ಬಾಲಿವುಡ್

ಅನನ್ಯ ಪಾಂಡೆಯಿಂದ ಮೂರು ಬಾರಿ ಆರ್ಯನ್ ಖಾನ್ ಗೆ ಡ್ರಗ್ಸ್ ಪೂರೈಸಿರುವುದು ಚಾಟ್ ನಿಂದ ಬಹಿರಂಗ: ಎನ್ ಸಿಬಿ

ಬಾಲಿವುಡ್ ನಟಿ ಅನನ್ಯ ಪಾಂಡೆ ಮುಂಬೈ ಕ್ರೂಸ್ ಪಾರ್ಟಿ ಪ್ರಕರಣದಲ್ಲಿ ಎನ್ ಸಿಬಿ ತನಿಖೆ ಎದುರಿಸುತ್ತಿದ್ದು, ಆಕೆ ಆರ್ಯನ್ ಖಾನ್ ಗೆ ಡ್ರಗ್ಸ್ ಪೂರೈಕೆ ಮಾಡಿದ್ದರು ಎಂಬುದು ವಿಚಾರಣೆಯ ನಂತರ ಬೆಳಕಿಗೆ ಬಂದಿದೆ.

ಅನನ್ಯ ಪಾಂಡೆಯಿಂದ ಮೂರು ಬಾರಿ ಆರ್ಯನ್ ಖಾನ್ ಗೆ ಡ್ರಗ್ಸ್ ಪೂರೈಸಿರುವುದು ಚಾಟ್ ನಿಂದ ಬಹಿರಂಗ: ಎನ್ ಸಿಬಿ
ಸಮನ್ಸ್ ಹಿನ್ನೆಲೆಯಲ್ಲಿ ಎನ್ ಸಿಬಿ ಕಚೇರಿಗೆ ಆಗಮಿಸುತ್ತಿರುವ ಅನನ್ಯ ಪಾಂಡೆ
Published On :

ಮುಂಬೈ: ಬಾಲಿವುಡ್ ನಟಿ ಅನನ್ಯ ಪಾಂಡೆ ಮುಂಬೈ ಕ್ರೂಸ್ ಪಾರ್ಟಿ ಪ್ರಕರಣದಲ್ಲಿ ಎನ್ ಸಿಬಿ ತನಿಖೆ ಎದುರಿಸುತ್ತಿದ್ದು, ಆಕೆ ಆರ್ಯನ್ ಖಾನ್ ಗೆ ಡ್ರಗ್ಸ್ ಪೂರೈಕೆ ಮಾಡಿದ್ದರು ಎಂಬುದು ವಿಚಾರಣೆಯ ನಂತರ ಬೆಳಕಿಗೆ ಬಂದಿದೆ. 

ಎನ್ ಸಿಬಿ ಮೂಲಗಳ ಪ್ರಕಾರ ಅನನ್ಯ ಪಾಂಡೆ ಮೂರು ಬಾರಿ ಆರ್ಯನ್ ಖಾನ್ ಗೆ ಡ್ರಗ್ಸ್ ಪೂರೈಕೆ ಮಾಡಿರುವುದು ಚಾಟ್ ಗಳಿಂದ ಬಹಿರಂಗಗೊಂಡಿದೆ. 

ಎನ್ ಸಿಬಿ ಅಧಿಕಾರಿಗಳು ಆರ್ಯನ್ ಖಾನ್ ಅವರ ಮೊಬೈಲ್ ಫೋನ್ ನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ವೇಳೆ ಆಕೆ ಆರ್ಯನ್ ಖಾನ್ ಗೆ ಮೂರು ಬಾರಿ ಡ್ರಗ್ಸ್ ಪೂರೈಕೆ ಮಾಡಿರುವ ಮಾಹಿತಿ ಹೊರಬಂದಿದೆ. ಚಾಟ್ ನಲ್ಲಿ ಅನನ್ಯ ಪಾಂಡೆ ಹೆಸರು ಉಲ್ಲೇಖಗೊಂಡಿದ್ದು, ಒಮ್ಮೆ ಜನಪ್ರಿಯ ಗೆಟ್ ಟುಗೆದರ್ ನಲ್ಲಿ ಸೇರಿದಂತೆ ಒಟ್ಟು ಮೂರು ಬಾರಿ ತನಗೆ ಡ್ರಗ್ಸ್ ನೀಡಿದ್ದಾರೆ ಎಂಬ ಸಂದೇಶವಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಇಬ್ಬರ ಫೋನ್ ಗಳನ್ನೂ ನಾವು ವಶಕ್ಕೆ ಪಡೆದಿದ್ದು, ಹಳೆಯ ಫೋನ್ ಜೊತೆಗೆ ಇತ್ತೀಚೆಗಷ್ಟೇ ಖರೀದಿಸಿದ್ದ ಹೊಸ ಹ್ಯಾಂಡ್ ಸೆಟ್ ನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮುಂಬೈ ಕ್ರೂಸ್ ರೈಡ್ ಗೆ ಸಂಬಂಧಿಸಿದಂತೆ ಎನ್ ಸಿಬಿ ಅನನ್ಯ ಪಾಂಡೆಗೆ ನೊಟೀಸ್ ಜಾರಿಗೊಳಿಸಿತ್ತು. ಆರ್ಯನ್ ಖಾನ್ ಮೊಬೈಲ್ ನಿಂದ ಚಾಟ್ ರಿಕವರ್ ಮಾಡಿದ ಬಳಿಕ ಅನನ್ಯ ಪಾಂಡೆ ಸಹ ಡ್ರಗ್ಸ್ ಸೇವನೆ ಮಾಡಿರಬಹುದೆಂಬುದು ಅಧಿಕಾರಿಗಳ ಶಂಕೆ

ಎನ್ ಸಿಬಿ ಅಧಿಕಾರಿಗಳ ಪ್ರಕಾರ 2018-19 ರಲ್ಲಿ ಪಾಂಡೆ ಆರ್ಯನ್ ಖಾನ್ ಗೆ ಡ್ರಗ್ಸ್ ಪೂರೈಕೆಯಷ್ಟೇ ಅಲ್ಲದೇ ಅದಕ್ಕೆ ಪೂರಕವಾಗುವ ಡ್ರಗ್ ಡೀಲರ್ ಗಳ ನಂಬರ್ ನೀಡಿ ಸಹಾಯ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.