ಬಾಲಿವುಡ್

ಲತಾ ಮಂಗೇಶ್ಕರ್ ಗೆ 92ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಶುಭ ಹಾರೈಕೆ

ದೇಶದ ಹೆಸರಾಂತ ಹಿನ್ನೆಲೆ ಗಾಯಕಿ, ದಂತ ಕಥೆ, ಲತಾ ಮಂಗೇಶ್ಕರ್ ಅವರಿಗೆ ಇಂದು ಹುಟ್ಟಹಬ್ಬದ ಸಂಭ್ರಮ. ಅಪ್ರತಿಮ ಗಾಯಕಿ ಮತ್ತು ತಲೆಮಾರಿನ ಗಾಯಕರಿಗೆ ಸ್ಫೂರ್ತಿಯಾಗಿರುವ ಮಂಗೇಶ್ಕರ್ ಮಂಗಳವಾರ 92 ನೇ ವರ್ಷಕ್ಕೆ ಕಾಟ್ಟಿದ್ದಾರೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಹಾರೈಸಿದ್ದಾರೆ.

ಲತಾ ಮಂಗೇಶ್ಕರ್ ಗೆ 92ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಶುಭ ಹಾರೈಕೆ
ಪ್ರಧಾನಿ ನರೇಂದ್ರ ಮೋದಿ, ಲತಾ ಮಂಗೇಶ್ಕರ್
Published On :

ನವದೆಹಲಿ: ದೇಶದ ಹೆಸರಾಂತ ಹಿನ್ನೆಲೆ ಗಾಯಕಿ, ದಂತ ಕಥೆ, ಲತಾ ಮಂಗೇಶ್ಕರ್ ಅವರಿಗೆ ಇಂದು  ಹುಟ್ಟಹಬ್ಬದ ಸಂಭ್ರಮ. ಅಪ್ರತಿಮ ಗಾಯಕಿ  ಮತ್ತು ತಲೆಮಾರಿನ ಗಾಯಕರಿಗೆ ಸ್ಫೂರ್ತಿಯಾಗಿರುವ ಮಂಗೇಶ್ಕರ್ ಮಂಗಳವಾರ 92 ನೇ ವರ್ಷಕ್ಕೆ ಕಾಟ್ಟಿದ್ದಾರೆ.  ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಹಾರೈಸಿದ್ದಾರೆ.

ಪ್ರತಿ ವರ್ಷ ಸಾಮಾಜಿಕ ಜಾಲತಾಣಗಳ ಮೂಲಕ ಲೆಜೆಂಡರಿ ಹಿನ್ನೆಲೆ ಗಾಯಕಿಗೆ ಹುಟ್ಟು ಹಬ್ಬದ ಶುಭಾಶಯ ಕೋರುವ ಪ್ರಧಾನಿ ಮೋದಿ, ಈ ವರ್ಷ  ದೇವರು ನಿಮಗೆ ಇನ್ನೂ ಹೆಚ್ಚಿನ ಆಯುಷ್ಯ  ಮತ್ತು ಆರೋಗ್ಯ ದಯಪಾಲಿಸಲಿ ಎಂದೂ  ಪ್ರಧಾನಿ ತಮ್ಮ ಸಂದೇಶದಲ್ಲಿ ಶುಭ  ಹಾರೈಸಿದ್ದಾರೆ. 

ಲತಾ ಮಂಗೇಶ್ಕರ್ ಅವರ ಸುಮಧುರ ಧ್ವನಿ ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತದೆ.  ವಿನಮ್ರತೆ ಮತ್ತು ಭಾರತೀಯ ಸಂಸ್ಕೃತಿಯ ಬಗೆಗಿನ ಉತ್ಸಾಹಕ್ಕಾಗಿ ಅವರನ್ನು ಗೌರವಿಸಲಾಗುತ್ತದೆ. ವೈಯಕ್ತಿಕವಾಗಿ ಅವರ ಆಶೀರ್ವಾದವು ದೊಡ್ಡ ಶಕ್ತಿಯ ಮೂಲವಾಗಿದೆ. ಲತಾ ದಿದಿಯವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಮೋದಿ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.