ಮುಂಬೈನಲ್ಲಿ ನಡೆದ ಎರಡು ಆಘಾತಕಾರಿ ಘಟನೆ ಹಂಚಿಕೊಂಡ ಪ್ರೀತಿ ಜಿಂಟಾ
ಬಾಲಿವುಡ್ ನಟಿ ಹಾಗೂ ಉದ್ಯಮಿ ಪ್ರೀತಿ ಜಿಂಟಾ ಅವರು ಇತ್ತೀಚೆಗೆ ವಾಣಿಜ್ಯ ನಗರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಹೇಳಿದ್ದು, ಈ ಘಟನೆಗಳಿಂದ ಆಘಾತಗೊಂಡಿದ್ದೇನೆ...

ಮುಂಬೈ: ಬಾಲಿವುಡ್ ನಟಿ ಹಾಗೂ ಉದ್ಯಮಿ ಪ್ರೀತಿ ಜಿಂಟಾ ಅವರು ಇತ್ತೀಚೆಗೆ ವಾಣಿಜ್ಯ ನಗರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಹೇಳಿದ್ದು, ಈ ಘಟನೆಗಳಿಂದ ಆಘಾತಗೊಂಡಿದ್ದೇನೆ ಎಂದಿದ್ದಾರೆ.
ಈ ಎರಡು ಘಟನೆ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಜಿಂಟಾ, ಇತ್ತೀಚೆಗೆ ಪಾರ್ಕ್ ಒಂದಕ್ಕೆ ತನ್ನ ದೊಡ್ಡ ಮಗಳು ಗಿಯಾ ಅನ್ನು ಕರೆದೊಯ್ದಿದ್ದರಂತೆ. ಅಲ್ಲಿ ಮಹಿಳೆಯೊಬ್ಬರು ಗಿಯಾ ಜೊತೆ ಫೋಟೊ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ಪ್ರೀತಿ ಅದಕ್ಕೆ ಒಪ್ಪಿಗೆ ನೀಡಿಲ್ಲ. ಬಳಿಕ ಸುಮ್ಮನಾದ ಆ ಮಹಿಳೆ ಸ್ವಲ್ಪ ಹೊತ್ತಿನ ಬಳಿಕ ಬಲವಂತವಾಗಿ ಗಿಯಾಳ ತುಟಿಯ ಬಳಿ ಮುತ್ತಿಟ್ಟು ಓಡಿ ಹೋದಳಂತೆ. ಇದು ಪ್ರೀತಿಗೆ ಆಘಾತ ತಂದಿದೆ. ಮಗಳಿಗೆ ಮುತ್ತಿಟ್ಟು ಓಡಿಹೋದ ಮಹಿಳೆ ಐಶಾರಾಮಿ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಾರೆ ಎಂದಿರುವ ಪ್ರೀತಿ, ‘ನಾನು ಸೆಲೆಬ್ರಿಟಿ ಆಗದೇ ಇದ್ದಿದ್ದರೆ ಅಲ್ಲಿ ಬೇರೆಯದೇ ಘಟನೆ ನಡೆಯುತ್ತಿತ್ತು, ಆದರೆ ಅಲ್ಲಿ ಸೀನ್ ಕ್ರಿಯೇಟ್ ಮಾಡಲು ನನಗೆ ಇಷ್ಟವಿರಲಿಲ್ಲ’ ಎಂದು ಹೇಳಿದ್ದಾರೆ.
ಎರಡನೇ ಘಟನೆಯನ್ನು ವಿವರಿಸಿದ ಐಪಿಎಲ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್‌ನ ಸಹ-ಮಾಲೀಕರಾಗಿರುವ ನಟಿ, ವಿಮಾನ ನಿಲ್ದಾಣಕ್ಕೆ ಹೋಗಲು ಕಾರು ಹತ್ತಲು ಬಂದಾಗ ಅಂಗವಿಕಲ ವ್ಯಕ್ತಿಯೊಬ್ಬ ಬಂದು ನನಗೆ ಹಣ ಕೇಳಿದ. ಈ ಹಿಂದೆ ಹಲವು ಬಾರಿ ಆ ವ್ಯಕ್ತಿಗೆ ಹಣ ಕೊಟ್ಟಿದ್ದೇನೆ. ಆದರೆ ಈ ಬಾರಿ ನನ್ನ ಬಳಿ ನಗದು ಇರಲಿಲ್ಲ. ಕಾರ್ಡ್ ಮಾತ್ರವೇ ಇದೆ ಎಂದು ಹೇಳಿ ಹೊರಟುಬಿಟ್ಟೆ. ಆದರೆ ಆ ಅಂಗವಿಕಲ ವ್ಯಕ್ತಿ ನನ್ನ ಕಾರನ್ನು ಹಿಂಬಾಲಿಸುತ್ತಾ ಬಂದ, ನಾನು ಅವನಿಗೆ ಹಣ ಕೊಡದೇ ಇದ್ದುದ್ದಕ್ಕೆ ಬೈಯ್ಯಲು ಆರಂಭಿಸಿದ. ಬಳಿಕ ಕಾರಿನಲ್ಲಿ ನನ್ನ ಜೊತೆಗಿದ್ದ ಮಹಿಳೆ ಅವನಿಗೆ ತನ್ನ ಪರ್ಸ್ನಲ್ಲಿದ್ದ ಸ್ವಲ್ಪ ಹಣ ಕೊಟ್ಟರು. ಆದರೆ ಆ ವ್ಯಕ್ತಿ ಹಣವನ್ನು ಎಸೆದುಬಿಟ್ಟ, ಇಷ್ಟು ಹಣ ಸಾಕಾಗುವುದಿಲ್ಲ, ಇನ್ನಷ್ಟು ಹಣ ಕೊಡುವಂತೆ ಪೀಡಿಸಲು ಆರಂಭಿಸಿದ. ಬೈಯ್ಯಲು ಆರಂಭಿಸಿದ ಎಂದು ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


