ವಂಚನೆ ಪ್ರಕರಣ: ಸಲ್ಮಾನ್ ಖಾನ್, ಇತರ 8 ಮಂದಿಗೆ ಚಂಡೀಘರ್ ಪೋಲೀಸರಿಂದ ಸಮನ್ಸ್ ಜಾರಿ
ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ ಶಾಪ್ ಮಾಲೀಕರು ಸಲ್ಲಿಸಿದ ವಂಚನೆ ದೂರಿನ ಹಿನ್ನೆಲೆಯಲ್ಲಿ ನಟ ಸಲ್ಮಾನ್ ಖಾನ್ ಮತ್ತು ಅವರ ಸಹೋದರಿಅಲ್ವಿರಾ ಖಾನ್ ಅಗ್ನಿಹೋತ್ರಿ ಸೇರಿದಂತೆ ಒಂಬತ್ತು ಮಂದಿಗೆ ಚಂಡೀಘರ್ ಪೊಲೀಸರು ಸಮನ್ಸ್ ಕಳುಹಿಸಿದ್ದಾರೆ.

ಚಂಡೀಘರ್: ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ ಶಾಪ್ ಮಾಲೀಕರು ಸಲ್ಲಿಸಿದ ವಂಚನೆ ದೂರಿನ ಹಿನ್ನೆಲೆಯಲ್ಲಿ ನಟ ಸಲ್ಮಾನ್ ಖಾನ್ ಮತ್ತು ಅವರ ಸಹೋದರಿಅಲ್ವಿರಾ ಖಾನ್ ಅಗ್ನಿಹೋತ್ರಿ ಸೇರಿದಂತೆ ಒಂಬತ್ತು ಮಂದಿಗೆ ಚಂಡೀಘರ್ ಪೊಲೀಸರು ಸಮನ್ಸ್ ಕಳುಹಿಸಿದ್ದಾರೆ.
ಮಣಿ ಮಾಜ್ರದಲ್ಲಿ ಮಳಿಗೆಯನ್ನು ಹೊಂದಿರುವ ದೂರುದಾರ ಅರುಣ್ ಗುಪ್ತಾ, ಕಂಪನಿಯು ತನಗೆ ನೀಡಿದ್ದ ವಾಗ್ದಾನವನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು. ಸಲ್ಮಾನ್ ಅಂಗಡಿಯನ್ನು ಪ್ರಚಾರಕ್ಕೆ ತರುವ ಭರವಸೆ ನೀಡಿದ್ದಾಗಿ ಗುಪ್ತಾ ಆರೋಪಿಸಿದ್ದಾರೆ. ಆದಾಗ್ಯೂ ಅದು ಹಾಗಾಗಿಲ್ಲ.
ಸಲ್ಮಾನ್ ಕಾನ್ 'ಬೀಯಿಂಗ್ ಹ್ಯೂಮನ್' ಹೆಸರಿನ ಎನ್‌ಜಿಒ ನಡೆಸುತ್ತಿದ್ದಾರೆ ಹಾಗೂ ಅದೇ ಹೆಸರಿನ ಬ್ರ್ಯಾಂಡ್ ನಲ್ಲಿ ಉತ್ಪನ್ನಗಳ ಮಾರಾಟವನ್ನೂ ನಡೆಸಿದ್ದಾರೆ. ಅರುಣ್ ಕುಮಾರ್ ಅದೇ ಸಂಸ್ಥೆಯಡಿಯಲ್ಲಿ ತಮ್ಮ ಮಳಿಗೆ ತೆರೆದಿದ್ದರು. ದೂರುದಾರ ಹೇಳುವಂತೆ ಸುಮಾರು 2-3 ಕೋಟಿ ರೂಪಾಯಿ ವ್ಯಯಿಸಿ ಜ್ಯುವೆಲ್ಲರಿ ಶಾಪ್ ತೆರೆದರೂ ದಾಸ್ತಾನಿಗಾಗಿ ಹಣ ಸಹ ಪಾವತಿಸಿಯೂ ಯಾವ ದಾಸ್ತಾನೂ ಇದುವರೆಗೆ ಬಂದಿಲ್ಲ ಹಾಗಾಗಿ ಯಿಂಗ್ ಹ್ಯೂಮನ್ ನವರು ಅವರಿಗೆ ವಂಚಿಸಿದ್ದಾರೆ.
ಈ ಅಂಗಡಿಯನ್ನು ನಟ ಉದ್ಘಾಟಿಸುವುದಾಗಿ ಭರವಸೆ ನೀಡಿದ್ದರು., ಆದರೆ ಅವರ ಸೋದರ ಮಾವ ಆಯುಷ್ ಶರ್ಮಾ ಇದನ್ನು 2018 ರಲ್ಲಿ ಉದ್ಘಾಟಿಸಿದರು.
ಜುಲೈ 13 ರೊಳಗೆ ಒಂಬತ್ತು ಜನ ವಿಚಾರಣೆಗೆ ಹಾಜರಾಗಬೇಕೆಂದು ಚಂಡೀಘರ್ ಪೊಲೀಸರು ಸಮನ್ಸ್ ನಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


