ಬಾಲಿವುಡ್

ಒಪ್ಪಿಗೆಯಿಲ್ಲದೆ ತೆಗೆದ ಮನೆಯೊಳಗಿನ ಫೋಟೋಗಳು; ಖಾಸಗಿತನದ ಮೇಲೆ ಸಂಪೂರ್ಣ ಆಕ್ರಮಣ: ನಟಿ ಆಲಿಯಾ ಭಟ್

ತಾನು ಮನೆಯೊಳಗಿದ್ದಾಗ ಫೋಟೋಗ್ರಾಫರ್ ತೆಗೆದಿರುವ ಫೋಟೋಗಳು ಖಾಸಗಿತನದ ಸಂಪೂರ್ಣ ಆಕ್ರಮಣವಾಗಿದೆ ಎಂದು ಬಾಲಿವುಡ್ ನಟಿ ಆಲಿಯಾ ಭಟ್ ಹೇಳಿದ್ದಾರೆ.

ಒಪ್ಪಿಗೆಯಿಲ್ಲದೆ ತೆಗೆದ ಮನೆಯೊಳಗಿನ ಫೋಟೋಗಳು; ಖಾಸಗಿತನದ ಮೇಲೆ ಸಂಪೂರ್ಣ ಆಕ್ರಮಣ: ನಟಿ ಆಲಿಯಾ ಭಟ್
ಬಾಲಿವುಡ್ ನಟಿ ಆಲಿಯಾ ಭಟ್
Published On :

ಮುಂಬೈ: ತಾನು ಮನೆಯೊಳಗಿದ್ದಾಗ ಫೋಟೋಗ್ರಾಫರ್  ತೆಗೆದಿರುವ ಫೋಟೋಗಳು ಖಾಸಗಿತನದ ಸಂಪೂರ್ಣ ಆಕ್ರಮಣವಾಗಿದೆ ಎಂದು ಬಾಲಿವುಡ್ ನಟಿ ಆಲಿಯಾ ಭಟ್ ಹೇಳಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ರೀತಿ ಫೋಸ್ಟ್ ಮಾಡಿರುವ  ನಟಿ, ಮುಂಬೈ ಪೊಲೀಸರಿಗೆ ಅದನ್ನು ಟ್ಯಾಗ್ ಮಾಡಿದ್ದಾರೆ. ಇಂದು ಎಲ್ಲಾ ಮಿತಿಗಳನ್ನು ಮೀರಲಾಗಿದೆ ಎಂದು  ಬರೆದುಕೊಂಡಿದ್ದಾರೆ. 

ಫೋಟೋಗಳನ್ನು ಹಂಚಿಕೊಂಡಿರುವ ಆಲಿಯಾ ಭಟ್,  “ನೀವು ನನ್ನನ್ನು ತಮಾಷೆ ಮಾಡುತ್ತಿದ್ದೀರಾ? ನಾನು ನನ್ನ ಮನೆಯಲ್ಲಿದ್ದೆ, ಮಧ್ಯಾಹ್ನದ ನಂತರ ಸಾಮಾನ್ಯವಾಗಿ ನನ್ನ ಕೊಠಡಿಯಲ್ಲಿ ಕುಳಿತಿದ್ದಾಗ ಯಾರೂ ನನನ್ನು ಗಮನಿಸುತ್ತಿರುವುದಾಗಿ ಅನಿಸಿತು. ನಾನು ತಲೆಯೆತ್ತಿ ನೋಡಿದಾಗ ಪಕ್ಕದ ಕಟ್ಟಡದ ಟೆರೇಸ್‌ನಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಕಡೆಗೆ ಕ್ಯಾಮೆರಾ ಹಿಡಿದಿರುವುದನ್ನು ಕಂಡೆ. ಯಾವ ಜಗತ್ತಿನಲ್ಲಿ ಇದು ಸರಿ ಮತ್ತು ಇದನ್ನು ಅನುಮತಿಸಲಾಗಿದೆಯೇ? ಇದು ಬೇರೊಬ್ಬರ ಖಾಸಗಿತನದ ಸಂಪೂರ್ಣ ಆಕ್ರಮಣವಾಗಿದೆ.  ಕೆಲವೊಂದು ಮಿತಿಗಳಿವೆ, ಅವುಗಳನ್ನು ಮೀರಬಾರದು. ಇಂದು ಆ ಎಲ್ಲಾ ಮಿತಿಗಳನ್ನು ಮೀರಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. 

Story image

ಈ ಫೋಸ್ಟ್ ಗೆ ಅರ್ಜುನ್ ಕಫೂರ್, ಅಲಿಯಾ ಸಹೋದರಿ ಶಾಹೀನ್ ಭಟ್, ತಾಯಿ ಸೋನಿ ರಜ್ದಾನ್, ಅನುಷ್ಕಾ ಶರ್ಮಾ, ಜಾನ್ವಿ ಕಫೂರ್, ಕರಣ್ ಜೋಹರ್ ಮತ್ತು ಸ್ವರಾ ಭಾಸ್ಕರ್ ಸೇರಿದಂತೆ ಇತರ ಅನೇಕ ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.