ಬಾಲಿವುಡ್

ಅಶ್ಲೀಲ ಚಿತ್ರ ಪ್ರಕರಣ: ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾಗೆ ಸಮನ್ಸ್!

ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾಗೆ ಮುಂಬೈ ಕ್ರೈಂ ಬ್ರಾಂಚ್‌ ವಿಶೇಷ ವಿಭಾಗ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಅಶ್ಲೀಲ ಚಿತ್ರ ಪ್ರಕರಣ: ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾಗೆ ಸಮನ್ಸ್!
ಶೆರ್ಲಿನ್ ಚೋಪ್ರಾ
Published On :

ಮುಂಬೈ: ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾಗೆ ಮುಂಬೈ ಕ್ರೈಂ ಬ್ರಾಂಚ್‌ ವಿಶೇಷ ವಿಭಾಗ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಈಗಾಗಲೇ ಉದ್ಯಮಿ ರಾಜ್ ಕುಂದ್ರಾಅವರನ್ನು ಬಂಧಿಸಲಾಗಿದ್ದು, ಇದೇ ವಿಚಾರವಾಗಿ ಇದೀಗ ಶೆರ್ಲಿನ್ ಚೋಪ್ರಾಗೆ ಮುಂಬೈ ಕ್ರೈಂ ಬ್ರಾಂಚ್‌ ವಿಶೇಷ ವಿಭಾಗ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.  

ಗುರುವಾರ ಮುಂಜಾನೆ, ಆರ್ಮ್‌ಸ್ಪ್ರೈಮ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಸೌರಭ್ ಕುಶ್ವಾಹ ಅವರನ್ನು ಮುಂಬೈ ಕ್ರೈಂ ಬ್ರಾಂಚ್‌ನ ಪ್ರಾಪರ್ಟಿ ಸೆಲ್ ವಿಚಾರಣೆಗೆ ಕರೆಸಿತ್ತು. ಏತನ್ಮಧ್ಯೆ, ಮುಂಬೈ ಸೆಷನ್ಸ್ ನ್ಯಾಯಾಲಯವು ಗುರುವಾರ ಉದ್ಯಮಿ ಮತ್ತು ನಟ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಮತ್ತು ಅವರ ಸಹವರ್ತಿ ರಯಾನ್ ಥಾರ್ಪೆ ಅವರ ಜಾಮೀನು ಅರ್ಜಿಗಳನ್ನು ಆ .10 ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.

ಜಾಮೀನು ಅರ್ಜಿ ಸಂಬಂಧ ಈಗಾಗಲೇ ನ್ಯಾಯಾಲಯವು ಮುಂಬೈ ಪೋಲಿಸರ ಪ್ರತ್ರಿಕ್ರಿಯೆ ಕೇಳಿದ್ದು, ಕುಂದ್ರಾ ಮತ್ತು ಥಾರ್ಪೆ ಇಬ್ಬರೂ ತಮ್ಮ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದಾರೆ. ಪ್ರಸ್ತುತ, ಇಬ್ಬರೂ ಅಶ್ಲೀಲ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಆಗಸ್ಟ್ 2 ರಂದು, ಬಾಂಬೆ ಹೈಕೋರ್ಟ್ ಅಶ್ಲೀಲ ಚಿತ್ರ ಹಗರಣಕ್ಕೆ ಸಂಬಂಧಿಸಿದಂತೆ  ತಮ್ಮ ಬಂಧನವನ್ನು ಪ್ರಶ್ನಿಸಿ ರಾಜ್ ಕುಂದ್ರಾ ಮತ್ತು ರಯಾನ್ ಥಾರ್ಪೆ ಸಲ್ಲಿಸಿದ ಅರ್ಜಿಗಳ ಮೇಲೆ ತನ್ನ ಆದೇಶವನ್ನು ಕಾಯ್ದಿರಿಸಿತು.

ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ, ಕುಂದ್ರಾ ಅವರ ಲ್ಯಾಪ್‌ಟಾಪ್‌ನಲ್ಲಿ 68 ಅಶ್ಲೀಲ ವೀಡಿಯೊಗಳು ಕಂಡುಬಂದಿವೆ ಎಂದು ತನಿಖಾಧಿಕಾರಿ ನ್ಯಾಯಾಲಯಕ್ಕೆ ತಿಳಿಸಿದರು. ಕುಂದ್ರಾ ಅವರ ವೈಯಕ್ತಿಕ ಲ್ಯಾಪ್‌ಟಾಪ್‌ನಲ್ಲಿ ಲೈಂಗಿಕ ವಿಷಯದ ಚಿತ್ರ ಸ್ಕ್ರಿಪ್ಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳ ಸೃಷ್ಟಿಯ ಆರೋಪದ ಮೇಲೆ ಜುಲೈ 19 ರಂದು ಇತರ 11 ಜನರೊಂದಿಗೆ ಬಂಧಿಸಲಾಗಿತ್ತು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.