ಸುಶಾಂತ್ ಸಿಂಗ್ ರಜಪೂತ್ ಮೊದಲ ಪುಣ್ಯಸ್ಮರಣೆ: ನೆನೆದು ಭಾವುಕ ಪತ್ರ ಬರೆದ ಮಾಜಿ ಗೆಳತಿ ರಿಯಾ ಚಕ್ರವರ್ತಿ
ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿ ಇಂದಿಗೆ ಒಂದು ವರ್ಷ. ಮೊದಲ ಪುಣ್ಯ ಸ್ಮರಣೆ ದಿನದಂದು ಅವರನ್ನು ನೆನಪಿಸಿಕೊಂಡಿರುವ ನಟಿ ಹಾಗೂ ಅವರ ಮಾಜಿ ಗೆಳತಿ ರಿಯಾ ಚಕ್ರವರ್ತಿ, ಬಾಲಿವುಡ್ ಸ್ಟಾರ್ ಅಗಲುವಿಕೆಯಿಂದ ಇನ್ನೂ ಹೊರಬರಬೇಕಾಗಿದೆ ಎಂದು ಹೇಳಿದ್ದಾರೆ.

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿ ಇಂದಿಗೆ ಒಂದು ವರ್ಷ. ಮೊದಲ ಪುಣ್ಯ ಸ್ಮರಣೆ ದಿನದಂದು ಅವರನ್ನು ನೆನಪಿಸಿಕೊಂಡಿರುವ ನಟಿ ಹಾಗೂ ಅವರ ಮಾಜಿ ಗೆಳತಿ ರಿಯಾ ಚಕ್ರವರ್ತಿ, ಬಾಲಿವುಡ್ ಸ್ಟಾರ್ ಅಗಲುವಿಕೆಯಿಂದ ಇನ್ನೂ ಹೊರಬರಬೇಕಾಗಿದೆ ಎಂದು ಹೇಳಿದ್ದಾರೆ. ಬಾಂದ್ರಾದಲ್ಲಿನ ತನ್ನ ಅಪಾರ್ಟ್ ಮೆಂಟ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೂನ್ 14, 2020ರಂದು ನೇಣು ಬಿಗಿದು ಸ್ಥಿತಿಯಲ್ಲಿ ಕಂಡುಬಂದಿದ್ದರು.
ಇನ್ಸ್ಟಾಗ್ರಾಮ್ ನಲ್ಲಿ ಭಾವುಕ ಪತ್ರವೊಂದನ್ನು ಬರೆದುಕೊಂಡಿರುವ ರಿಯಾ ಚಕ್ರವರ್ತಿ, ನೀನು ಇನ್ನು ಮುಂದೆ ಇಲ್ಲಿಲ್ಲ ಎಂದು ನಾನು ನಂಬುವ ಒಂದು ಕ್ಷಣವೂ ಇಲ್ಲ. ಸಮಯ ಎಲ್ಲವನ್ನೂ ಗುಣಪಡಿಸುತ್ತದೆ ಎಂದು ಅವರು ಹೇಳಿದರು. ಆದರೆ, ನನ್ನ ಸಮಯ ಮತ್ತು ಎಲ್ಲವೂ ನೀನೆ. ನೀವು ಈಗ ನನ್ನ ಕಾಪಾಡುವ ದೇವರು ಎಂದು ನನಗೆ ತಿಳಿದಿದೆ. ಚಂದ್ರನಿಂದ ಟೆಲಿಸ್ಕೋಪ್ ನಿಂದ ನನನ್ನು ನೋಡುತ್ತಿದ್ದೀರಿ ಮತ್ತು ನನನ್ನು ರಕ್ಷಿಸುತ್ತಿದ್ದೀರಾ ಎಂದು ರಜಪೂತ್ ಫೋಟೋದೊಂದಿಗೆ 28 ವರ್ಷದ ರಿಯಾ ಚಕ್ರವರ್ತಿ ಬರೆದುಕೊಂಡಿದ್ದಾರೆ.
ನೀನು ಇಲ್ಲದೆ ಜೀವನವಿಲ್ಲಾ, ನೀನು ಅದರ ಅರ್ಥವನ್ನು ನಿನ್ನೊಂದಿಗೆ ತೆಗೆದುಕೊಂಡು ಹೋಗಿದ್ದೀರಿ. ಈ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ .. ನೀನು ಇಲ್ಲದೆ, ನಾನು ಇನ್ನೂ ನಿಂತಿದ್ದೇನೆ ಎಂದು ರಿಯಾ ಚಕ್ರವರ್ತಿ ಹೇಳಿಕೊಂಡಿದ್ದಾರೆ. ರಜಪೂತ್ ಗೈರನ್ನು ಪ್ರತಿ ಸಮಯ ನೆನಪಿಕೊಳ್ಳುತ್ತೇನೆ. ನೀನು ನನ್ನೊಂದಿಗೆ ಇದ್ದೀಯಾ ಎಂಬುದು ನನ್ನಗೆ ತಿಳಿದಿದೆ. ಎಲ್ಲಕಡೆ ನಿನ್ನನ್ನೇ ನೋಡುತ್ತಿರುತ್ತೇನೆ. ಐ ಮಿಸ್ ಯೂ, ಮೈ ಬೆಸ್ಟ್ ಫ್ರೆಂಡ್, ಮೈ ಮ್ಯಾನ್, ಮೈ ಲವ್ ಎಂದು ರಿಯಾ ಚಕ್ರವರ್ತಿ ಭಾವುಕರಾಗಿದ್ದಾರೆ.
ಸುಶಾಂತ್ ಸಿಂಗ್ ಸಂಬಂಧಿಕರಿಂದ ರಿಯಾ ಚಕ್ರವರ್ತಿ ವಿರುದ್ಧ ಕೇಸ್ ದಾಖಲಾದ ನಂತರ ಆಕೆಯ ವಾಟ್ಸಾಪ್ ಚಾಟ್ ಗಳ ಆಧಾರದ ಮೇಲೆ ಮುಂಬೈ ಪೊಲೀಸರು, ಇಡಿ, ಸಿಬಿಐ ಹಾಗೂ ಎನ್ ಸಿಬಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


