ಬಾಲಿವುಡ್

ರಣವೀರ್ ಸಿಂಗ್ ಹುಟ್ಟುಹಬ್ಬಕ್ಕೆ 100,000 ಹರಳುಗಳಿಂದ ಕೂಡಿದ ಕಲಾಕೃತಿ ಗಿಫ್ಟ್ ನೀಡಿದ ಅಭಿಮಾನಿ!

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಯೊಬ್ಬರಿಂದ ವಿಶೇಷ ಉಡುಗೊರೆಯೊಂದನ್ನು ಸ್ವೀಕರಿಸಿದ್ದಾರೆ.

ರಣವೀರ್ ಸಿಂಗ್ ಹುಟ್ಟುಹಬ್ಬಕ್ಕೆ 100,000 ಹರಳುಗಳಿಂದ ಕೂಡಿದ ಕಲಾಕೃತಿ ಗಿಫ್ಟ್ ನೀಡಿದ ಅಭಿಮಾನಿ!
ಗಿಫ್ಟ್ ನೊಂದಿಗೆ ರಣವೀರ್ ಸಿಂಗ್
Published On :

ಮುಂಬೈ: ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಯೊಬ್ಬರಿಂದ ವಿಶೇಷ ಉಡುಗೊರೆಯೊಂದನ್ನು ಸ್ವೀಕರಿಸಿದ್ದಾರೆ.

ಆಯೇಷಾ ಗಾಂಧಿ ಎಂಬ ಕಲಾವಿದೆಯೊಬ್ಬರು, ಸುಮಾರು 3 ತಿಂಗಳ ಅವಧಿಯಲ್ಲಿ 100,000 ಹರಳುಗಳಿಂದ ಮಾಡಿದ್ದ ಅದ್ಬುತ ಕಲಾಕೃತಿಯೊಂದನ್ನು ರಣವೀರ್ ಸಿಂಗ್ ಗೆ ತಮ್ಮ ತಾಯಿ ಶಗುನ್ ಚೌಧರಿ  ಪರವಾಗಿ ಗಿಫ್ಟ್ ನೀಡಿದ್ದಾರೆ. ಶಗುನ್ ಚೌಧರಿ ರಣವೀರ್ ಸಿಂಗ್ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ.

ಕಲಾಕೃತಿ ಮುಂದೆ ಫೋಸ್ ನೀಡಿರುವ ರಣವೀರ್ ಸಿಂಗ್ ಅವರ ಫೋಟೋವನ್ನು ಅಯೇಷಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ತಾಯಿಯ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಏನಾದರೊಂದು ವಿಶೇಷವಾದ ಗಿಫ್ಟ್ ನೀಡಲು ಬಯಸಿದ್ದೆ. ಮೂರು ತಿಂಗಳಲ್ಲಿ ಇದನ್ನು ರಚಿಸಿದ್ದಾಗಿ ಅವರು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.