ಹೃದಯಾಘಾತ: ನಿದ್ರೆಯಲ್ಲಿಯೇ ಚಿರನಿದ್ರೆಗೆ ಜಾರಿದ ಕಿರುತೆರೆ ನಟ ವಿಕಾಸ್ ಸೇಥಿ!
ಇಂದು ಬೆಳಿಗ್ಗೆ 6 ಗಂಟೆಗೆ ಅವರನ್ನು ಎಬ್ಬಿಸಲು ಹೋದಾಗ ನಿಧನರಾಗಿದ್ದರು. ಹೃದಯ ಸ್ತಂಭನದಿಂದಾಗಿ ನಿನ್ನೆ ರಾತ್ರಿ ನಿದ್ರೆಯಲ್ಲಿಯೇ ಅವರು ನಿಧನ

ಮುಂಬೈ: ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ, ಕಸೌಟಿ ಜಿಂದಗಿ ಕೆ, ಕಹಿ ತೋ ಹೋಗಾ ಮುಂತಾದ ಧಾರಾವಾಹಿಗಳಿಂದ ಖ್ಯಾತರಾಗಿದ್ದ ನಟ ವಿಕಾಸ್ ಸೇಥಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು.
ಶನಿವಾರ ರಾತ್ರಿ ನಿದ್ರೆಯಲ್ಲಿಯೇ ಚಿರನಿದ್ರೆಗೆ ಜಾರಿದ್ದಾರೆ. ಕುಟುಂಬದ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ನಾಸಿಕ್ ಗೆ ತೆರಳಿದ್ದಾಗ ಈ ದುರ್ಘಟನೆ ನಡೆದಿರುವುದಾಗಿ ಅವರ ಪತ್ನಿ ಜಾನ್ವಿ ಸೇಥಿ ತಿಳಿಸಿದ್ದಾರೆ.
ನಾಸಿಕ್‌ನಲ್ಲಿರುವ ನನ್ನ ತಾಯಿಯ ಮನೆ ತಲುಪಿದ ನಂತರ ವಿಕಾಸ್ ಸೇಥಿಗೆ ವಾಂತಿ ಮತ್ತು ಭೇದಿ ಕಾಣಿಸಿತು. ಆದರೆ, ಆಸ್ಪತ್ರೆಗೆ ಹೋಗಲು ಅವರು ಇಷ್ಟಪಡಲಿಲ್ಲ. ಇಂದು ಬೆಳಿಗ್ಗೆ 6 ಗಂಟೆಗೆ ಅವರನ್ನು ಎಬ್ಬಿಸಲು ಹೋದಾಗ ನಿಧನರಾಗಿದ್ದರು. ಹೃದಯ ಸ್ತಂಭನದಿಂದಾಗಿ ನಿನ್ನೆ ರಾತ್ರಿ ನಿದ್ರೆಯಲ್ಲಿಯೇ ಅವರು ನಿಧನರಾಗಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಜಾನ್ವಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.
ಬಳಿಕ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಮುಂಬೈನ ಕೂಪರ್ ಆಸ್ಪತ್ರೆಗೆ ರವಾನಿಸಿದ್ದು, ಮುಂಬೈನಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದರು. ವಿಕಾಸ್ ಸೇಥಿ ಅವರು ಪತ್ನಿ ಮತ್ತು ಅವಳಿ ಪುತ್ರರನ್ನು ಅಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


