ಬಾಲಿವುಡ್

ಬರುತ್ತಿದೆ ಭಾರತದ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಬಯೋಪಿಕ್ ಸಿನಿಮಾ

ಈ ಬಯೋಪಿಕ್ ಸಿನಿಮಾವನ್ನು ನಿಖಿಲ್ ದ್ವಿವೇದಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಗೌತಮ್ ಚಿಂತಾಮಣಿ ಅವರ ಪುಸ್ತಕವನ್ನು ಆಧರಿಸಿದೆ.

ಬರುತ್ತಿದೆ ಭಾರತದ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಬಯೋಪಿಕ್ ಸಿನಿಮಾ
ರಾಜೇಶ್ ಖನ್ನಾ
Published On :

ಮುಂಬೈ: ಭಾರತದ ಮೊದಲ ಸೂಪರ್ ಸ್ಟಾರ್ ಎನ್ನುವ ಖ್ಯಾತಿ ಪಡೆದ ಬಾಲಿವುಡ್ ನಟ ರಾಜೇಶ್ ಖನ್ನಾರ 79ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ರಾಜೇಶ್ ಖನ್ನಾ ಬದುಕನ್ನು ಆಧರಿಸಿ ಸಿನಿಮಾ ತಯಾರಿಗೆ ಸಿದ್ಧತೆ ನಡೆದಿದೆ.

ಈ ಬಯೋಪಿಕ್ ಸಿನಿಮಾವನ್ನು ನಿಖಿಲ್ ದ್ವಿವೇದಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಗೌತಮ್ ಚಿಂತಾಮಣಿ ಅವರ ಪುಸ್ತಕವನ್ನು ಆಧರಿಸಿದೆ. ಬಾಲಿವುಡ್ ನ ಖ್ಯಾತ ನಿರ್ದೇಶಕಿ ಫರಾ ಖಾನ್ ಈ ಬಯೋಪಿಕ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. 

ಜತಿನ್ ಖನ್ನಾ ಎನ್ನುವುದು ರಾಜೇಶ್ ಖನ್ನಾ ಅವರ ಮೂಲ ಹೆಸರು. 1966ರಲ್ಲಿ 'ಆಖ್ರೀ ರಾತ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ರಾಜೇಶ್ ಖನ್ನಾ. ಸತತವಾಗಿ 17 ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ರಾಜೇಶ್ ಖನ್ನಾ ಅವರದು. ಏಳುಬೀಳಿನ ಕಥೆ ಅವರ ಬದುಕಿನದ್ದು. 2012ರಲ್ಲಿ ಅವರು ನಿಧನರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.