ಚಲಿಸುತ್ತಿದ್ದ ರೈಲಿನ ಫುಟ್ ಬೋರ್ಡ್ ನಲ್ಲಿ ಕುಳಿತ ನಟ ಸೋನು ಸೂದ್, ವಿರೋಧದ ನಂತರ ಕ್ಷಮೆಯಾಚನೆ! ವಿಡಿಯೋ!
ಕಳೆದೆರಡು ವರ್ಷಗಳಲ್ಲಿ ಮಾಡಿದ್ದ ಸಮಾಜಮುಖಿ ಕೆಲಸಗಳಿಂದ ಫೇಮಸ್ ಆಗಿದ್ದ ನಟ ಸೋನು ಸೂದ್ ಇತ್ತೀಚೆಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೋನು ಸೂದ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹೊಸ ವೀಡಿಯೊವನ್ನು ಹಂಚಿಕೊಂಡಿದ್ದು ಇದು ಟೀಕೆಗೆ ಗುರಿಯಾಗಿತ್ತು.

ಮುಂಬೈ: ಕಳೆದೆರಡು ವರ್ಷಗಳಲ್ಲಿ ಮಾಡಿದ್ದ ಸಮಾಜಮುಖಿ ಕೆಲಸಗಳಿಂದ ಫೇಮಸ್ ಆಗಿದ್ದ ನಟ ಸೋನು ಸೂದ್ ಇತ್ತೀಚೆಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೋನು ಸೂದ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹೊಸ ವೀಡಿಯೊವನ್ನು ಹಂಚಿಕೊಂಡಿದ್ದು ಇದು ಟೀಕೆಗೆ ಗುರಿಯಾಗಿತ್ತು.
ಸೋನು ಸೂದ್ ಹಂಚಿಕೊಂಡಿದ್ದ ವಿಡಿಯೋದಲ್ಲಿ ಅವರು ರೈಲಿನ ಫುಟ್ ಬೋರ್ಡ್ ನಲ್ಲಿ ಕುರಿತು ಪ್ರಯಾಣಿಸಿದ್ದರು. ಇದಕ್ಕೆ ಉತ್ತರ ರೈಲ್ವೇಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಬಗ್ಗೆ ಟ್ವೀಟ್ ಮಾಡಿದ್ದ ರೈಲ್ವೇಸ್ 'ಡಿಯರ್ ಸೋನು ಸೂದ್, ನೀವು ದೇಶ ಮತ್ತು ಪ್ರಪಂಚದ ಲಕ್ಷಾಂತರ ಜನರಿಗೆ ಆದರ್ಶವಾಗಿದ್ದೀರಿ. ರೈಲು ಮೆಟ್ಟಿಲುಗಳಲ್ಲಿ ಪ್ರಯಾಣಿಸುವುದು ಅಪಾಯಕಾರಿ. ಈ ರೀತಿಯ ವೀಡಿಯೊ ನಿಮ್ಮ ಅಭಿಮಾನಿಗಳಿಗೆ ತಪ್ಪು ಸಂದೇಶವನ್ನು ಕಳುಹಿಸಬಹುದು. ದಯವಿಟ್ಟು ಇದನ್ನು ಮಾಡಬೇಡಿ! ಸುಗಮ ಮತ್ತು ಸುರಕ್ಷಿತ ಪ್ರಯಾಣವನ್ನು ಆನಂದಿಸಿ ಎಂದು ಟ್ವೀಟಿಸಿತ್ತು.
ಕ್ಷಮೆ ಕೇಳಿದ ನಟ
ಈ ಟ್ವೀಟ್ ಗೆ ರೀಟ್ವೀಟ್ ಮಾಡುವ ಮೂಲಕ ಸೋನು ಸೂದ್ ರೈಲ್ವೇಸ್ ಕ್ಷಮೆಯನ್ನೂ ಕೇಳಿದ್ದಾರೆ. ರೈಲಿನ ಬಾಗಿಲಲ್ಲಿ ಇನ್ನೂ ಜೀವನ ಸಾಗುತ್ತಿರುವ ಲಕ್ಷಾಂತರ ಬಡವರು ಹೇಗೆ ಭಾವಿಸುತ್ತಿದ್ದಾರೆಂದು ನೋಡಲು ನಾನು ಇಲ್ಲಿ ಕುಳಿತಿದ್ದೆ. ಈ ಸಂದೇಶಕ್ಕಾಗಿ ಮತ್ತು ದೇಶದ ರೈಲ್ವೆ ವ್ಯವಸ್ಥೆಯನ್ನು ಸುಧಾರಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದಿದ್ದಾರೆ.
ಚಲಿಸುತ್ತಿದ್ದ ರೈಲಿನ ಫುಟ್ ಬೋರ್ಡ್ ನಲ್ಲಿ ಸಾಹಸ ಮಾಡಲು ಹೋಗಿ ಎಷ್ಟೊ ಯುವಕರು ತಮ್ಮ ಜೀವ ಕಳೆದುಕೊಂಡಿರುವ ಘಟನೆಗಳು ದೇಶಾದ್ಯಂತ ವರದಿಯಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


