ಆಪ್ತ ಸ್ನೇಹಿತ ಅಂಬರೀಶ್ ಪುಣ್ಯಸ್ಮರಣೆ ದಿನದಂದೇ Bollywood ನಟ ಧರ್ಮೇಂದ್ರ ನಿಧನ: ಸುಮಲತಾ ಸಂತಾಪ!
ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಇಂದು ನಿಧನರಾಗಿದ್ದಾರೆ. ದಿಗ್ಗಜನ ಸಾವಿಗೆ ಪ್ರದಾನಿ ಮೋದಿ ಸೇರಿದಂತೆ ಸಿನಿ ಗಣ್ಯರು ಹಾಗೂ ಹಲವರು ಸಂತಾಪ ಸೂಚಿಸಿದ್ದಾರೆ.

ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಇಂದು ನಿಧನರಾಗಿದ್ದಾರೆ. ದಿಗ್ಗಜನ ಸಾವಿಗೆ ಪ್ರದಾನಿ ಮೋದಿ ಸೇರಿದಂತೆ ಸಿನಿ ಗಣ್ಯರು ಹಾಗೂ ಹಲವರು ಸಂತಾಪ ಸೂಚಿಸಿದ್ದಾರೆ. ಇನ್ನು ಕಾಕತಾಳೀಯ ಎಂಬಂತೆ ಕನ್ನಡದ ಹಿರಿಯ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುಣ್ಯ ಸ್ಮರಣೆ ದಿನದಂದೇ ನಟ ಧರ್ಮೇಂದ್ರ ವಿಧಿವಶರಾಗಿದ್ದಾರೆ. ಇಂದಿಗೆ ನಟ ಅಂಬರೀಷ್ ನಿಧನರಾಗಿ 7 ವರ್ಷ ತುಂಬುತ್ತಿದೆ. ಅಂಬರೀಷ್ ಹಾಗೂ ಧರ್ಮೇಂದ್ರ ಆಪ್ತ ಸ್ನೇಹಿತರಾಗಿದ್ದರು.
ಧಮೇಂದ್ರ ಅವರ ಸಾವಿಗೆ ಕನ್ನಡದ ನಟಿ ಸುಮಲತಾ ಅವರು ಕಂಬನಿ ಮಿಡಿದಿದ್ದಾರೆ. ಹಿಂದಿಯ ಕ್ಷತ್ರಿಯ ಚಿತ್ರದಲ್ಲಿ ಧಮೇಂದ್ರ ಜೊತೆ ತಾವು ಪರದೆ ಹಂಚಿಕೊಂಡಿದ್ದಾಗಿ ಸುಮಲತಾ ಅವರು ಹೇಳಿದ್ದಾರೆ. ಮತ್ತೊಂದೆಡೆ, ಅಂಬಿಯ 7ನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಸುಮಲತಾ ಅವರು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



