಗೆ ಶಾನೀಲ್ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಮೊದಲ ಬ್ಯಾಚ್‌ನ ಸ್ಪರ್ಧಿಗಳಲ್ಲಿ ಅಭಿಷೇಕ್ ಮಲ್ಹಾನ್, ಶಾಲಿನಿ ಪಾಸಿ, ಕುಲ್ಲು, ಶ್ವೇತಾ ತಿವಾರಿ, ರಿದಾ ಥರಾನಾ, ಅನ್ಶ್ ಚೋಪ್ರಾ, ಇಕ್ಕಾ, ಪ್ರಿಶ್, ಸೌಂಡಸ್ ಮೌಫಕಿರ್, ಕರಣ್ ಸಿಂಗ್ ಮ್ಯಾಜಿಕ್ ಮತ್ತು ಸಾಹಿಲ್ ಸಲಾಥಿಯಾ ಕೂಡ ಇದ್ದಾರೆ.
ಈ ಬಾರಿ 21 ಸೆಲೆಬ್ರಿಟಿ ಸ್ಪರ್ಧಿಗಳು ಟೈಟಲ್ ಮತ್ತು ಬಹುಮಾನದ ಹಣಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


