ಹಿಂದಿ ಚಿತ್ರರಂಗದ ದಂತಕಥೆ ದಿಲೀಪ್ ಕುಮಾರ್ ನಿಧನ: ಬಾಲಿವುಡ್ ಕಂಬನಿ
ಬುಧವಾರ ಮುಂಜಾನೆ ನಿಧನರಾದ ಬಾಲಿವುಡ್ ದಂತಕಥೆ ದಿಲೀಪ್ ಕುಮಾರ್ ಅವರಿಗೆ ಬಾಲಿವುಡ್ ಗಣ್ಯರು, ಚಿತ್ರೋದ್ಯಮ ಸಂತಾಪ ಸೂಚಿಸಿದೆ.ಸೆಲೆಬ್ರಿಟಿಗಳು, ನಟರು, ಚಲನಚಿತ್ರ ನಿರ್ಮಾಪಕರು ಮತ್ತು ಗಾಯಕರು ಸೇರಿದಂತೆ ಚಲನಚಿತ್ರ ಕ್ಷೇತ್ರದ ಖ್ಯಾತನಾಮರು ಸೋಶಿಯಲ್ ಮೀಡಿಯಾದಲ್ಲಿ ನಟನ ಅಗಲಿಕೆಗಾಗಿ ಸಂತಾಪ ಸೂಚಿಸಿ ಪೋಸ್ಟ್ ಹಾಕುತ್ತಿದ್ದಾರೆ.

ಬುಧವಾರ ಮುಂಜಾನೆ ನಿಧನರಾದ ಹಿಂದಿ ಚಿತ್ರರಂಗದ ದಂತಕಥೆ ದಿಲೀಪ್ ಕುಮಾರ್ ಅವರಿಗೆ ಬಾಲಿವುಡ್ ಗಣ್ಯರು, ಚಿತ್ರೋದ್ಯಮ ಸಂತಾಪ ಸೂಚಿಸಿದೆ.ಸೆಲೆಬ್ರಿಟಿಗಳು, ನಟರು, ಚಲನಚಿತ್ರ ನಿರ್ಮಾಪಕರು ಮತ್ತು ಗಾಯಕರು ಸೇರಿದಂತೆ ಚಲನಚಿತ್ರ ಕ್ಷೇತ್ರದ ಖ್ಯಾತನಾಮರು ಸೋಶಿಯಲ್ ಮೀಡಿಯಾದಲ್ಲಿ ನಟನ ಅಗಲಿಕೆಗಾಗಿ ಸಂತಾಪ ಸೂಚಿಸಿ ಪೋಸ್ಟ್ ಹಾಕುತ್ತಿದ್ದಾರೆ.
"ವಿಧಾನ್", "ಕರ್ಮ" ಮತ್ತು "ಸೌದಾಗರ್" ಚಿತ್ರಗಳಲ್ಲಿ ದಿಲೀಪ್ ಕುಮಾರ್ ಅವರನ್ನು ನಿರ್ದೇಶಿಸಿದ್ದ ಸುಭಾಷ್ ಘಾಯ್ "ನನ್ನ ಜೀವನದ ಅತ್ಯಂತ ದುಃಖದ ದಿನ. ದಿಲೀಪ್ ಸಾಹೇಬ್ ಯೂಸುಫ್ ಭಾಯ್ ನಿಧನವಾಗಿದ್ದಾರೆ. ನನ್ನ ಅತ್ಯಮೂಲ್ಯ ಸ್ನೇಹಿತ,ನ ಅಗಲಿಕೆ ವೈಯುಕ್ತಿಕ ನಷ್ಟವಾಗಿದ್ದು ಮಾತುಗಳೇ ಬರುತ್ತಿಲ್ಲ." ಎಂದರು.
ನಟ ಜಾನ್ ಅಬ್ರಹಾಂ: "ಶಾಂತಿಯಿಂದ ವಿಶ್ರಾಂತಿ ಪಡೆಯಿರಿ ಸರ್ #DilipKumar." ಎಂದಿದ್ದಾರೆ.
