ಭಾರತೀಯ ವಾಯುಪಡೆ ಪೈಲಟ್ ಸಮವಸ್ತ್ರದಲ್ಲಿ ಮಿಂಚಿದ ಬಾಲಿವುಡ್ ನಟಿ ಕಂಗನಾ
ಇತ್ತೀಚಿಗಷ್ಟೇ ಪಾರದರ್ಶಕ ಉಡುಪಿನಿಂದಾಗಿ ವಿವಾದಕ್ಕೆ ಕಾರಣವಾಗಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ನೂತನ ಅವತಾರದಲ್ಲಿ ಗಮನ ಸೆಳೆದಿದ್ದಾರೆ. ಭಾರತೀಯ ವಾಯುಪಡೆ ಪೈಲಟ್ ದಿರಿಸಿನಲ್ಲಿ ಅವರು ಕಾಣಿಸಿಕೊಂಡಿರುವ ಛಾಯಾಚಿತ್ರ ಇದೀಗ ವೈರಲ್ ಆಗಿದೆ.

ಮುಂಬೈ: ಇತ್ತೀಚಿಗಷ್ಟೇ ಪಾರದರ್ಶಕ ಉಡುಪಿನಿಂದಾಗಿ ವಿವಾದಕ್ಕೆ ಕಾರಣವಾಗಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ನೂತನ ಅವತಾರದಲ್ಲಿ ಗಮನ ಸೆಳೆದಿದ್ದಾರೆ. ಭಾರತೀಯ ವಾಯುಪಡೆ ಪೈಲಟ್ ದಿರಿಸಿನಲ್ಲಿ ಅವರು ಕಾಣಿಸಿಕೊಂಡಿರುವ ಛಾಯಾಚಿತ್ರ ಇದೀಗ ವೈರಲ್ ಆಗಿದೆ.
ತೇಜಸ್ ಎನ್ನುವ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕಂಗನಾ ಚಿತ್ರೀಕರಣ ಸೆಟ್ ನಲ್ಲಿ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ. ಈ ಛಾಯಾಚಿತ್ರವನ್ನು ಇನ್ ಸ್ಟಾ ಗ್ರಾಂನಲ್ಲಿ ಹಂಚಿಕೊಂಡ ಅವರು ಸಮವಸ್ತ್ರ ಧರಿಸಿದ ಶಕ್ತಿಶಾಲಿ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಂತಸ ಮತ್ತು ಹೆಮ್ಮೆ ಆಗುತ್ತಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ತೇಜಸ್ ಸಿನಿಮಾವನ್ನು ಸರ್ವೇಶ್ ಮೆವಾರ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಪಾತ್ರಕ್ಕಾಗಿ ತಾವು ಸೇನಾ ತರಬೇತಿ ಪಡೆಯುತ್ತಿರುವುದಾಗಿ ಅವರು ಈ ಹಿಂದೆ ಹೇಳಿಕೊಂಡಿದ್ದರು. ಸೇನಾ ಪಾತ್ರವಾಗಿರುವುದರಿಮ್ದ ಅದಕ್ಕೆ ನಿರ್ದಿಷ್ಟ ಮೈಕಟ್ಟು ಮತ್ತು ಹಾವಭಾವಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ತಾವು ಕಠಿಣ ಶ್ರಮ ಪಡುತ್ತಿರುವುದಾಗಿ ಹೇಳಿದ್ದರು.
ರಾಜಕಾರಣಿ ಜಯಲಲಿತಾ ಪಾತ್ರದಲ್ಲಿ ಅವರು ಕಾಣಿಸಿಕೊಂಡಿರುವ ತಮಿಳು ಚಿತ್ರ ತಲೈವಿ ಇನ್ನೂ ಬಿಡುಗಡೆಗೆ ಕಾದಿದ್ದು, ಇಂದಿರಾಗಾಂಧಿ ಅವರ ಜೀವನಾಧಾರಿತ ಸಿನಿಮಾ ಅವಕಾಶವೂ ಕಂಗನಾ ಕೈಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


