ಬಾಲಿವುಡ್

ಬ್ಲಾಕ್‌ಮೇಲ್ ಮಾಡಲು ಮಕ್ಕಳನ್ನು ಎಳೆದು ತರುತ್ತಿದ್ದಾಳೆ: ಮಾಜಿ ಪತ್ನಿ ಆಲಿಯಾ ವಿರುದ್ಧ ನವಾಜುದ್ದೀನ್ ಸಿದ್ದಿಕಿ ಕಿಡಿ

ನಟ ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿ ಆಲಿಯಾ ಸಿದ್ದಿಕಿ ಅವರು ತನ್ನನ್ನು ಮತ್ತು ಅವರ ಮಕ್ಕಳನ್ನು ತಮ್ಮ ಮನೆಯಿಂದ ಹೊರಹಾಕಿದ್ದಾರೆ ಎಂದು ಹೇಳಿಕೊಂಡ ಕೆಲವು ದಿನಗಳ ನಟ ಕೆಲ ವೈಯಕ್ತಿಕ ಭಾವನೆಗಳನ್ನು ಹೇಳಿಕೊಂಡಿದ್ದಾರೆ.

ಬ್ಲಾಕ್‌ಮೇಲ್ ಮಾಡಲು ಮಕ್ಕಳನ್ನು ಎಳೆದು ತರುತ್ತಿದ್ದಾಳೆ: ಮಾಜಿ ಪತ್ನಿ ಆಲಿಯಾ ವಿರುದ್ಧ ನವಾಜುದ್ದೀನ್ ಸಿದ್ದಿಕಿ ಕಿಡಿ
ಆಲಿಯಾ-ನವಾಜುದ್ದೀನ್ ಸಿದ್ದಿಕಿ
Published On :

ನಟ ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿ ಆಲಿಯಾ ಸಿದ್ದಿಕಿ ಅವರು ತನ್ನನ್ನು ಮತ್ತು ಅವರ ಮಕ್ಕಳನ್ನು ತಮ್ಮ ಮನೆಯಿಂದ ಹೊರಹಾಕಿದ್ದಾರೆ ಎಂದು ಹೇಳಿಕೊಂಡ ಕೆಲವು ದಿನಗಳ ನಟ ಕೆಲ ವೈಯಕ್ತಿಕ ಭಾವನೆಗಳನ್ನು ಹೇಳಿಕೊಂಡಿದ್ದಾರೆ. 

ಇದು ಆರೋಪವಲ್ಲ, ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ತನ್ನ ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ. ಇದರಿಂದಾಗಿ ಅವರು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ನಟ ತನ್ನ ಹೇಳಿಕೆಯಲ್ಲಿ ಆರೋಪಿಸಿದ್ದಾರೆ. ನನ್ನ ಮೌನದಿಂದಾಗಿ ನನ್ನನ್ನು ಎಲ್ಲೆಡೆ ಕೆಟ್ಟ ಮನುಷ್ಯ ಎಂದು ಬಿಂಬಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದ ಕೆಲವರು, ಮಾಧ್ಯಮ ಹಾಗೂ ಕೆಲವು ಮಂದಿ ನನ್ನ ವೈಯಕ್ತಿಕ ವಧೆಯನ್ನು ಬಹಳ ಸಂಭ್ರಮಿಸುತ್ತಿದ್ದಾರೆ ಎಂದರು. 

ಮೊದಲನೆಯದಾಗಿ ನಾನು ಮತ್ತು ಆಲಿಯಾ ಹಲವು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿಲ್ಲ. ನಾವು ಈಗಾಗಲೇ ವಿಚ್ಛೇದನ ಪಡೆದಿದ್ದೇವೆ. ಆದರೆ ಮಕ್ಕಳಿಗಾಗಿ ಕೆಲವು ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ನನ್ನ ಮಕ್ಕಳು ಭಾರತದಲ್ಲಿ ಏಕೆ ಇದ್ದಾರೆ. 45 ದಿನಗಳಿಂದ ಶಾಲೆಗೆ ಹೋಗುತ್ತಿಲ್ಲ ಎಂದು ಯಾರಿಗಾದರೂ ತಿಳಿದಿದೆಯೇ, ದುಬೈನಲ್ಲಿ ಮಕ್ಕಳು ಓದುತ್ತಿದ್ದು ಅವರನ್ನು ಶಾಲೆಗೆ ಕಳಿಸಿ ಎಂದು ಪ್ರತಿದಿನ ನನಗೆ ಸಂದೇಶಗಳು ಬರುತ್ತಿವೆ ಎಂದರು.

ವಿಚ್ಛೇದನ ಪಡೆದ ನಂತರ ಕಳೆದ ಎರಡು ವರ್ಷಗಳಿಂದ ಆಲಿಯಾಗೆ ಪ್ರತಿತಿಂಗಳೂ 10 ಲಕ್ಷ ರುಪಾಯಿ ಹಣ ನೀಡುತ್ತಾ ಬಂದಿದ್ದೇನೆ. ಆಕೆ ದುಬೈಗೆ ಹೋಗುವ ಮುನ್ನ ತಿಂಗಳಿಗೆ 5 ರಿಂದ 7 ಲಕ್ಷ ಹಣ ನೀಡುತ್ತಿದ್ದೇ. ಮಕ್ಕಳ ಫೀಸು, ಮೆಡಿಕಲ್ ಬಿಲ್​ಗಳು, ಪ್ರಯಾಣ ವೆಚ್ಚ ಇನ್ನೂ ಹಲವು ವೆಚ್ಚಗಳನ್ನು ಪ್ರತ್ಯೇಕವಾಗಿ ಭರಿಸುತ್ತಿದ್ದೇನೆ. ಇದು ಮಾತ್ರವೇ ಅಲ್ಲದೆ, ಆಕೆಯೂ ಸಂಪಾದನೆಗೆ ದಾರಿ ಕಂಡುಕೊಳ್ಳಲಿ ಎಂಬ ಕಾರಣಕ್ಕೆ ಆಕೆಯ ಮೂರು ಸಿನಿಮಾಗಳಿಗೆ ನಾನೇ ಬಂಡವಾಳ ಹೂಡಿದೆ. ಇದರಿಂದ ಕೋಟ್ಯಂತರ ರುಪಾಯಿ ಹಣವನ್ನು ನಾನು ಕಳೆದುಕೊಂಡೆ ಎಂದು ನವಾಜುದ್ದೀನ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.