ಸೀರೆಯುಟ್ಟು ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ಹಾಟ್ ಬೆಡಗಿ ಉರ್ಫಿ ಜಾವೇದ್: ಅಸಭ್ಯ ವರ್ತನೆ, ದೂರು ದಾಖಲು
ವಿಚಿತ್ರ ರೀತಿಯ ಉಡುಗೆಯಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಹಾಟ್ ಬೆಡಗಿ ಉರ್ಫಿ ಜಾವೇದ್ ಇದೀಗ ಸೀರೆಯುಟ್ಟು ಪಬ್ಲಿಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಮೈ ಮೇಲೆ ನಿಲ್ಲದ ಸೀರೆಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಟೀಕಿಸುತ್ತಿದ್ದಾರೆ.

ವಿಚಿತ್ರ ರೀತಿಯ ಉಡುಗೆಯಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಹಾಟ್ ಬೆಡಗಿ ಉರ್ಫಿ ಜಾವೇದ್ ಇದೀಗ ಸೀರೆಯುಟ್ಟು ಪಬ್ಲಿಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಮೈ ಮೇಲೆ ನಿಲ್ಲದ ಸೀರೆಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಟೀಕಿಸುತ್ತಿದ್ದಾರೆ.
ವಿಡಿಯೋದಲ್ಲಿ ಉರ್ಫಿ ಜಾವೇದ್, ಹಳದಿ ಬಣ್ಣದ ಸೀರೆ ಹಾಗೂ ಬ್ಲೌಸ್ ನಲ್ಲಿ ಕಾಣಿಸಿಕೊಂಡು ಕ್ಯಾಮರಾಗೆ ಫೋಸ್ ನೀಡಿದ್ದಾರೆ. ಆಕೆ ವಿಮಾನ ನಿಲ್ದಾಣದೊಳಗೆ ಹೋಗುವಾಗ ಆಕೆಯ ಸೀರೆ ಮೇಲಿನ ಸೆರಗು ಜಾರಿದೆ. ಕೂಡಲೇ ಅದನ್ನು ಸರಿಪಡಿಸಿಕೊಂಡಿದ್ದಾರೆ. ನಂತರ ಆಕೆ ಪಾಪರಾಜಿಗಳಿಗೆ ಫೋಸ್ ನೀಡಿದ್ದು, ಛಾಯಾಗ್ರಾಹಕರೊಂದಿಗೆ ಸಂವಾದ ನಡೆಸಿದ್ದಾರೆ.
ಈ ಮಧ್ಯೆ ಮತ್ತೊಂದು ಬಾರಿಯೂ ಕೆಳಗೆ ಬೀಳುತ್ತಿದ್ದ ಸೀರೆಯನ್ನು ಸರಿಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಹಿಳಾ ಪೊಲೀಸರೊಬ್ಬರು ಉರ್ಫಿ ಜಾವೇದ್ ಅವತಾರಗಳನ್ನು ಗಮನಿಸಿದ್ದಾರೆ. ಸೀರೆಯನ್ನು ಸರಿಯಾಗಿ ಧರಿಸದ ಉರ್ಫಿ ಜಾವೇದ್ ವಿರುದ್ಧ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಉರ್ಫಿ ಜಾವೇದ್ ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾರ್ವಜನಿಕ ಪ್ರದೇಶ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಉರ್ಫಿ ಜಾವೇದ್ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ವಕೀಲ ಆಲಿ ಕಾಶಿಫ್ ಖಾನ್ ದೇಶ್ ಮುಖ್ ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


