ಮೈ ತುಂಬಾ ಬಟ್ಟೆ ಹಾಕಿದ್ದಕ್ಕೆ ನನ್ನ ಗತಿ ನೋಡಿ: ಉರ್ಫಿ ಜಾವೇದ್
ತುಂಡುಡುಗೆ ಮೂಲಕ ಸದಾ ಸುದ್ದಿಯಲ್ಲಿರುವ ಮಾಡೆಲ್ ಉರ್ಫಿ ಜಾವೇದ್ ಕೆಲವೊಮ್ಮೆ ಟ್ರೋಲ್ ಗೂ ಒಳಗಾಗುತ್ತಿರುತ್ತಾರೆ.

ತುಂಡುಡುಗೆ ಮೂಲಕ ಸದಾ ಸುದ್ದಿಯಲ್ಲಿರುವ ಮಾಡೆಲ್ ಉರ್ಫಿ ಜಾವೇದ್ ಕೆಲವೊಮ್ಮೆ ಟ್ರೋಲ್ ಗೂ ಒಳಗಾಗುತ್ತಿರುತ್ತಾರೆ.
ಈ ವೇಳೆ ತಾನು ತುಂಡುಡುಗೆ ಏಕೆ ಧರಿಸುತ್ತೇನೆ ಎಂದು ಉರ್ಫಿ ಜಾವೇದ್ ಬಹಿರಂಗಪಡಿಸಿದ್ದಾರೆ. ಉರ್ಫಿ ಜಾವೇದ್ ಇಂತಹ ಬಟ್ಟೆಗಳನ್ನು ಧರಿಸುವುದರ ಹಿಂದೆ ಆರೋಗ್ಯದ ಸಮಸ್ಯೆಯನ್ನು ಉಲ್ಲೇಖಿಸಿದ್ದಾರೆ. ಸ್ಕಿನ್ ಅಲರ್ಜಿ ಆಗುವುದರಿಂದ ಸಣ್ಣ ಬಟ್ಟೆಗಳನ್ನು ಧರಿಸುತ್ತೇನೆ ಎನ್ನುತ್ತಾರೆ. ಅಲ್ಲದೆ ಉರ್ಫಿ ತನ್ನ ಕಾಲುಗಳಿಗೆ ಆಗಿರುವ ಅಲರ್ಜಿಯ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.
ಉರ್ಫಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು ಇದರಲ್ಲಿ ಅವರು ತಮ್ಮ ಕಾಲುಗಳ ಮೇಲಿನ ಗಾಯಗಳನ್ನು ತೋರಿಸಿದ್ದಾರೆ. ನಾನು ಉಣ್ಣೆಯ ಬಟ್ಟೆ ಅಥವಾ ಪೂರ್ಣ ಬಟ್ಟೆಗಳನ್ನು ಧರಿಸಿದಾಗ ಈ ರೀತಿ ಆಗುತ್ತದೆ ನೋಡಿ ಎಂದು ಉರ್ಫಿ ಹೇಳುತ್ತಾರೆ. ನನ್ನ ದೇಹಕ್ಕೆ ಬಟ್ಟೆ ಅಲರ್ಜಿಯಾಗಿದೆ. ಇದು ದೊಡ್ಡ ಸಮಸ್ಯೆಯಾಗಿದೆ. ಈ ಕಾರಣದಿಂದಲೇ ನಾನು ಬಟ್ಟೆಗಳನ್ನು ಧರಿಸಲು ಇಷ್ಟಪಡುವುದಿಲ್ಲ ಎಂದರು.
ಉರ್ಫಿಯ ಈ ವೀಡಿಯೊ ನೋಡಿದ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಇದು ಹೇಗೆ ಆಯಿತು ಎಂದು ಜನರು ಕೇಳಿದ್ದಾರೆ. ಪಾಪದ ಮಡಕೆ ತುಂಬಿದೆ ಎಂದು ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಹಾಗಾದರೆ ನಿಮ್ಮ ಬಾಲ್ಯದಲ್ಲಿ ನೀವು ಹೇಗೆ ಶಾಲೆಗೆ ಹೋಗಿದ್ದೀರಿ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಉರ್ಫಿ ಜಾವೇದ್ ದುಬೈಗೆ ಹೋಗಿದ್ದಳು. ಚಿತ್ರೀಕರಣದ ವೇಳೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದರು. ಸರಿಯಾದ ಸಂಪರ್ಕದ ಕೊರತೆಯಿಂದಾಗಿ ಅವರ ತಂಡವು ತಪ್ಪಾದ ಸಮಯದಲ್ಲಿ ಶೂಟಿಂಗ್ ಮಾಡುತ್ತಿದೆ. ಈ ಕಾರಣಕ್ಕಾಗಿ ಆಕೆಯನ್ನು ವಶಕ್ಕೆ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


