ಬಾಲಿವುಡ್

"Jo Darr Gaya, Woh Mar Gaya": ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲದ ಬಳಿಕ Salman Khan ಕ್ರಿಪ್ಟಿಕ್ ಪೋಸ್ಟ್ ವೈರಲ್

ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜಿಮ್‌ನಲ್ಲಿ ವರ್ಕೌಟ್ ಮುಗಿಸಿದ ಬಳಿಕ ತೆಗೆಸಿಕೊಂಡಿರುವ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

"Jo Darr Gaya, Woh Mar Gaya": ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲದ ಬಳಿಕ Salman Khan ಕ್ರಿಪ್ಟಿಕ್ ಪೋಸ್ಟ್ ವೈರಲ್
ನಟ ಸಲ್ಮಾನ್ ಖಾನ್ (ಸಂಗ್ರಹ ಚಿತ್ರ)
Published On :

ಮುಂಬೈ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಪ್ಟಿಕ್ ಪೋಸ್ಟ್ ಹಂಚಿಕೊಂಡಿದ್ದು, ಅದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜಿಮ್‌ನಲ್ಲಿ ವರ್ಕೌಟ್ ಮುಗಿಸಿದ ಬಳಿಕ ತೆಗೆಸಿಕೊಂಡಿರುವ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಅವರು ತಮ್ಮ ಫಿಟ್ ದೇಹ ಮತ್ತು ಸಿಕ್ಸ್‌ಪ್ಯಾಕ್ ಪ್ರದರ್ಶಿಸಿದ್ದಾರೆ.

ಆದರೆ, ಫೋಟೋಗಳಿಗಿಂತಲೂ ಹೆಚ್ಚು ಗಮನ ಸೆಳೆದಿರುವುದು ಅದರ ಕ್ಯಾಪ್ಷನ್. "Salman Khan darrrrr Gaya.... Hmmmm Jo darr gaya woh mar gaya." ಅಂದರೆ ಸಲ್ಮಾನ್ ಖಾನ್ ಭಯಪಟ್ಟಿದ್ದಾನೆ... Hmmm... ಭಯಪಟ್ಟವನು ಸತ್ತಂತೆ! ಎಂದು ಸಲ್ಲು ಭಾಯ್ ಟ್ವೀಟ್ ಮಾಡಿದ್ದಾರೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೀಟ್ ಹೋರಾಟದ ಬಗ್ಗೆ ಅವರು ನೀಡಿದ್ದ ಇತ್ತೀಚಿನ ಹೇಳಿಕೆಗೆ ಸಂಬಂಧಿಸಿದ ಸಂದೇಶವೇ ಎಂಬ ಚರ್ಚೆ ಆರಂಭವಾಗಿದೆ.

ಆಗಿದ್ದೇನು?

ಈ ಹಿಂದೆ ವಿದ್ಯಾರ್ಥಿಗಳ ಪ್ರತಿಭಟನೆ ಬೆಂಬಲಸಿ ಟ್ವೀಟ್ ಮಾಡಿದ್ದ ಸಲ್ಮಾನ್ ಖಾನ್ ಬಳಿಕ ಅದರಿಂದ ಯೂಟರ್ನ್ ತೆಗೆದುಕೊಂಡ ರೀತಿಯ ಪೋಸ್ಟ್ ಮಾಡಿದ್ದರು. ಪ್ರಧಾನಿ ಮೋದಿ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ನೀವು ಪ್ರತಿಭಟನೆ ಕೈಬಿಟ್ಟು ಮನೆಗೆ ತೆರಳಿ.. ಸೋನಂ ವಾಂಗ್ಚುಕ್ ಉುಪವಾಸೃ ಕೈ ಬಿಟ್ಟು ಎನಾದರೂ ತಿನ್ನಿ.. ಇಲ್ಲ ನಾನೇ ಮನೆಯಿಂದ ಊಟ ಕಳಿಸಲೇ ಎಂದು ಟ್ವೀಟ್ ಮಾಡಿದ್ದರು.

