ಲೈಂಗಿಕ ಕಿರುಕುಳ: ಸಾಜಿದ್ ಖಾನ್ ವಿರುದ್ಧ ಶೆರ್ಲಿನ್ ಚೋಪ್ರಾ ಪೊಲೀಸರಿಗೆ ದೂರು
ಬಿಗ್ ಬಾಸ್ 16ರಲ್ಲಿ ಪಾಲ್ಗೊಂಡಿರುವ ಬಾಲಿವುಡ್ ಖ್ಯಾತ ನಿರ್ದೇಶಕ ಸಾಜಿದ್ ಖಾನ್ ಮತ್ತೆ ಮೀಟೂ ವಿವಾದದಲ್ಲಿ ಸಿಲುಕಿದ್ದಾರೆ. ಸಾಜಿದ್ ಖಾನ್ ವಿರುದ್ಧ ಉರ್ಫಿ ಜಾವೇದ್, ಶೆರ್ಲಿನ್ ಚೋಪ್ರಾ, ಕಾಮ್ಯಾ ಪಂಜಾಬಿ ಮತ್ತು ಮಂದನಾ ಕರಿಮಿ ಸೇರಿದಂತೆ ಹಲವು ನಟಿಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಮುಂಬೈ: ಬಿಗ್ ಬಾಸ್ 16ರಲ್ಲಿ ಪಾಲ್ಗೊಂಡಿರುವ ಬಾಲಿವುಡ್ ಖ್ಯಾತ ನಿರ್ದೇಶಕ ಸಾಜಿದ್ ಖಾನ್ ಮತ್ತೆ ಮೀಟೂ ವಿವಾದದಲ್ಲಿ ಸಿಲುಕಿದ್ದಾರೆ. ಸಾಜಿದ್ ಖಾನ್ ವಿರುದ್ಧ ಉರ್ಫಿ ಜಾವೇದ್, ಶೆರ್ಲಿನ್ ಚೋಪ್ರಾ, ಕಾಮ್ಯಾ ಪಂಜಾಬಿ ಮತ್ತು ಮಂದನಾ ಕರಿಮಿ ಸೇರಿದಂತೆ ಹಲವು ನಟಿಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಬಿಗ್ ಬಾಸ್ ಸೀಸನ್ 16 ರಿಂದ ಸಾಜಿದ್ ಅವರನ್ನು ಹೊರಹಾಕುವಂತೆ ಮನವಿ ಮಾಡಿದ್ದರು. ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರವನ್ನೂ ಬರೆದಿದ್ದಾರೆ.
ಇದೀಗ ಶೆರ್ಲಿನ್ ಚೋಪ್ರಾ ಸಾಜಿದ್ ಖಾನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ವಿವಿಧ ಸೆಕ್ಷನ್ ಗಳಡಿ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಶೆರ್ಲಿನ್, ಆತನನ್ನು ಬಿಗ್ ಬಾಸ್ ನಿಂದ ಹೊರಹಾಕುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಎಎನ್ ಐ ಸುದ್ದಿಸಂಸ್ಥೆಯೊಂದರಲ್ಲಿ ಮಾತನಾಡಿರುವ ಶೆರ್ಲಿನ್, ಮೊದಲು ಸಾಜಿದ್ ಖಾನ್ ನಂತಹವರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಲು ಧೈರ್ಯ ಇರಲಿಲ್ಲ. ಮೀಟೂ ನಂತರ ಮಹಿಳೆಯರು ಮುಂದೆ ಬಂದಿದ್ದು, ಆತನನ್ನು ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


