100 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್, ಆಲಿಯಾ ಭಟ್ ಅಭಿನಯದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'!
ಕರಣ್ ಜೋಹರ್ ನಿರ್ದೇಶನದ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟಿಸಿರುವ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಗಲ್ಲಾಪೆಟ್ಟಿಗೆಯಲ್ಲಿ 105.08 ಕೋಟಿ ರೂ. ಸಂಗ್ರಹಿಸಿದೆ ಎಂದು ಧರ್ಮ ಪ್ರೊಡಕ್ಷನ್ಸ್ ಸೋಮವಾರ ಪ್ರಕಟಿಸಿದೆ.

ಮುಂಬೈ: ಕರಣ್ ಜೋಹರ್ ನಿರ್ದೇಶನದ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟಿಸಿರುವ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಗಲ್ಲಾಪೆಟ್ಟಿಗೆಯಲ್ಲಿ 105.08 ಕೋಟಿ ರೂ. ಸಂಗ್ರಹಿಸಿದೆ ಎಂದು ಧರ್ಮ ಪ್ರೊಡಕ್ಷನ್ಸ್ ಸೋಮವಾರ ಪ್ರಕಟಿಸಿದೆ.
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾವು ವಿಭಿನ್ನ ಸಂಸ್ಕೃತಿ ಮತ್ತು ಸಾಮಾಜಿಕ ಹಿನ್ನೆಲೆಯ ದಂಪತಿಗಳಾದ ರಾಕಿ ಮತ್ತು ರಾಣಿ ನಡುವಿನ ಪ್ರೇಮಕಥೆಯನ್ನು ಹೇಳುತ್ತದೆ.
ಧರ್ಮ ಪ್ರೊಡಕ್ಷನ್ಸ್ ಟ್ವಿಟರ್ನಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಕುರಿತು ಮಾಹಿತಿ ಹಂಚಿಕೊಂಡಿದೆ.
'ಇಸ್ ಕಹಾನಿ ಕಿ ಜೀತ್ ಧೂಮ್ ಧಾಮ್ ಸೆ ಹೋ ರಹೀ ಹೈ ಬಾಕ್ಸ್ ಆಫೀಸ್ನಲ್ಲಿ! ಆಪ್ಕೆ ಜೈಸಾ ಲವ್ ಹೈ ತೋ ಸಚ್ ಮೇ ಸಬ್ ಹೈ!' ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದೆ.
ಪ್ರೊಡಕ್ಷನ್ ಹೌಸ್ ಪ್ರಕಾರ, 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಬಿಡುಗಡೆಯಾದ ಹತ್ತನೇ ದಿನದಲ್ಲಿ 13.5 ಕೋಟಿ ರೂ. ಗಳಿಸುವ ಮೂಲಕ ಒಟ್ಟು ಗಳಿಕೆಯನ್ನು 105.08 ಕೋಟಿ ರೂ.ಗೆ ತಲುಪಿಸಿದೆ.
ಕರಣ್ ಜೋಹರ್ ಅವರು ಚಿತ್ರರಂಗಕ್ಕೆ ಪ್ರವೇಶಿಸಿದ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಿರ್ದೇಶಿಸಿದ ಫ್ಯಾಮಿಲಿ ಎಂಟರ್ಟೈನರ್ನಲ್ಲಿ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಜೊತೆಗೆ ತೋಟ ರಾಯ್ ಚೌಧರಿ, ಚುರ್ನಿ ಗಂಗೂಲಿ, ಅಮೀರ್ ಬಶೀರ್, ಕ್ಷಿತಿ ಜೋಗ್, ಅಂಜಲಿ ಆನಂದ್ ಮತ್ತು ನಮಿತ್ ದಾಸ್ ನಟಿಸಿದ್ದಾರೆ.
ಈ ಸಿನಿಮಾ ಜುಲೈ 28ರಂದು ದೇಶದಾದ್ಯಂತ ತೆರೆ ಕಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


