ಬಾಲಿವುಡ್

ಎಆರ್ ರೆಹಮಾನ್ ಪುತ್ರನ ಸೆಟ್‌ನಲ್ಲಿ ಅವಘಡ: ಪವಾಡಸದೃಶ್ಯ ಪಾರಾದ ಎಆರ್ ಅಮೀನ್!

ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ಪುತ್ರ ಎಆರ್ ಅಮೀನ್ ಶೂಟಿಂಗ್ ಸೆಟ್‌ನಲ್ಲಿ ಸಂಭವಿಸಿದ ದೊಡ್ಡ ಅಪಘಾತದಿಂದ ಬದುಕುಳಿದ್ದಾರೆ. ಈ ಅಪಘಾತದ ಬಗ್ಗೆ ಅಮೀನ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದು ಆಘಾತದಿಂದ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಎಆರ್ ರೆಹಮಾನ್ ಪುತ್ರನ ಸೆಟ್‌ನಲ್ಲಿ ಅವಘಡ: ಪವಾಡಸದೃಶ್ಯ ಪಾರಾದ ಎಆರ್ ಅಮೀನ್!
ಎಆರ್ ರೆಹಮಾನ್ ಪುತ್ರ
Published On :

ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ಪುತ್ರ ಎಆರ್ ಅಮೀನ್ ಶೂಟಿಂಗ್ ಸೆಟ್‌ನಲ್ಲಿ ಸಂಭವಿಸಿದ ದೊಡ್ಡ ಅಪಘಾತದಿಂದ ಬದುಕುಳಿದ್ದಾರೆ. ಈ ಅಪಘಾತದ ಬಗ್ಗೆ ಅಮೀನ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದು ಆಘಾತದಿಂದ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಎ.ಆರ್.ಅಮಿನ್ ಹಾಡಿನ ಚಿತ್ರೀಕರಣ ವೇಳೆ ವೇದಿಕೆ ಮೇಲೆ ಶ್ಯಾಂಡಲಿಯರ್ ಬಿದ್ದಿತ್ತು. ಅಮೀನ್ ಇನ್ಸ್ಟಾಗ್ರಾಮ್ನಲ್ಲಿ ಸೆಟ್ ನ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕ್ರೇನ್‌ನಲ್ಲಿ ನೇತಾಡುತ್ತಿದ್ದ ಶ್ಯಾಂಡಲಿಯರ್ ಹಾಡಿನ ಚಿತ್ರೀಕರಣದ ಸಮಯದಲ್ಲಿ ವೇದಿಕೆ ಮೇಲೆ ಬಿದ್ದಿತ್ತು. ನಾನು ಸ್ವಲ್ಪದರಲ್ಲೇ ಪಾರಾಗಿದ್ದಾನೆ ಎಂದು ಗಾಯಕ ಹೇಳಿದ್ದಾರೆ. 

ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಅಮೀನ್, ನಾನು ಇಂದು ಸುರಕ್ಷಿತವಾಗಿ ಮತ್ತು ಜೀವಂತವಾಗಿರುವುದು ದೇವರು, ನನ್ನ ಪೋಷಕರು, ಕುಟುಂಬ, ಅಭಿಮಾನಿಗಳು ಮತ್ತು ನನ್ನ ಗುರುಗಳ ಆಶೀರ್ವಾದದಿಂದ. ಕಳೆದ ಮೂರು ರಾತ್ರಿಗಳ ಹಿಂದೆ, ನಾನು ಹಾಡಿನ ಚಿತ್ರೀಕರಣದಲ್ಲಿದ್ದೆ. ನಾನು ಕ್ಯಾಮೆರಾ ಮುಂದೆ ಪ್ರದರ್ಶನ ನೀಡುತ್ತಿರುವಾಗ ತಂಡವು  ಸುರಕ್ಷತೆಯನ್ನು ನೋಡಿಕೊಂಡಿದೆ ಎಂದು ನನಗೆ ಖಚಿತವಾಗಿತ್ತು. ನಾನು ಮಧ್ಯದಲ್ಲಿದ್ದಾಗ, ಕ್ರೇನ್‌ಗೆ ನೇತಾಡುತ್ತಿದ್ದ ಶ್ಯಾಂಡಲಿಯರ್ ಬಿದ್ದಿತ್ತು. ಅದು ಅಲ್ಲಿ ಇಲ್ಲಿ ಕೆಲವು ಇಂಚು ಚಲಿಸಿದ್ದರೆ, ಕೆಲ ಸೆಕೆಂಡುಗಳು ಆಚೀಚೆ ಆಗಿದ್ದರೂ ಇಡೀ ರಿಗ್ ನಮ್ಮ ತಲೆಯ ಮೇಲೆ ಬೀಳಿತ್ತಿತ್ತು. ನಾನು ಮತ್ತು ನನ್ನ ತಂಡ ಆಘಾತಕ್ಕೊಳಗಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ. 

ಶುಕ್ರವಾರ ವಿಐಟಿ ಚೆನ್ನೈನಲ್ಲಿ ನೇರ ಪ್ರದರ್ಶನದ ವೇಳೆ ಗಾಯಕ ಬೆನ್ನಿ ದಯಾಳ್ ಅವರ ತಲೆಯ ಮೇಲೆ ಡ್ರೋನ್ ಬಿದ್ದು ಗಾಯಗೊಂಡಿದ್ದರು. ಈ ಘಟನೆಯಲ್ಲಿ ಅವರ ತಲೆಯ ಹಿಂಭಾಗದಲ್ಲಿ ಗಾಯದ ಗುರುತುಗಳಿದ್ದು, ಅವರ ಎರಡು ಬೆರಳುಗಳಿಗೂ ಗಾಯವಾಗಿದೆ. ಜೊತೆಗೆ ವಿಡಿಯೋ ಒಂದನ್ನು ಶೇರ್ ಮಾಡಿ ತಮ್ಮ ಆರೋಗ್ಯದ ಬಗ್ಗೆ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.