ಗಲ್ವಾನ್ ಕಣಿವೆ ಸಂಘರ್ಷ: ಭಾರತೀಯ ಸೇನೆಯ ಪರಾಕ್ರಮ ತೆರೆಯ ಮೇಲೆ; ಪ್ರಮುಖ ಪಾತ್ರದಲ್ಲಿ Salman Khan
59 ವರ್ಷದ ನಟ ಈ ಚಿತ್ರಕ್ಕೆ ಸಂಬಂಧಿಸಿದ 1.22 ನಿಮಿಷಗಳ ಮೋಷನ್ ಪೋಸ್ಟರ್ ಕ್ಲಿಪ್ ನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಶುಕ್ರವಾರ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದಾರೆ.
2020 ರಲ್ಲಿ ಚೀನಾ- ಭಾರತದ ನಡುವೆ ನಡೆದ ಗಲ್ವಾನ್ ಕಣಿವೆ ಸಂಘರ್ಷದ ಘಟನೆಯನ್ನು ಆಧರಿಸಿದ ಚಿತ್ರಕಥೆ ಬ್ಯಾಟಲ್ ಆಫ್ ಗಲ್ವಾನ್ ನಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದು, ಅವರ ಪಾತ್ರದ ಬಗ್ಗೆ ಈಗ ಹೆಚ್ಚಿನ ಕುತೂಹಲ ಮೂಡಿದೆ. ಈ ಚಿತ್ರವನ್ನು ಶೂಟೌಟ್ ಅಟ್ ಲೋಖಂಡ್ವಾಲಾ ಖ್ಯಾತಿಯ ಅಪೂರ್ವ ಲಖಿಯಾ ನಿರ್ದೇಶಿಸಿದ್ದಾರೆ.
59 ವರ್ಷದ ನಟ ಈ ಚಿತ್ರಕ್ಕೆ ಸಂಬಂಧಿಸಿದ 1.22 ನಿಮಿಷಗಳ ಮೋಷನ್ ಪೋಸ್ಟರ್ ಕ್ಲಿಪ್ ನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಕ್ಲಿಪ್ ಪ್ರಕಾರ, ಈ ಚಿತ್ರ ಒಂದೇ ಒಂದು ಗುಂಡು ಹಾರಿಸದೆ ನಡೆದ ಭಾರತದ ಅತ್ಯಂತ ಕ್ರೂರ ಯುದ್ಧಗಳಲ್ಲಿ ಒಂದನ್ನು ಆಧರಿಸಿದೆ.
ಸಮುದ್ರ ಮಟ್ಟದಿಂದ 15,000 ಅಡಿ ಎತ್ತರದಲ್ಲಿ ಈ ಸಂಘರ್ಷ ನಡೆದಿದ್ದು, ಭಾರತದ ಅದಮ್ಯ ಚೈತನ್ಯಕ್ಕೆ ಸಾಕ್ಷಿಯಾಗಿದೆ.
ಚಿತ್ರದ ಬಗ್ಗೆ ಇತರ ವಿವರಗಳು ಇನ್ನೂ ಗೌಪ್ಯವಾಗಿವೆ. ಜೂನ್ 2020 ರಲ್ಲಿ ನಡೆದ ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಇಪ್ಪತ್ತು ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. ಇದು ದಶಕಗಳಲ್ಲಿ ಭಾರತ ಮತ್ತು ಚೀನಾ ನಡುವಿನ ಅತ್ಯಂತ ಗಂಭೀರ ಮಿಲಿಟರಿ ಸಂಘರ್ಷವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