ನಟ ಪರೇಶ್ ರಾವಲ್, ನಟ ಕಬೀರ್ ಬೇಡಿ, ಚಿತ್ರ ನಿರ್ದೇಶಕ ಸುಧೀರ್ ಮಿಶ್ರಾ, ನಟ-ಚಲನಚಿತ್ರ ನಿರ್ಮಾಪಕ ಫರ್ಹಾನ್ ಅಖ್ತರ್ ಸಹ ಹಿರಿಯ ನಟನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ನಟಿ ರವೀನಾ ಟಂಡನ್ "ಒಂದು ದಂತಕಥೆಯು ಅಂತ್ಯವಾಗಿದೆ. ಎಂದಿಗೂ ತುಂಬಲಾಗದ ಅಂತರ, ನಿಜವಾದ ದೈತ್ಯ ಪ್ರತಿಭೆ. ಕೊನೆಯವರೆಗೂ ಕರುಣಾಮಯಿ ಪ್ರೀತಿಯ ಜೀವ ದಿಲೀಪ್ ಕುಮಾರ್ ಓಂ ಶಾಂತಿ" ಎಂದು ಬರೆದಿದ್ದಾರೆ.
ನಟ ಮನೋಜ್ ಬಾಜಪೇಯಿ, ಗಾಯಕ ಅದ್ನಾನ್ ಸಾಮಿ ನಟ ಸುನಿಲ್ ಶೆಟ್ಟಿ ಕೂಡ ಸಂತಾಪ ಸೂಚಿಸಿದ್ದು "ಇಂದು ನಾವು ಭಾರತೀಯ ಚಿತ್ರರಂಗದ ಪ್ರಕಾಶಮಾನವಾದ ನಕ್ಷತ್ರವನ್ನು ಕಳೆದುಕೊಂಡಿದ್ದೇವೆ. ಇದು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಜೀವಂತವಿರಲಿದ್ದೀರಿ" ಎಂದು ಶೆಟ್ಟಿ ಟ್ವೀಟ್ ಮಾಡಿದ್ದಾರೆ,.
ಇನ್ನು ನಟಿ ರೇಣುಕಾ ಶಹಾನೆ, ನಟ ಅರ್ಷದ್ ವಾರ್ಸಿ, ಚಿತ್ರ ಸಂಯೋಜಕ ವಿಶಾಲ್ ದಾದ್ಲಾನಿ ಕೂಡ ತಮ್ಮ ಸಂತಾಪ ಸೂಚಿಸಿದ್ದು ನಟಿ ಊರ್ಮಿಳಾ ಮಾತೋಂಡ್ಕರ್ ಹೀಗೆ ಬರೆದಿದ್ದಾರೆ: "ಸಾಯಿರಾ ಬಾನು ಅವರಿಗೆ ನನ್ನ ಆಳವಾದ ಸಂತಾಪವಿದೆ, . ಸರ್ವಶಕ್ತನು ಈ ದೊಡ್ಡ ನಷ್ಟವನ್ನು ಭರಿಸಲು ಅವರಿಗೆ ಶಕ್ತಿ ನೀಡಲಿ".
ನಟ ಅಫ್ತಾಬ್ ಶಿವದಾಸಾನಿ, ನಟಿ ಇಶಾ ಡಿಯೋಲ್, ನಟ ರೋನಿತ್ ರಾಯ್, ನೃತ್ಯ ಸಂಯೋಜಕ-ಚಲನಚಿತ್ರ ನಿರ್ಮಾಪಕ ಫರಾಹ್ ಖಾನ್, ನಟ ವಿಜಯ್ ವರ್ಮಾ, ನಟಿ ನಿಮ್ರತ್ ಕೌರ್, ನಟಿ ಅದಿತಿ ರಾವ್ ಹೈದರಿ ಸೇರಿದಂತೆ ಅನೇಕ ಬಾಲಿವುಡ್ ಗಣ್ಯರು ಸಹ ದಿಲೀಪ್ ಕುಮಾರ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


