ಬಾಲಿವುಡ್

ಬಾಲಿವುಡ್‌ ಗಾಯಕ ಹನಿ ಸಿಂಗ್‌ ವಿರುದ್ದ ಗೃಹ ಹಿಂಸೆ ಪ್ರಕರಣ ದಾಖಲಿಸಿದ ಪತ್ನಿ ಶಾಲಿನಿ ತಲ್ವಾರ್!

ಬಾಲಿವುಡ್ ಗಾಯಕ, ನಟ ಯೋಯೋ ಹನಿ ಸಿಂಗ್‌ ವಿರುದ್ದ ಅವರ ಪತ್ನಿ ಶಾಲಿನಿ ತಲ್ವಾರ್ ಗೃಹ ಹಿಂಸೆ, ಲೈಂಗಿಕ ಕಿರುಕುಳ, ಹಣಕಾಸು ವಂಚನೆ, ಮಾನಸಿಕ ಹಿಂಸೆಯ ಪ್ರಕರಣ ದಾಖಲಿಸಿದ್ದಾರೆ.

ಬಾಲಿವುಡ್‌ ಗಾಯಕ ಹನಿ ಸಿಂಗ್‌ ವಿರುದ್ದ ಗೃಹ ಹಿಂಸೆ ಪ್ರಕರಣ ದಾಖಲಿಸಿದ ಪತ್ನಿ ಶಾಲಿನಿ ತಲ್ವಾರ್!
ಹನಿ ಸಿಂಗ್, ಅವರ ಪತ್ನಿ ಶಾಲಿನಿ ತಲ್ವಾರ್
Published On :

ನವದೆಹಲಿ: ಪ್ರಮುಖ ಬಾಲಿವುಡ್ ಗಾಯಕ, ನಟ ಯೋಯೋ ಹನಿ ಸಿಂಗ್‌ ವಿರುದ್ದ ಅವರ ಪತ್ನಿ ಶಾಲಿನಿ ತಲ್ವಾರ್ ಗೃಹ ಹಿಂಸೆ, ಲೈಂಗಿಕ ಕಿರುಕುಳ, ಹಣಕಾಸು ವಂಚನೆ, ಮಾನಸಿಕ ಹಿಂಸೆಯ ಪ್ರಕರಣ ದಾಖಲಿಸಿದ್ದಾರೆ.

ಮಂಗಳವಾರ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ 'ಗೃಹ ಹಿಂಸೆಯಿಂದ ಮಹಿಳೆಯರ ರಕ್ಷಣೆ' ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. ತೀಸ್‌  ಹಜಾರಿ ಕೋರ್ಟ್  ಚೀಫ್ ಮೆಟ್ರೋಪಾಲಿಟನ್  ಮ್ಯಾಜಿಸ್ಟ್ರೇಟ್‌  ತಾನಿಯಾ ಸಿಂಗ್ ಮುಂದೆ ಪ್ರಕರಣ ದಾಖಲಿಸಲಾಗಿದೆ.

ಈ ಸಂಬಂಧ ನ್ಯಾಯಾಲಯ  ಹನಿ ಸಿಂಗ್‌ ಅವರಿಗೆ ನೋಟೀಸ್‌ ಜಾರಿ ಮಾಡಿದೆ. ಆಗಸ್ಟ್ 28 ರೊಳಗೆ ಸಮಜಾಯಿಷಿ ನೀಡುವಂತೆ ಆದೇಶಿಸಲಾಗಿದೆ. ಹನಿ ಸಿಂಗ್, ಅವರ  ಪತ್ನಿ ಹೆಸರಿನಲ್ಲಿರುವ  ಜಂಟಿ  ಆಸ್ತಿಗಳ  ತಂಟೆಗೆ ಹೋಗದಂತೆ ಶಾಲಿನಿ ತಲ್ವಾರ್‌  ಅವರ  ಪರವಾಗಿ ನ್ಯಾಯಾಲಯ ಮಧ್ಯಂತರ  ಆದೇಶಗಳನ್ನು  ಜಾರಿಗೊಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.