ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರ: ಅಕ್ಷಯ್ ಕುಮಾರ್ ಗೆ ತೆರಿಗೆ ಇಲಾಖೆ ಪ್ರಶಂಸನಾ ಪತ್ರ!
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೊಮ್ಮೆ ಆದಾಯ ತೆರಿಗೆ ಇಲಾಖೆಯ ಪ್ರಶಂಸನೆ ಪಾತ್ರವಾಗಿದ್ದು, ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೊಮ್ಮೆ ಆದಾಯ ತೆರಿಗೆ ಇಲಾಖೆಯ ಪ್ರಶಂಸನೆ ಪಾತ್ರವಾಗಿದ್ದು, ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಹೌದು.. ಬಾಲಿವುಡ್ (Bollywood) ನಟ ಅಕ್ಷಯ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದು, ಇದರ ನಡುವೆ ಅವರ ಮನೆಗೆ ಇಂದು ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ ವಿಶೇಷ ಪತ್ರವೊಂದು ಕಳುಹಿಸಿದ್ದಾರೆ. ಹಿಂದಿ ಚಲನಚಿತ್ರೋದ್ಯಮದಿಂದ ಅತಿ ಹೆಚ್ಚು ತೆರಿಗೆ ಪಾವತಿಸುವವರಲ್ಲಿ ನಟ ಅಕ್ಷಯ್ ಕುಮಾರ್ ಸಹ ಒಬ್ಬರು ಎಂದು ಗೌರವಯುತವಾಗಿ ಆದಾಯ ತೆರಿಗೆ ಇಲಾಖೆ ಬಾಲಿವುಡ್ ಕಿಲಾಡಿಗೆ ಸಮ್ಮಾನ್ ಪತ್ರವನ್ನು ನೀಡಿದೆ.
ಈ ಮೂಲಕ ಅಕ್ಷಯ್ ಕುಮಾರ್ ಮತ್ತೊಮ್ಮೆ ಎಲ್ಲರಿಗೂ ಮಾದರಿಯಾಗಿದ್ದು, ಹೆಚ್ಚು ತೆರಿಗೆ (Income Tax) ಪಾವತಿಸುವವರು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸದ್ಯ ಅಕ್ಷಯ್‌ಗೆ ನೀಡಿರುವ ಸಮ್ಮಾನ್ ಪ್ರತ್ರದ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಬಾರಿ 29.5 ಕೋಟಿ ತೆರಿಗೆ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸದ್ಯ ಅಕ್ಷಯ್ ಕುಮಾರ್ ಟಿನು ದೇಸಾಯಿ ಅವರ ಮುಂಬರುವ ಚಿತ್ರದ ಶೂಟಿಂಗ್ಗಾಗಿ ಯುಕೆ ಅಲ್ಲಿ ಇದ್ದಾರೆ. ಹೀಗಾಗಿ ಸಮ್ಮಾನ್ ಪತ್ರವನ್ನು ಅವರ ತಂಡ ಸ್ವೀಕರಿಸಿದೆ ಎಂದು ಹೇಳಲಾಗಿದೆ.
ಕಳೆದ 5 ವರ್ಷಗಳಲ್ಲಿ ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರರ ಪೈಕಿ ನಿರಂತರವಾಗಿ ನಟ ಅಕ್ಷಯ್‌ಗೆ ಈ ಗೌರವವನ್ನು ನೀಡಿರುವುದು ಇದೇ ಮೊದಲ ನಿದರ್ಶನವಲ್ಲ. ಈ ಹಿಂದೆಯೂ ಅಕ್ಷಯ್ ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರ ಎಂಬ ಕೀರ್ತಿಗೆ ಭಾಜನರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


