ಸಂಗೀತ ಕಾರ್ಯಕ್ರಮದ ನಡುವೆ ಬೆನ್ನು ನೋವು; ವೇದಿಕೆಯಲ್ಲೇ ಸೋನು ನಿಗಮ್ ಒದ್ದಾಟ; ಆಸ್ಪತ್ರೆಗೆ ದಾಖಲು
ಸೋನು ನಿಗಮ್ ಅವರು ಇದೀಗ ಗಂಭೀರ ಬೆನ್ನು ನೋವಿನ ಸಮಸ್ಯೆಗೆ ಗುರಿಯಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂಬಯಿ: ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ತಮ್ಮ ಗಾಯನದ ಮೂಲಕವೇ ಮನೆ ಮಾತಗಿರುವ ಸೋನು ನಿಗಮ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋನು ನಿಗಮ್ ಅವರು ಇದೀಗ ಗಂಭೀರ ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದಾರೆ. ದೊಡ್ಡ ಪರ್ಫಾರ್ಮೆನ್ಸ್ ಶೋನಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಅವರೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋದ ಮೂಲಕ ಅವರಿಗೆ ಎದುರಾದ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಗಾಯಕ ಸೋನು ನಿಗಮ್ ಅವರಿಗೆ ತೀವ್ರ ಬೆನ್ನು ಹುರಿ ನೋವು ಕಾಣಿಸಿಕೊಂಡಿದೆ. ಅವರು ನಡೆದಾಡಲು ಸಹ ಕಷ್ಟಪಟ್ಟಿದ್ದಾರೆ. ಸೋನು ನಿಗಮ್ ಅವರಿಗೆ ಸ್ಥಳೀಯರು ಹಾಗೂ ಸಹಾಯಕ ಸಿಬ್ಬಂದಿ ನೆರವಾಗಿದ್ದಾರೆ. ಶೋನಲ್ಲಿ ಹಾಡು ಹಾಡುವಾಗಲೇ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.
ಹಾಡುವಾಗ ಯಾರೋ ಬೆನ್ನಿಗೆ ಸೂಜಿಯಿಂದ ಚುಚ್ಚಿದ ಅನುಭವ ಆಗಿರುವುದಾಗಿಯೂ ಈಗ ಚೇತರಿಸಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ. ಅತಿಯಾದ ಬೆನ್ನು ನೋವಿನಿಂದ ಅವರು ಶೋ ಸ್ಟೇಜ್‌ನ ಹಿಂಭಾಗದಲ್ಲಿ ನಡೆಯುವುದಕ್ಕೂ ಕಷ್ಟಪಟ್ಟಿರುವ ವಿಡಿಯೋ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