ಸಲ್ಮಾನ್ ಖಾನ್ ರ ಈ ಟ್ವೀಟ್ ಗೆ ವ್ಯಾಪಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಸಲ್ಮಾನ್ ಖಾನ್ ಕೇಂದ್ರ ಸರ್ಕಾರಕ್ಕೆ ಭಯಪಡುತ್ತಿದ್ದಾರೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು. ಇದೀಗ ಈ ಎಲ್ಲ ಟೀಕೆಗಳಿಗೆ ಸಲ್ಮಾನ್ ಖಾನ್ ಖಡಕ್ ತಿರುಗೇಟು ನೀಡಿದ್ದಾರೆ.

ಸಲ್ಲು ಹೇಳಿದ್ದೇನು?

ಇದಕ್ಕೂ ಮೊದಲು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ದೀರ್ಘ ಪೋಸ್ಟ್ ಮಾಡಿದ್ದ ಸಲ್ಮಾನ್ ಖಾನ್, ವಿದ್ಯಾರ್ಥಿಗಳ ಹಿತವೇ ಅತ್ಯಂತ ಮುಖ್ಯ ಎಂದು ಹೇಳಿದ್ದರು. "ವಿದ್ಯಾರ್ಥಿಗಳ ಶಿಕ್ಷಣ ಮತ್ತು ಸುರಕ್ಷತೆ ನಮ್ಮ ಮೊದಲ ಆದ್ಯತೆ. ಅವರು ಹಾಗೂ ಅವರ ಪೋಷಕರು ಆತಂಕಪಡುವ ಅಗತ್ಯವಿಲ್ಲ. ಪ್ರಧಾನಮಂತ್ರಿ ಈಗಾಗಲೇ ಟ್ವೀಟ್ ಮಾಡಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ವಿಶ್ವಾಸ ನನಗಿದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಮನೆಗೆ ಮರಳಿ ತಮ್ಮ ಕುಟುಂಬದೊಂದಿಗೆ ಇರಬೇಕು," ಎಂದು ಅವರು ಬರೆದಿದ್ದರು.

ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನೂ ಉದ್ದೇಶಿಸಿ, "ಸೋನಂ, ಈಗ ಎಲ್ಲವೂ ಮುಗಿದಿದೆ. ಇದನ್ನು ಮತ್ತಷ್ಟು ಮುಂದುವರಿಸಬೇಡಿ. ಅಗತ್ಯ ಬಂದರೆ ಮುಂದೆಯೂ ಹೋರಾಡಬಹುದು. ಈಗ ಏನಾದರೂ ಊಟ ಮಾಡಿ. ಬೇಕಾದರೆ ನನ್ನ ಮನೆಯಿಂದಲೇ ಊಟ ಕಳುಹಿಸುತ್ತೇನೆ," ಎಂದು ಸಲ್ಮಾನ್ ಹೇಳಿದ್ದರು.

ಆರೋಗ್ಯದ ಬಗ್ಗೆ ಹರಿದಾಡಿದ್ದ ಊಹಾಪೋಹ

ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದರು. ಆ ಕಾರ್ಯಕ್ರಮದ ವಿಡಿಯೊಗಳು ವೈರಲ್ ಆದ ಬಳಿಕ ಅವರ ದೇಹದ ತೂಕ ಮತ್ತು ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳು ಮತ್ತು ಮೀಮ್ಸ್ ಹರಿದಾಡಿದ್ದವು. ಈ ಬೆಳವಣಿಗೆಯ ನಡುವೆಯೇ ಅವರ ಹೊಸ ಪೋಸ್ಟ್ ಮತ್ತಷ್ಟು ಕುತೂಹಲ ಮೂಡಿಸಿದೆ.

ಮುಂದಿನ ಸಿನಿಮಾ

ಸಲ್ಮಾನ್ ಖಾನ್ ಮುಂದಿನ ಚಿತ್ರ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್'ನಲ್ಲಿ ಅಭಿನಯಿಸುತ್ತಿದ್ದಾರೆ. 2020ರ ಗಾಲ್ವಾನ್ ಕಣಿವೆ ಘರ್ಷಣೆಯನ್ನು ಆಧರಿಸಿದ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.