ಬಾಲಿವುಡ್ ನಟ ಸೋನು ಸೂದ್ ಗೆ ಕೋವಿಡ್-19 ನೆಗೆಟಿವ್
ಪ್ರತಿನಿತ್ಯ ತಮ್ಮ ನಿಷ್ಕಲ್ಮಶ ಮನಸ್ಸಿನಿಂದ ಅನೇಕ ಜನರಿಗೆ ಸೇವೆ ಮಾಡುತ್ತಾ ಹೆಸರಾಗಿರುವ ಬಾಲಿವುಡ್ ನಟ ಸೋನು ಸೂದ್ ಅವರಿಗೆ ಕೋವಿಡ್- 19 ನೆಗೆಟಿವ್ ರಿಪೋರ್ಟ್ ಬಂದಿದೆ. ಟ್ವಿಟರ್ ನಲ್ಲಿ ಈ ವಿಷಯವನ್ನು ಖುದ್ದು ಸೋನು ಸೂದ್ ಅವರೇ ತಿಳಿಸಿದ್ದಾರೆ.

ಮುಂಬೈ: ಪ್ರತಿನಿತ್ಯ ತಮ್ಮ ನಿಷ್ಕಲ್ಮಶ ಮನಸ್ಸಿನಿಂದ ಅನೇಕ ಜನರಿಗೆ ಸೇವೆ ಮಾಡುತ್ತಾ ಹೆಸರಾಗಿರುವ ಬಾಲಿವುಡ್ ನಟ ಸೋನು ಸೂದ್ ಅವರಿಗೆ ಕೋವಿಡ್- 19 ನೆಗೆಟಿವ್ ರಿಪೋರ್ಟ್ ಬಂದಿದೆ. ಟ್ವಿಟರ್ ನಲ್ಲಿ ಈ ವಿಷಯವನ್ನು ಖುದ್ದು ಸೋನು ಸೂದ್ ಅವರೇ ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ಸೋನು ಸೊದ್ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ಟ್ವಿಟರ್ ನಲ್ಲಿ ಬಿಳಿ ಬಣ್ಣದ ಮಾಸ್ಕ್ ನೊಂದಿಗೆ ವಿಕ್ಟರಿ ಫೋಸ್ ನೀಡುತ್ತಿರುವ ಫೋಟೊ ಒಂದನ್ನು ಹಂಚಿಕೊಂಡಿರುವ ಸೋನು ಸೂದ್, ಕೋವಿಡ್-19 ನೆಗೆಟಿವ್ ರಿಪೋರ್ಟ್ ವರದಿ ಬಂದಿದೆ ಎಂದು ಬರೆದುಕೊಂಡಿದ್ದಾರೆ.
ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ಸಹಾಯಯಾಚಿಸಿದವರಿಗೆ ನಿರಂತರವಾಗಿ ಸೇವೆ ನೀಡುತ್ತಲೇ ಇದ್ದಾರೆ. ಗಂಭೀರ ಸಮಸ್ಯೆಯಲ್ಲಿ ಬಳಲುತ್ತಿರುವ ಮಗುವೊಂದರ ಜವಾಬ್ದಾರಿಯನ್ನು ನಟ ಸೋನು ಸೂದ್ ಹೊತ್ತಿದ್ದಾರೆ.
ತೆಲಂಗಾಣದ ಕರೀಂನಗರದಲ್ಲಿ ಅವಧಿ ಪೂರ್ವವಾಗಿ ಗಂಡು ಮಗುವೊಂದು ಜನಿಸಿದ್ದು, ಹೊಟ್ಟೆಯ ಸೋಂಕಿನಿಂದ ಇನ್ಫೆಕ್ಷನ್ನಿಂದಾಗಿ ಮಗು ಬಳಲುತ್ತಿದೆ. ಐಸಿಯುನಲ್ಲಿ ಮಗುವನ್ನು ಇರಿಸಲಾಗಿದ್ದು, ನಟನಿಂದ ಸಹಾಯದ ನಿರೀಕ್ಷೆಯಲ್ಲಿ ಮಗುವಿನ ತಂದೆ ಮಹೇಶ್ಪೋತು ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್ಗೆ ಸ್ಪಂದಿಸಿರುವ ಸೋನ್ ಸೂದ್, ಮಗುವಿನ ಸಂಪೂರ್ಣ ಜವಾಬ್ದಾರಿ ತಮ್ಮದೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


