ಒಂದೇ ವಾರದಲ್ಲಿ ವಿಶ್ವದಾದ್ಯಂತ ರೂ. 634 ಕೋಟಿ ದೋಚಿದ 'ಪಠಾಣ್'
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಹೊಸ ಹೊಸ ದಾಖಲೆ ಬರೆಯುತ್ತಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಹೊಸ ಹೊಸ ದಾಖಲೆ ಬರೆಯುತ್ತಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಬಿಡುಗಡೆಯಾಗಿ ಏಳು ದಿನ ಕಳೆದರೂ ಗಳಿಕೆ ವಿಚಾರದಲ್ಲಿ ಕೊಂಚವೂ ಕಡಿಮೆಯಾಗಿಲ್ಲ. ಜನವರಿ 25 ರಂದು ಬಿಡುಗಡೆಯಾದ ಈ ಚಿತ್ರ ಇಲ್ಲಿಯವರೆಗೂ ವಿಶ್ವದಾದ್ಯಂತ ರೂ. 634 ಕೋಟಿ ದೋಚಿದೆ.
ಚಿತ್ರ ರಿಲೀಸ್ ಆಗಿ ಏಳನೇ ದಿನವಾದ ಇಂದು ಹಿಂದಿನಲ್ಲಿ ರೂ. 22 ಕೋಟಿ, ಡಬ್ಬಿಂಗ್ ಆವೃತ್ತಿಯಲ್ಲಿ ರೂ. 1 ಕೋಟಿ ಸೇರಿದಂತೆ ಒಟ್ಟಾರೇ 23 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ದೇಶದಲ್ಲಿ ಒಟ್ಟಾರೇ ರೂ. 28 ಕೋಟಿ ಕೊಳ್ಳೆ ಹೊಡೆದಿದೆ.
ಇನ್ನೂ ವಿದೇಶಗಳಲ್ಲಿ ರೂ. 15 ಕೋಟಿ ರೂ. ಗಳಿಸಿದೆ. ಪಠಾಣ್ ಏಳು ದಿನಗಳಲ್ಲಿ ವಿದೇಶಗಳಲ್ಲಿ ದಾಖಲೆಯ ರೂ. 238. 5 ಕೋಟಿ ಕಲೆಕ್ಷನ್ ಮಾಡಿದೆ.
'ಪಠಾಣ್' ಒಟ್ಟಾರೇ ಇಲ್ಲಿಯವರೆಗೂ ಭಾರತದಲ್ಲಿ (ಹಿಂದಿ ಭಾಷೆಯಲ್ಲಿ ರೂ. 318.50 ಕೋಟಿ, ಡಬ್ಬಿಂಗ್ ವರ್ಸನ್ ನಲ್ಲಿ ರೂ. 11.75 ಕೋಟಿ) 330. 25 ಕೋಟಿ ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


