ಬಾಲಿವುಡ್

ಮತ್ತೋರ್ವ ಕನ್ನಡತಿ ಜೊತೆ ಸಲ್ಮಾನ್ ಖಾನ್ ಡೇಟಿಂಗ್: ತನಗಿಂತ 24 ವರ್ಷ ಕಿರಿಯ ನಟಿ ಜೊತೆ ಲವ್?; ಬಾಲಿವುಡ್ ನಲ್ಲಿ ಸಂಚಲನ

ಬಾಲಿವುಡ್ ಸ್ಟಾರ್‌ ಹೀರೋ ಸಲ್ಮಾನ್ ಖಾನ್ ಮತ್ತು ಹಾಟ್‌ ಗೊಂಬೆ ಪೂಜಾ ಹೆಗ್ಡೆ ಕುರಿತು ಇಂಟರೆಸ್ಟಿಂಗ್ ಮ್ಯಾಟರ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ

ಮತ್ತೋರ್ವ ಕನ್ನಡತಿ ಜೊತೆ ಸಲ್ಮಾನ್ ಖಾನ್ ಡೇಟಿಂಗ್: ತನಗಿಂತ 24 ವರ್ಷ ಕಿರಿಯ ನಟಿ ಜೊತೆ ಲವ್?; ಬಾಲಿವುಡ್ ನಲ್ಲಿ ಸಂಚಲನ
ಸಲ್ಮಾನ್ ಖಾನ್
Published On :

ಬಾಲಿವುಡ್ ಸ್ಟಾರ್‌ ಹೀರೋ ಸಲ್ಮಾನ್ ಖಾನ್ ಮತ್ತು ಹಾಟ್‌ ಗೊಂಬೆ ಪೂಜಾ ಹೆಗ್ಡೆ ಕುರಿತು ಇಂಟರೆಸ್ಟಿಂಗ್ ಮ್ಯಾಟರ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಕನ್ನಡತಿ ಪೂಜಾ ಹೆಗ್ಡೆ ಜೊತೆ ಸಲ್ಲು ಭಾಯ್‌ ಪ್ರೀತಿಯಲ್ಲಿ ಮುಳುಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಇವರಿಬ್ಬರು ಡೇಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹೌದು, ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಡೇಟ್ ಮಾಡ್ತಿದ್ದಾರಂತೆ. ಹಾಗಂತ ನಾವ್ ಹೇಳ್ತಿಲ್ಲ, ಬಾಲಿವುಡ್​ ಕಾಂಟ್ರುವರ್ಸಿಯಲ್ ವಿಮರ್ಶಕ ಉಮೈರ್ ಸಂಧು.

Story image

ಸೆನ್ಸಾರ್ ಮಂಡಳಿಯ ಸದಸ್ಯ ಎಂದು ಹೇಳಿಕೊಂಡಿರುವ ಉಮೈರ್ ಸಂಧು ಈ ಕುರಿತು ಟ್ಟಿಟ್‌ ಮೂಲಕ ತಿಳಿಸಿದ್ದಾರೆ. ಸಲ್ಮಾನ್‌ ಖಾನ್‌ ಪೂಜಾ ಹೆಗ್ಡೆ ಫೋಟೋ ಹಂಚಿಕೊಂಡಿರುವ ಉಮೈರ್‌, ಬ್ರೇಕಿಂಗ್ ನ್ಯೂಸ್... ಫಿಲ್ಮ್ ನಗರದಲ್ಲಿ ನವ ಜೋಡಿ.. ಪೂಜಾ ಹೆಗ್ಡೆಯನ್ನು ಪ್ರೀತಿಸಿದ ಮೆಗಾ ಸ್ಟಾರ್ ಸಲ್ಮಾನ್ ಖಾನ್..! ಪೂಜಾ ಹೆಗ್ಡೆಗೆ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಎರಡು ಚಿತ್ರಗಳಿಗೆ ಸಲ್ಲು ಸಹಿ ಹಾಕಿಸಿದ್ದಾರೆ. ಸದ್ಯ ಇಬ್ಬರೂ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಸಲ್ಮಾನ್ ಖಾನ್ ಆಪ್ತರು ಇದನ್ನು ಖಚಿತಪಡಿಸಿದ್ದಾರೆ..'' ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ.

Story image

ಪೂಜಾ ಹೆಗ್ಡೆ ಸದ್ಯ ಸಲ್ಮಾನ್ ಖಾನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ʼಕಿಸಿ ಕಾ ಭಾಯ್ ಕಿಸಿ ಕಾ ಜಾನ್ʼ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಮತ್ತು ಜಗಪತಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಪರ್ಹಾದ್ ಸಂಜಿ ನಿರ್ದೇಶಿಸುತ್ತಿದ್ದಾರೆ
   

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.