200 ಕೋಟಿ ಸುಲಿಗೆ ಪ್ರಕರಣ: ಬಾಲಿವುಡ್ ನಟಿ ನೋರಾ ಫತೇಹಿಗೆ 30 ಪ್ರಶ್ನೆ ಕೇಳಿದ ದೆಹಲಿ ಪೊಲೀಸರು
ವಂಚಕ ಸುಕೇಶ್ ಚಂದ್ರಶೇಖರ್ ಗೆ ಸಂಬಂಧಿಸಿದಂತೆ ಸುಲಿಗೆ ಪ್ರಕರಣವೊಂದರ ತನಿಖೆಯ ಭಾಗವಾಗಿ ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗದಿಂದ ಇಂದು ಸುಮಾರು 5 ಗಂಟೆಗಳ ಕಾಲ ಬಾಲಿವುಡ್ ನಟಿ ನೋರಾ ಫತೇಹಿ ಅವರ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನವದೆಹಲಿ: ವಂಚಕ ಸುಕೇಶ್ ಚಂದ್ರಶೇಖರ್ ಗೆ ಸಂಬಂಧಿಸಿದಂತೆ ಸುಲಿಗೆ ಪ್ರಕರಣವೊಂದರ ತನಿಖೆಯ ಭಾಗವಾಗಿ ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗದಿಂದ ಇಂದು ಸುಮಾರು 5 ಗಂಟೆಗಳ ಕಾಲ ಬಾಲಿವುಡ್ ನಟಿ ನೋರಾ ಫತೇಹಿ ಅವರ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಆಕೆಯ ಪಾತ್ರದ ಆರೋಪದಿಂದಾಗಿ ದೆಹಲಿ ಪೊಲೀಸರು ಎರಡನೇ ಬಾರಿಗೆ ಸಮನ್ಸ್ ನೀಡಿದ್ದರು. ಉದ್ಯಮಿ ಚಂದ್ರಶೇಖರ್ ನನ್ನು ಪರಿಚಯಿಸಿದ ಪಿಂಕಿ ಇರಾನಿ ಅವರೊಂದಿಗೆ ಫತೇಹಿ ವಿಚಾರಣೆ ನಡೆಸಲಾಯಿತು. ನಿನ್ನೆ ಕೂಡಾ ಜಾಕ್ವೆಲಿನ್ ಫರ್ನಾಂಡಿಸ್ ಅವರೊಂದಿಗೆ ಇರಾನಿ ವಿಚಾರಣೆ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮಂದಿರ ಮಾರ್ಗದಲ್ಲಿರುವ ಆರ್ಥಿಕ ಅಪರಾಧ ವಿಭಾಗದ ಕಚೇರಿಯಲ್ಲಿ ಇರಾನಿ ಮತ್ತು ಫತೇಹಿ ಇಬ್ಬರನ್ನು ವಿಚಾರಣೆ ನಡೆಸಲಾಗಿದೆ. "ಫತೇಹಿ, ಆಕೆಯ ಸೋದರ ಮಾವ ಮೆಹಬೂಬ್ ಅಲಿಯಾಸ್ ಬಾಬಿ ಮತ್ತು ಇರಾನಿ ಅವರನ್ನು ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಅವರೆಲ್ಲರೂ ತನಿಖೆಯ ಸಮಯದಲ್ಲಿ ಸಹಕರಿಸಿದರು ಮತ್ತು ಅವರಿಗೆ ಊಟವನ್ನು ಒದಗಿಸಲಾಯಿತು. ಇರಾನಿ ಫತೇಹಿಯ ಸೋದರಮಾವನನ್ನೂ ಸಂಪರ್ಕಿಸಿದ್ದಾಗಿನಿಂದ ಮೂವರೂ ಪರಸ್ಪರ ಮುಖಾಮುಖಿಯಾಗಿದ್ದರು ಎಂದು ಅವರು ಹೇಳಿದರು.
ಫತೇಹಿ ವಿಚಾರಣೆಯನ್ನು ಈಗಾಗಲೇ ನಡೆಸಲಾಗಿತ್ತು. ಆದರೆ ಚಂದ್ರಶೇಖರ್ ಪತ್ನಿ ಚೆನ್ನೈನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ, ಅವರಿಂದ ನಿಜವಾಗಿಯೂ ಕಾರನ್ನು ಯಾರು ಪಡೆದರು ಮತ್ತು ಫತೇಹಿ ಮಾವನ ಬ್ಯಾಂಕ್ ಸ್ಟೇಟ್‌ಮೆಂಟ್ ವಿವರಗಳನ್ನು ಪಡೆಯಲು ನಾವು ಬಯಸಿದ್ದೇವು. ಫತೇಹಿ ಮತ್ತು ಆಕೆಯ ಸೋದರ ಮಾವನಿಗೆ 30 ಪ್ರಶ್ನೆಗಳಿದ್ದ ಪ್ರಶ್ನಾವಳಿಯನ್ನು ನೀಡಲಾಯಿತು. ಅವರು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರು ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


