ಶೇರ್ ಶಾ ಸಿನಿಮಾಗೆ ಕಾರ್ಗಿಲ್ ಹೀರೋ ಕ್ಯಾಪ್ಟನ್ ವಿಕ್ರಂ ಬಾತ್ರಾ ಪಾಲಕರಿಂದ ಮೆಚ್ಚುಗೆ
ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರ ಜೀವನವನ್ನಾಧರಿಸಿದ ಶೇರ್ ಶಾ ಸಿನಿಮಾಗೆ ಬಾತ್ರಾ ಅವರ ಪಾಲಕರು ಮೆಚ್ಚುಗೆ ಸೂಚಿಸಿದ್ದಾರೆ.

ಮುಂಬೈ: ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರ ಜೀವನವನ್ನಾಧರಿಸಿದ ಶೇರ್ ಶಾ ಸಿನಿಮಾಗೆ ಬಾತ್ರಾ ಅವರ ಪಾಲಕರು ಮೆಚ್ಚುಗೆ ಸೂಚಿಸಿದ್ದಾರೆ. ಬಾತ್ರಾ ಅವರ ಪಾಲಕರಾದ ಗಿರಿಧರ್ ಲಾಲ್ ಮತ್ತು ಕಮಲ್ ಕಾಂತ ಬಾತ್ರಾ ಅವರು ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರ ಮತ್ತು ಕಿಯಾರಾ ಅಡ್ವಾಣಿ ಅಭಿನಯಕ್ಕೆ ಮನಸೋತಿದ್ದಾರೆ.
ಇದಕ್ಕೂ ಮುನ್ನ ತಮ್ಮ ಮಗನ ಜೀವನವನ್ನಾಧರಿಸಿದ ಸಿನಿಮಾ ಹೇಗೆ ಬರುವುದೋ ಎಂದು ಪಾಲಕರು ಚಿಂತಿತರಾಗಿದ್ದರು. 2003ರಲ್ಲಿ ಹಿರಿಯ ಚಿತ್ರ ನಿರ್ದೇಶಕ ಜೆ.ಪಿ.ದತ್ತಾ ಅವರು ಎಲ್ ಒ ಸಿ ಸಿನಿಮಾ ಮಾಡುವ ಸಂದರ್ಭ ವಿಕ್ರಂ ಬಾತ್ರಾ ಅವರ ಪಾಲಕರನ್ನು ಸಂಪರ್ಕಿಸಿದ್ದರು. ಆ ಸಮಯದಲ್ಲಿ ಬಾತ್ರಾ ಪಾಲಕರು ದತ್ತಾ ಅವರನ್ನು ಕೇಳಿಕೊಂಡಿದ್ದಿಷ್ಟು. ತಮ್ಮ ಮಗನ ಹೆಸರಿಗೆ ಹಾಗೂ ತಮ್ಮ ಕುಟುಂಬದ ಗೌರವಕ್ಕೆ ಕುಂದು ತರುವಂತೆ ತೋರಿಸಬೇಡಿ ಎಂದು.
ಶೇರ್ ಶಾ ಸಿನಿಮಾದಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರು ವಿಕ್ರಂ ಬಾತ್ರಾ ಪಾತ್ರ ನಿರ್ವಹಿಸಿದ್ದರೆ, ಕಿಯಾರಾ ಅಡ್ವಾಣಿ, ಪ್ರೇಯಸಿ ಡಿಂಪಲ್ ಚೀಮಾ ಅವರ ಪಾತ್ರ ನಿರ್ವಹಿಸಿದ್ದರು. ವಿಕ್ರಂ ಬಾತ್ರಾ ನಿಧನದ ನಂತರ ಡಿಂಪಲ್ ಚೀಮಾ ಅವರು ತಾವು ಮದುವೆಯಾಗುವುದಿಲ್ಲ ಎಂದು ನಿರ್ಧಾರ ಕೈಗೊಂಡು ಅದರಂತೆ ಜೀವನ ಸಾಗಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


