ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸ್: ಸ್ನೇಹಿತ ಪಿಠಾಣಿ ಬಂಧನ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂರ್ ಸಾವು ಪ್ರಕರಣಕ್ಕೆ ತಳಕು ಹಾಕಿಕೊಂಡಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರ ಸಂಸ್ಥೆ (ಎನ್‌ಸಿಬಿ) ಸಿದ್ಧಾರ್ಥ್ ಪಿಠಾಣಿ ಅವರನ್ನು ಬಂಧಿಸಿದೆ.

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂರ್ ಸಾವು ಪ್ರಕರಣಕ್ಕೆ ತಳಕು ಹಾಕಿಕೊಂಡಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರ ಸಂಸ್ಥೆ (ಎನ್‌ಸಿಬಿ) ಸಿದ್ಧಾರ್ಥ್ ಪಿಠಾಣಿ ಅವರನ್ನು ಬಂಧಿಸಿದೆ.
ಸುಶಾಂತ್ ಅವರ ಸ್ನೇಹಿತ ಸಿದ್ಧಾರ್ಥ್ ಪಿಠಾಣಿ ಅವರನ್ನು ಹೈದರಾಬಾದ್‌ನಿಂದ ಎನ್‌ಸಿಬಿ ಬಂಧಿಸಿರುವುದಾಗಿ ವರದಿಯಾಗಿದೆ. 2020ರ ಜೂನ್ 14ರಂದು ಸುಶಾಂತ್ ಸಿಂಗ್ ತಮ್ಮ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಸುಶಾಂತ್ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಸಿದ್ಧಾರ್ಥ್ ಪಿಠಾಣಿ ಸಹ ವಾಸವಾಗಿದ್ದರು. ಸುಶಾಂತ್ ಸಿಂಗ್ ಅವರ ತಂದೆ ಪಟ್ನಾದಲ್ಲಿ ದಾಖಲಿಸಿದ್ದ ವಂಚನೆ, ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ವೇಳೆ ಮಾದಕವಸ್ತು ಪೂರೈಕೆಗೆ ಸಂಬಂಧಿಸಿದ ಕೆಲವು ಸಾಕ್ಷ್ಯಗಳನ್ನು ಜಾರಿ ನಿರ್ದೇಶನಾಲಯವು ಕಲೆ ಹಾಕಿತ್ತು. ಈ ಸಾಕ್ಷ್ಯಗಳನ್ನು ಎನ್‌ಸಿಬಿಗೆ ಹಸ್ತಾಂತರಿಸಿತ್ತು. 2020ರ ಸೆಪ್ಟೆಂಬರ್‌ನಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಎನ್‌ಸಿಬಿ, ಈಗಾಗಲೇ ಆರೋಪಪಟ್ಟಿ ಸಲ್ಲಿಸಿದೆ. 'ದಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಹಾಗೂ ನ್ಯೂರೋಟಿಕ್ಸ್ ಕಂಟ್ರೋಲ್ ಬ್ಯರೋ ಈ ಹಿಂದೆ ಸಿದ್ದಾರ್ಥ್ ಪಿಠಾಣಿಯನ್ನು ಪ್ರಶ್ನೆ ಮಾಡಿತ್ತು.
ರಿಯಾ ಚಕ್ರವರ್ತಿ ಮತ್ತು ಅವರ ಸೋದರ ಶೋವಿಕ್ ಚಕ್ರವರ್ತಿ ಸೇರಿದಂತೆ 33 ಜನರನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ. ಸುಶಾಂತ್ ಅವರ ಮನೆಯ ಕೆಲಸದಾಳುಗಳ ಹೆಸರೂ ಆರೋಪಪಟ್ಟಿಯಲ್ಲಿ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


