ಬೀರಬಲ್ ಎಂದೇ ಖ್ಯಾತಿ ಪಡೆದಿದ್ದ 'ಶೋಲೆ' ನಟ ಸತೀಂದರ್ ಕುಮಾರ್ ಖೋಸ್ಲಾ ನಿಧನ
ಬೀರಬಲ್ ಎಂದೇ ಖ್ಯಾತಿ ಪಡೆದಿದ್ದ ಬಾಲಿವುಡ್ ಹಿರಿಯ ನಟ ಸತೀಂದರ್ ಕುಮಾರ್ ಖೋಸ್ಲಾ ಅವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಮುಂಬೈ: ಬೀರಬಲ್ ಎಂದೇ ಖ್ಯಾತಿ ಪಡೆದಿದ್ದ ಬಾಲಿವುಡ್ ಹಿರಿಯ ನಟ ಸತೀಂದರ್ ಕುಮಾರ್ ಖೋಸ್ಲಾ ಅವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸತೀಂದರ್ ಕುಮಾರ್ ಅವರು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮಂಗಳವಾರ ರಾತ್ರಿ ಅವರು ಕಾರ್ಡಿಯಾಕ್ ಅರೆಸ್ಟ್‌ನಿಂದ ಮೃತಪಟ್ಟಿದ್ದಾರೆ ಎಂದು ಅವರ ಪುತ್ರಿ ಶಾಲಿನಿ ತಿಳಿಸಿದ್ದಾರೆ.
1975 ರಲ್ಲಿ ತೆರೆಕಂಡ ಧರ್ಮೇಂದ್ರ ಮತ್ತು ಅಮಿತಾಭ್ ಬಚ್ಚನ್ ಅಭಿನಯದ "ಶೋಲೆ" ಚಿತ್ರದಲ್ಲಿ ಅರ್ಧ ಮೀಸೆಯ ಕೈದಿಯ ಪಾತ್ರದಲ್ಲಿ ಖೋಸ್ಲಾ ಅವರು ಅಭಿನಯಿಸಿದ್ದರು.
ಸತೀಂದರ್ ಕುಮಾರ್ ಅವರು ಹಾಸ್ಯಪಾತ್ರಕ್ಕೆ ಹೆಸರಾಗಿದ್ದರು. ಉಪ್‌ಕಾರ್, ರೋಟಿ ಕಪ್ಡಾ ಔರ್ ಮಕಾನ್, ಕ್ರಾಂತಿ, ನಸೀಬ್, ಯಾರಾನಾ, ಹಮ್ ಹೈ ರಹಿ ಪ್ಯಾರ್ ಕೆ, ಅಂಜಾಮ್ ಸೇರಿ ಅನೇಕ ಸಿನಿಮಾಗಳಲ್ಲಿ ಸತೀಂದರ್ ಕುಮಾರ್ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


