ತುನಿಷಾ ಆತ್ಮಹತ್ಯೆ ಪ್ರಕರಣ: ದ್ರೌಪದಿಗೆ ಕೃಷ್ಣ, ಸೀತೆಗೆ ರಾಮ ಬೆನ್ನಿಗೆ ನಿಂತಂತೆ, ನೀವು ನಮಗೆ ಸಹಾಯ ಮಾಡಿ: ಮೋದಿಗೆ ಕಂಗನಾ ಮನವಿ
ಮಹಿಳೆ ಎಲ್ಲವನ್ನೂ ನಿಭಾಯಿಸಬಲ್ಲಳು, ಕಳೆದುಕೊಂಡ ಪ್ರೀತಿ, ಮದುವೆ, ಸಂಬಂಧ ಹೀಗೆ ಎಲ್ಲವನ್ನೂ ನಿಭಾಯಿಸಬಹುದು. ಆದರೆ ಅವಳ ಲವ್ ಸ್ಟೋರಿ ಪ್ರೀತಿಯನ್ನು ಹೊಂದಿಲ್ಲ ಎಂಬ ಅಂಶವನ್ನು ಅವಳು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಮುಂಬೈ: ಇತ್ತೀಚೆಗಷ್ಟೇ 20 ವರ್ಷದ ನಟಿ ತುನಿಷಾ ಶರ್ಮಾ ಶೂಟಿಂಗ್ ಸೆಟ್‌ನಲ್ಲೇ ಮೇಕಪ್ ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿನ ಬಳಿಕ ಆಕೆಯ ಬಾಯ್‌ಫ್ರೆಂಡ್ ಶೀಜಾನ್ ಖಾನ್ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ ಕಂಗನಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ನಟಿ ಕಂಗನಾ ರಣಾವತ್ ಅಸಮಾಧಾನ ಹೊರಹಾಕಿದ್ದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಭಾವುಕವಾಗಿ ಬರೆದುಕೊಂಡಿದ್ದಾರೆ. `ಮಹಿಳೆ ಎಲ್ಲವನ್ನೂ ನಿಭಾಯಿಸಬಲ್ಲಳು, ಕಳೆದುಕೊಂಡ ಪ್ರೀತಿ, ಮದುವೆ, ಸಂಬಂಧ ಹೀಗೆ ಎಲ್ಲವನ್ನೂ ನಿಭಾಯಿಸಬಹುದು. ಆದರೆ ಅವಳ ಲವ್ ಸ್ಟೋರಿ ಪ್ರೀತಿಯನ್ನು ಹೊಂದಿಲ್ಲ ಎಂಬ ಅಂಶವನ್ನು ಅವಳು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾನು ಗೌರವಾನ್ವಿತ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ವಿನಂತಿಸುತ್ತೇನೆ. ಕೃಷ್ಣ ದ್ರೌಪದಿಗೆ, ಸೀತೆಗೆ ರಾಮ ಸಹಾಯ ಮಾಡಿದಂತೆ, ನೀವು ನಮಗೆ ಸಹಾಯಮಾಡಬೇಕು, ನಾವು ನಿಮ್ಮಲ್ಲಿ ಒಪ್ಪಿಗೆ ಇಲ್ಲದ ಬಹುಪತ್ನಿತ್ವ ವಿರುದ್ಧ ಬಲವಾದ ಕಾನೂನು ಮಾಡುತ್ತೀರಿ ಎಂದು ನಿರೀಕ್ಷೆ ಇಟ್ಟಿದ್ದೇವೆ. ಮಹಿಳೆಯರ ಮೇಲೆ ಆಸಿಡ್ ದಾಳಿ, ಮಹಿಳೆಯನ್ನು ಅನೇಕ ತುಂಡು ತುಂಡುಗಳಾಗಿ ಕತ್ತರಿಸುವುದು ಇಂತವರಿಗೆ ಯಾವುದೇ ವಿಚಾರಣೆ ನಡೆಸದೇ ತಕ್ಷಣ ಮರಣದಂಡನೆ ಶಿಕ್ಷೆ ವಿಧಿಸಬೇಕು’ ಎಂದು ಮನವಿ ಮಾಡಿದ್ದಾರೆ.
ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಮಾಡಿಕೊಳ್ಳುವ ಹದಿನೈದು ದಿನ ಮುನ್ನ ಬಾಯ್ ಫ್ರೆಂಡ್ ಶಿಜಾನ್ ಜೊತೆ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಳು ಎಂದು ಹೇಳಲಾಗಿದ್ದು, ಈ ಲವ್ ಬ್ರೇಕ್ ಅಪ್ ಗೆ ಕಾರಣ ಲವ್ ಜಿಹಾದ್ ಭಯ ಮತ್ತು ಶ್ರದ್ಧಾ ವಾಕರ್ ಕೊಲೆಯಿಂದ ಬೇಸತ್ತು ದೂರವಾಗಿದ್ದನು ಎಂದು ಹೇಳಿಕೊಂಡಿದ್ದ. ಈ ಪ್ರಕರಣದ ಕುರಿತಾಗಿ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಟಿ ತುನಿಷಾ ಶರ್ಮಾ ಅವರ ಸಾವಿನ ಪ್ರಕರಣದಲ್ಲಿ ಈಗಾಗಲೇ ಅನೇಕ ರೋಚಕ ಸತ್ಯಗಳು ಹೊರಬಿದ್ದಿವೆ. ತನಿಖೆ ನಡೆಯುವ ಸಂದರ್ಭದಲ್ಲಿ ತುನಿಷಾ ಗರ್ಭಿಣಿ ಎಂದು ಹೇಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು ಗರ್ಭಿಣಿ ಆಗಿರಲಿಲ್ಲ ಎಂದು ಸಾಬೀತಾಯಿತು. ಈ ಕುರಿತು ಮತ್ತೆ ತುನಿಷಾ ಸ್ನೇಹಿತೆ ರಯ್ಯಾ ಲಬೀಬ್ ಅಚ್ಚರಿಯ ಹೇಳಿಕೆ ನೀಡಿದ್ದು, ಆಕೆ ಗರ್ಭಿಣಿಯಾಗಿದ್ದು ನಿಜ. ಅಬಾರ್ಷನ್ ಮಾಡಿಸಿಕೊಂಡಿದ್ದಳು ಎಂದು ಹೇಳಿಕೆ ನೀಡಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


