ಬಾಲಿವುಡ್ ನಟಿ ಬಿಪಾಶಾ ಬಸು- ಕರಣ್ ಸಿಂಗ್ ದಂಪತಿಗೆ ಹೆಣ್ಣು ಮಗು ಜನನ
ಬಾಲಿವುಡ್ ತಾರಾ ದಂಪತಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಇಂದು ಮುದ್ದಾದ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ.

ಮುಂಬೈ: ಬಾಲಿವುಡ್ ತಾರಾ ದಂಪತಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಇಂದು ಮುದ್ದಾದ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ.
ನಟಿ ಬಿಪಾಶಾ ಬಸು ಕಳೆದ ಆಗಸ್ಟ್ 16 ರಂದು ತಾವು ಗರ್ಭಿಣಿಯಾಗಿರುವುದಾಗಿ ಘೋಷಿಸಿದ್ದರು. ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿರುವ ಅವರು, ಇಂದು (ನ.12) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದಂಪತಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.
ದಂಪತಿ ತಮ್ಮ ಮೊದಲ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ ಎಂದು ಹತ್ತಿರದ ಮೂಲಗಳು ಸುದ್ದಿಸಂಸ್ಥೆ ಐಎಎನ್ಎಸ್‌ಗೆ ತಿಳಿಸಿದ್ದಾರೆ.
ತಾವು ಗರ್ಭಿಣಿಯಾಗಿರುವ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ ಬಿಪಾಶಾ, 'ಹೊಸ ಸಮಯ.. ಹೊಸ ಹಂತ.. ಹೊಸ ಬೆಳಕು.. ನಮ್ಮ ಜೀವನಕ್ಕೆ ಹೊಸ ಛಾಯೆಯು ಸೇರ್ಪಡೆಯಾಗುತ್ತಿದೆ. ನಾವು ಈಗ ಹಿಂದೆಂದಿಗಿಂತಲೂ ಈಗ ಹೆಚ್ಚು ಸಂಪೂರ್ಣವಾಗಿದ್ದೇವೆ. ನಾವು ನಮ್ಮ ಜೀವನವನ್ನು ಪ್ರತ್ಯೇಕವಾಗಿ ಆರಂಭಿಸಿದೆವು, ನಂತರ ನಾವು ಒಬ್ಬರನ್ನೊಬ್ಬರು ಭೇಟಿಯಾದೆವು. ಅಂದಿನಿಂದ ಇಬ್ಬರಾಗಿದ್ದ ನಾವು ಈಗ ಮೂವರಾಗುತ್ತಿದ್ದೇವೆ. ನಮ್ಮ ಪ್ರೀತಿಯಿಂದಾದ ಸೃಷ್ಟಿ.. ನಮ್ಮ ಮಗು ಅತೀ ಶೀಘ್ರದಲ್ಲೇ ನಮ್ಮನ್ನು ಸೇರುತ್ತದೆ. ನಮ್ಮ ಸಂತೋಷ ಹೆಚ್ಚಿಸಲಿದೆ.. ನಿಮ್ಮೆಲ್ಲರಿಗೂ ಧನ್ಯವಾದಗಳು, ನಿಮ್ಮ ಬೇಷರತ್ತಾದ ಪ್ರೀತಿ, ನಿಮ್ಮ ಪ್ರಾರ್ಥನೆಗಳು ಮತ್ತು ಶುಭ ಹಾರೈಕೆಗಳು ಯಾವಾಗಲೂ ನಮ್ಮೊಂದಿಗೆ ಇರುತ್ತದೆ..' ಎಂದು ಬರೆದಿದ್ದರು.
ಬಿಪಾಶಾ ಮತ್ತು ಕರಣ್ ಮೊದಲ ಬಾರಿಗೆ 2015 ರಲ್ಲಿ ಭೂಷಣ್ ಪಟೇಲ್ ಅವರ 'ಅಲೋನ್' ಚಿತ್ರದ ಸೆಟ್‌ನಲ್ಲಿ ಭೇಟಿಯಾದರು. ಅದಾದ ಒಂದು ವರ್ಷದ ಡೇಟಿಂಗ್ ನಂತರ ಏಪ್ರಿಲ್ 2016 ರಲ್ಲಿ ವಿವಾಹವಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


