ಬಾಲಿವುಡ್

ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ಮಾಜಿ ಪತ್ನಿ ಆಲಿಯಾ!

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಮಾಜಿ ಪತ್ನಿ ಆಲಿಯಾ ಅತ್ಯಾಚಾರದ ದೂರು ದಾಖಲಿಸಿದ್ದಾರೆ.

ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ಮಾಜಿ ಪತ್ನಿ ಆಲಿಯಾ!
ನವಾಜುದ್ದೀನ್ ಸಿದ್ದಿಕಿ-ಆಲಿಯಾ
Published On :

ಮುಂಬೈ: ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಮಾಜಿ ಪತ್ನಿ ಆಲಿಯಾ ಅತ್ಯಾಚಾರದ ದೂರು ದಾಖಲಿಸಿದ್ದಾರೆ.

ಅಲಿಯಾ ಸಿದ್ದಿಕಿ ಅವರು ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅವರು ನಟನ ವಿರುದ್ಧ ಗಂಭೀರ ಆರೋಪ ಮಾಡುತ್ತಿರುವುದು ಕಂಡುಬಂದಿದೆ. ವಿಡಿಯೋದಲ್ಲಿ ಅಲಿಯಾ ಸಿದ್ದಿಕಿ ಅಳುತ್ತಾ ನವಾಜುದ್ದೀನ್ ಸಿದ್ದಿಕಿ ತನ್ನ ಮಕ್ಕಳನ್ನು ತನ್ನಿಂದ ಕಸಿದುಕೊಳ್ಳಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಅಲಿಯಾ ನಟನ ಮೇಲೆ ಅತ್ಯಾಚಾರದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ವೀಡಿಯೊದಲ್ಲಿ ಆಲಿಯಾ, 'ಆಗಾಗ್ಗೆ ಶ್ರೇಷ್ಠ ವ್ಯಕ್ತಿಯಾಗಲು ಪ್ರಯತ್ನಿಸುವ ಮಹಾನ್ ನಟ. ನನ್ನ ಮುಗ್ಧ ಮಗುವನ್ನು ಅಕ್ರಮ ಎಂದು ಕರೆಯುತ್ತಿರುವ ಹೃದಯಹೀನ ವ್ಯಕ್ತಿ. ನಿನ್ನೆಯೇ ಆತನ ವಿರುದ್ಧ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು (ಪುರಾವೆ ಸಹಿತ) ದಾಖಲಾಗಿದೆ. ಏನೇ ಆಗಲಿ ನನ್ನ ಮುಗ್ಧ ಮಕ್ಕಳನ್ನು ಈ ಹೃದಯಹೀನನ ಕೈಗಳಲ್ಲಿ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ನವಾಜ್ ನಿನ್ನೆ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ, ಅದರಲ್ಲಿ ಅವರು ಮಗುವಿನ ಪಾಲನೆಯನ್ನು ಬಯಸುತ್ತಾರೆ ಎಂದು ಹೇಳುತ್ತಾರೆ. ಆದರೆ ಮಗುವಿನ ಲಾಲನೆ ಪಾಲನೆ ಗೊತ್ತಿರದವರಿಗೆ ಮಗುವನ್ನು ಕೊಟ್ಟರೆ ಮುಂದೇನಾಗುತ್ತೆ ಎಂದು ಹೇಳಬೇಕಾಗಿಲ್ಲ.

ಮಕ್ಕಳ ಬಗ್ಗೆ ಮಾತನಾಡುತ್ತಾ, ಆಲಿಯಾ ನವಾಜ್ ತನ್ನ ಅಧಿಕಾರವನ್ನು ತಪ್ಪಾಗಿ ಬಳಸುತ್ತಿದ್ದಾರೆ. ಅವರು ಹಣದಿಂದ ಏನನ್ನಾದರೂ ಖರೀದಿಸಬಹುದು, ಆದರೆ ನನ್ನ ಮಕ್ಕಳನ್ನು ನನ್ನಿಂದ ಕಸಿದುಕೊಳ್ಳಲಾಗುವುದಿಲ್ಲ. ನವಾಜುದ್ದೀನ್ ಮತ್ತು ತನ್ನ ಆಲಿಯಾ ಸಂಬಂಧದ ಬಗ್ಗೆ ಆಲಿಯಾ ಹೇಳುತ್ತಾರೆ, 'ನೀವು ನನ್ನನ್ನು ನಿಮ್ಮ ಹೆಂಡತಿ ಎಂದು ಪರಿಗಣಿಸಲಿಲ್ಲ, ಆದರೆ ನಾನು ಯಾವಾಗಲೂ ನಿಮ್ಮನ್ನು ನನ್ನ ಪತಿ ಎಂದು ಪರಿಗಣಿಸಿದ್ದೇನೆ. ನೀವು ನನ್ನ ಮಕ್ಕಳನ್ನು ನನ್ನಿಂದ ಕಸಿದುಕೊಳ್ಳುತ್ತಿದ್ದೀರಿ. ನ್ಯಾಯಾಲಯದ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ, ತೀರ್ಪು ತನ್ನ ಪರವಾಗಿ ಬರುತ್ತದೆ ಎಂದು ಆಲಿಯಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.