ಬಾಲಿವುಡ್

ನದೀಮ್-ಶ್ರವಣ್ ಖ್ಯಾತಿಯ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಗೆ ಕೊರೋನಾ ಪಾಸಿಟಿವ್, ಆರೋಗ್ಯ ಗಂಭೀರ!

ನದೀಮ್- ಶ್ರವಣ್ ಖ್ಯಾತಿಯ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಗೆ ಕೋವಿಡ್- 19 ಪಾಸಿಟಿವ್ ಪರೀಕ್ಷೆ ನಂತರ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು, ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರ ಮಗ ಸೋಮವಾರ ಹೇಳಿದ್ದಾರೆ.

ನದೀಮ್-ಶ್ರವಣ್ ಖ್ಯಾತಿಯ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಗೆ ಕೊರೋನಾ ಪಾಸಿಟಿವ್, ಆರೋಗ್ಯ ಗಂಭೀರ!
ಶ್ರವಣ್ ರಾಥೋಡ್
Published On :

ಮುಂಬೈ: ನದೀಮ್- ಶ್ರವಣ್ ಖ್ಯಾತಿಯ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಗೆ ಕೋವಿಡ್- 19 ಪಾಸಿಟಿವ್ ಪರೀಕ್ಷೆ ನಂತರ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು, ಅವರ  ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರ ಮಗ ಸೋಮವಾರ ಹೇಳಿದ್ದಾರೆ.

66 ವರ್ಷದ ಸಂಗೀತ ನಿರ್ದೇಶಕರು ಪ್ರಸ್ತುತ ಮುಂಬೈಯ ಎಸ್ ಎಲ್ ರಹೇಜಾ ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾವಣೆಯಲ್ಲಿರುವುದಾಗಿ ಅವರ ಮಗ ಸಂಜೀವ್ ರಾಥೋಡ್ ಹೇಳಿರುವುದಾಗಿ ಪಿಐಟಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಮುಂದಿನ 24 ಗಂಟೆಗಳ ಕಾಲ ಅವರನ್ನು ನಿಗಾವಣೆಯಲ್ಲಿ ಇಟ್ಟಿರುವುದಾಗಿ ವೈದ್ಯರು ಹೇಳಿರುವುದಾಗಿ ಸಂಜೀವ್ ರಾಥೋಡ್ ತಿಳಿಸಿದ್ದಾರೆ.  ಶ್ರವಣ್ ರಾಥೋಡ್ ಅವರ ಚೇತರಿಕೆಗಾಗಿ ಪ್ರಾರ್ಥಿಸೋಣ ಎಂದು ಸಂಗೀತ ನಿರ್ದೇಶಕ ನದೀಮ್ ಸೈಫಿ ಇನ್ಸಾಟಾಗ್ರಾಮ್ ನಲ್ಲಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನದೀಮ್- ಶ್ರವಣ್ 90ರ ದಶಕದಲ್ಲಿ ಪ್ರಖ್ಯಾತ ಸಂಗೀತ ಸಂಯೋಜಕರು. ಆಶಿಕಿ, ಸಜಾನ್, ಅಮಿರ್ ಖಾನ್ ಅಭಿನಯದ ರಾಜ ಹಿಂದೂಸ್ತಾನಿಯಂತಹ ಹಿಟ್ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.