ಬಾಲಿವುಡ್

'ನಿನ್ನನ್ನು ಹೊಡೆದು ಸಾಯಿಸಬೇಕು': ನಿರ್ದೇಶಕರ ಕಚೇರಿಯಿಂದ ಉರ್ಫಿ ಜಾವೇದ್‌ಗೆ ಬೆದರಿಕೆ; ಎಫ್‌ಐಆರ್ ದಾಖಲು!

ತನ್ನ ವಿಭಿನ್ನ ಬಟ್ಟೆ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುವ ಉರ್ಫಿ ಜಾವೇದ್‌ಗೆ ಮತ್ತೊಮ್ಮೆ ಬೆದರಿಕೆ ಬಂದಿದೆ. ನಿರ್ದೇಶಕ ನೀರಜ್ ಪಾಂಡೆ ಅವರ ಕಚೇರಿಯಿಂದ ಯಾರೋ ನಟಿಗೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ನಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್‌ಐಆರ್ ಕೂಡ ದಾಖಲಿಸಿದ್ದಾರೆ.

'ನಿನ್ನನ್ನು ಹೊಡೆದು ಸಾಯಿಸಬೇಕು': ನಿರ್ದೇಶಕರ ಕಚೇರಿಯಿಂದ ಉರ್ಫಿ ಜಾವೇದ್‌ಗೆ ಬೆದರಿಕೆ; ಎಫ್‌ಐಆರ್ ದಾಖಲು!
ಉರ್ಫಿ ಜಾವೇದ್
Published On :

ಮುಂಬೈ: ತನ್ನ ವಿಭಿನ್ನ ಬಟ್ಟೆ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುವ ಉರ್ಫಿ ಜಾವೇದ್‌ಗೆ ಮತ್ತೊಮ್ಮೆ ಬೆದರಿಕೆ ಬಂದಿದೆ. ನಿರ್ದೇಶಕ ನೀರಜ್ ಪಾಂಡೆ ಅವರ ಕಚೇರಿಯಿಂದ ಯಾರೋ ನಟಿಗೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ನಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್‌ಐಆರ್ ಕೂಡ ದಾಖಲಿಸಿದ್ದಾರೆ. 

ನಟಿ ಸಾಕಷ್ಟು ವೀಡಿಯೊಗಳು ಮತ್ತು ಫೋಟೋಗಳನ್ನು Instagram ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇನ್ನು ಉರ್ಫಿ ಜಾವೇದ್ ಅಸ್ವಸ್ಥ ಸ್ಥಿತಿಯಲ್ಲಿ ಪೊಲೀಸ್ ಠಾಣೆಗೆ ಹೋಗಿ ಎಫ್‌ಐಆರ್ ದಾಖಲಿಸಿದ್ದಾರೆ. ಬಟ್ಟೆಯ ಆಯ್ಕೆಗೆ ಯಾರೋ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಹಲ್ಲೆ ನಡೆಸುವುದಾಗಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ನಟಿಯ ಕಾರಿನ ನಂಬರ್ ಪ್ಲೇಟ್ ತನ್ನ ಬಳಿ ಇದೆ ಎಂದು ಆರೋಪಿಸಿ ಆ ಮೂಲಕವೂ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಮೊದಲಿಗೆ ನೀರಜ್ ಪಾಂಡೆ ಅವರ ಕಚೇರಿಯಿಂದ ಯಾರೋ ನನಗೆ ಕರೆ ಮಾಡಿ ನಾನು ನಿರ್ದೇಶಕನ ಸಹಾಯಕ ಮಾತನಾಡುತ್ತಿರುವುದು ಎಂದು ಹೇಳಿದರು. ಅಲ್ಲದೆ ನೀರಜ್ ಪಾಂಡೆ ನನ್ನನ್ನು ಭೇಟಿಯಾಗಲು ಬಯಸುತ್ತಿದ್ದಾರೆ ಎಂದು ಹೇಳಿದರು. ಹಾಗಾಗಿ ಭೇಟಿಯಾಗುವ ಮೊದಲು ಯೋಜನೆಯ ಎಲ್ಲಾ ವಿವರಗಳನ್ನು ನನಗೆ ಕಳುಹಿಸಬೇಕೆಂದು ನಾನು ಅವರಿಗೆ ಹೇಳಿದೆ. ಆಗ ಅವರು ನಾನು ನೀರಜ್ ಪಾಂಡೆಗೆ ಅಗೌರವ ತೋರಿದ್ದೀರಿ ಎಂದು ನನ್ನ ಮೇಲೆ ಕೋಪಗೊಂಡರು ಎಂದರು. 

ನನ್ನ ಕಾರಿನ ಸಂಖ್ಯೆ ಮತ್ತು ಇತರ ವಿಷಯಗಳು ಅವನಿಗೆ ತಿಳಿದಿವೆ. ಇನ್ನು ನಾನು ಧರಿಸುವ ರೀತಿಯ ಬಟ್ಟೆಯಿಂದಾಗಿ ನನ್ನನ್ನು ಹೊಡೆದು ಸಾಯಿಸಬೇಕು ಎಂದು ಅವರು ಹೇಳಿದರು ಎಂದು ನಟಿ ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.