ಬಾಲಿವುಡ್

ಸಾಹಸ ದೃಶ್ಯದ ಶೂಟಿಂಗ್ ವೇಳೆ ಅಕ್ಷಯ್​ ಕುಮಾರ್​ಗೆ ಪೆಟ್ಟು

ಬಡೇ ಮಿಯಾ ಚೋಟೆ ಮಿಯಾ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಮತ್ತು ಟೈಗರ್​ ಶ್ರಾಫ್​ ನಟಿಸುತ್ತಿದ್ದಾರೆ. ಇದರ ಚಿತ್ರೀಕರಣದ ವೇಳೆ ಅಕ್ಷಯ್​ ಕುಮಾರ್​ ಪೆಟ್ಟು ಮಾಡಿಕೊಂಡಿದ್ದಾರೆ.

ಸಾಹಸ ದೃಶ್ಯದ ಶೂಟಿಂಗ್ ವೇಳೆ ಅಕ್ಷಯ್​ ಕುಮಾರ್​ಗೆ ಪೆಟ್ಟು
ಅಕ್ಷಯ್ ಕುಮಾರ್
Published On :

ಬಡೇ ಮಿಯಾ ಚೋಟೆ ಮಿಯಾ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಮತ್ತು ಟೈಗರ್​ ಶ್ರಾಫ್​ ನಟಿಸುತ್ತಿದ್ದಾರೆ. ಇದರ ಚಿತ್ರೀಕರಣದ ವೇಳೆ ಅಕ್ಷಯ್​ ಕುಮಾರ್​ ಪೆಟ್ಟು ಮಾಡಿಕೊಂಡಿದ್ದಾರೆ.

ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗೆ ಅಲಿ ಅಬ್ಬಾಸ್​ ಜಫರ್​ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್​ ವೇಳೆ ಪೆಟ್ಟು ಮಾಡಿಕೊಂಡರೂ ಕೂಡ ಅಕ್ಷಯ್​ ಕುಮಾರ್​ ಅವರು ಚಿತ್ರೀಕರಣ ನಿಲ್ಲಿಸಿಲ್ಲ. ಕೆಲವೇ ನಿಮಿಷಗಳ ಕಾಲ ವಿಶ್ರಾಂತಿ ಪಡೆದ ನಂತರ ಅವರು ಶೂಟಿಂಗ್​ ಮುಂದುವರಿಸಿದ್ದಾರೆ.

ಅಕ್ಷಯ್​ ಕುಮಾರ್​ ಅವರಿಗೆ ತೀವ್ರವಾಗಿ ಗಾಯವಾಗಿಲ್ಲ. ಸಣ್ಣದಾಗಿ ಪೆಟ್ಟಾದ್ದರಿಂದ ಮೊಣಗಾಲಿಕೆ ಪಟ್ಟಿ ಹಾಕಲಾಗಿದೆ. ಅದರ ನಡುವೆಯೂ ಅವರು ಚಿತ್ರೀಕರಣ ಮುಂದುವರಿಸಿದ್ದಾರೆ ಎಂದು ವರದಿ ಆಗಿದೆ. ವಿದೇಶದಲ್ಲಿ ಶೂಟಿಂಗ್​ ಆಗುತ್ತಿರುವುದರಿಂದ ಖರ್ಚು-ವೆಚ್ಚ ಜಾಸ್ತಿ ಆಗುತ್ತದೆ. ಹಾಗಾಗಿ ಚಿತ್ರೀಕರಣ ನಿಲ್ಲಬಾರದು ಎಂದು ಅಕ್ಷಯ್​ ಕುಮಾರ್​ ಕಾಳಜಿ ವಹಿಸಿದ್ದಾರೆ.

ಸಾಮಾನ್ಯವಾಗಿ ಆ್ಯಕ್ಷನ್ ದೃಶ್ಯಗಳಿದ್ದಾಗ ಡ್ಯೂಪ್ ಹಾಕಿ ಚಿತ್ರೀಕರಣ ಮಾಡಲಾಗುತ್ತದೆ. ಆದರೆ, ಅಕ್ಷಯ್ ರಿಯಲ್ ಆಗಿಯೇ ಫೈಟ್ ಮಾಡುವುದು ಜಾಸ್ತಿ. ಆದರೆ ಈಗ ಆ್ಯಕ್ಷನ್ ಸೀನ್‌ ಶೂಟಿಂಗ್ ಮಾಡುವಾಗಲೇ ಅವರು ಗಾಯಗೊಂಡಿದ್ದಾರೆ.

ಬಡೇ ಮಿಯಾ ಚೋಟೆ ಮಿಯಾ' ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಟೈಗರ್ ಶ್ರಾಫ್  ಕೂಡ ನಟಿಸುತ್ತಿದ್ದಾರೆ. ಅವರೊಂದಿಗೆ ಆ್ಯಕ್ಷನ್ ಸೀನ್‌ ಶೂಟಿಂಗ್ ಮಾಡುವಾಗ ಈ ಘಟನೆ ನಡೆದಿದೆ. ಅಂದಹಾಗೆ, ಇದೇನು ದೊಡ್ಡ ಗಾಯವಲ್ಲ, ಗಾಬರಿ ಆಗುವಂತಹದ್ದೇನೂ ಇಲ್ಲ ಎಂದು ಆಪ್ತ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.