ಬಾಲಿವುಡ್

ಕಂಗನಾರನ್ನು ನಾನು ಇಂಪಾರ್ಟೆಂಟ್ ಎಂದು ಪರಿಗಣಿಸಿಲ್ಲ; ಅವರು ಹೇಗೆ ಮುಖ್ಯವಾದ ಹೇಳಿಕೆ ನೀಡಲು ಸಾಧ್ಯ? ಅವರನ್ನು ಬಿಡಿ, ಮುಂದೆ ಹೋಗೋಣ!

ನಟಿ ಕಂಗನಾ ರಣಾವತ್​ ಅವರು ವಿವಾದಗಳಿಂದಲೇ ಹೆಚ್ಚು ಸುದ್ದಿ ಆಗುತ್ತಾರೆ. ಬಾಲಿವುಡ್​ನ ಅನೇಕರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ಈಗ ಏಕಾಏಕಿ ಜಾವೇದ್​ ಅಖ್ತರ್​ ಅವರನ್ನು ಕಂಗನಾ ರಣಾವತ್​ ಹೊಗಳಿದ್ದಾರೆ.

ಕಂಗನಾರನ್ನು ನಾನು ಇಂಪಾರ್ಟೆಂಟ್ ಎಂದು ಪರಿಗಣಿಸಿಲ್ಲ; ಅವರು ಹೇಗೆ ಮುಖ್ಯವಾದ ಹೇಳಿಕೆ ನೀಡಲು ಸಾಧ್ಯ? ಅವರನ್ನು ಬಿಡಿ, ಮುಂದೆ ಹೋಗೋಣ!
ಕಂಗನಾ ರಣಾವತ್
Published On :

ನಟಿ ಕಂಗನಾ ರಣಾವತ್​ ಅವರು ವಿವಾದಗಳಿಂದಲೇ ಹೆಚ್ಚು ಸುದ್ದಿ ಆಗುತ್ತಾರೆ. ಬಾಲಿವುಡ್​ನ ಅನೇಕರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ಈಗ ಏಕಾಏಕಿ ಜಾವೇದ್​ ಅಖ್ತರ್​  ಅವರನ್ನು ಕಂಗನಾ ರಣಾವತ್​ ಹೊಗಳಿದ್ದಾರೆ.

ಆದರೆ ಅವರ ಮಾತುಗಳಿಂದ ಜಾವೇದ್​ ಅಖ್ತರ್​ ಸಂತಸಗೊಂಡಿಲ್ಲ. ಬದಲಿಗೆ, ‘ಕಂಗನಾ ರಣಾವತ್​ ಮುಖ್ಯವೇ ಅಲ್ಲ’ ಎಂದು ಹೇಳಿದ್ದಾರೆ.  ಹಿರಿಯ ಗೀತರಚನಾಕಾರ ಜಾವೇದ್​ ಅಖ್ತರ್​ ಅವರು ಇತ್ತೀಚೆಗೆ ಪಾಕಿಸ್ತಾನದಲ್ಲಿ ನೀಡಿದ ಹೇಳಿಕೆ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. 26/11ರ ಮುಂಬೈ ದಾಳಿ ನಡೆಸಿದ ಭಯೋತ್ಪಾದಕರು ಪಾಕಿಸ್ತಾನದವರೇ ಹೊರತು ಬೇರೆ ದೇಶದವರಲ್ಲ ಎಂದು ಜಾವೇದ್​ ಅಖ್ತರ್​ ಅವರು ಪಾಕ್​ ನೆಲದಲ್ಲಿಯೇ ನಿಂತು ಗುಡುಗಿದ್ದಾರೆ. ಅವರ ಧೈರ್ಯವಂತಿಕೆಗೆ ಕಂಗನಾ ಕೂಡ ಭೇಷ್​ ಎಂದಿದ್ದಾರೆ. ಈ ಕುರಿತು ಅವರು ಟ್ವೀಟ್​ ಮಾಡಿದ್ದಾರೆ.

‘ಜಾವೇದ್​ ಅವರ ಕವಿತೆ ಕೇಳಿದಾಗಲೆಲ್ಲ ಸರಸ್ವತಿಯೇ ಅವರಿಗೆ ಆಶೀರ್ವಾದ ಮಾಡಿದ್ದಾಳೆ ಎನಿಸುತ್ತದೆ. ಅವರಲ್ಲಿ ಸತ್ಯ ಇರುವ ಕಾರಣಕ್ಕೇ ಆ ದೈವಿ ಗುಣ ಇದೆ. ಜೈ ಹಿಂದ್​. ಪಾಕಿಸ್ತಾನದವರ ಮನೆಗೆ ನುಗ್ಗಿ ಹೊಡೆದಿದ್ದಾರೆ’ ಎಂದು ಕಂಗನಾ ರಣಾವತ್​ ಅವರು ಪೋಸ್ಟ್​ ಮಾಡಿದ್ದಾರೆ.

ಕಂಗನಾ ರಣಾವತ್​ ಅವರ ಹೇಳಿಕೆಗೆ ಪ್ರತಿಕ್ರಿಯೆ ಪಡೆಯಲು ಮಾಧ್ಯಮದವರು ಜಾವೇದ್​ ಅಖ್ತರ್​ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಜಾವೇದ್​ ಅವರು, ‘ಕಂಗನಾ ಅವರನ್ನು ನಾನು ಮುಖ್ಯ ಎಂದು ಪರಿಗಣಿಸಿಲ್ಲ. ಅವರು ಹೇಗೆ ಮುಖ್ಯವಾದ ಹೇಳಿಕೆ ನೀಡಲು ಸಾಧ್ಯ? ಅವರನ್ನು ಬಿಡಿ, ಮುಂದೆ ಹೋಗೋಣ’ ಎಂದು ಜಾವೇದ್​ ಅಖ್ತರ್​ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.