ಬಾಲಿವುಡ್

ಎಸ್‍ಪಿಬಿ ಹಾಡುಗಳು ನನಗೆ ಸ್ಪೆಷಲ್: ಸಲ್ಮಾನ್ ಖಾನ್

ಮೇರು ಗಾಯಕ ಎಸ್‍ ಪಿ ಬಾಲಸುಬ್ರಹ್ಮಣ್ಯ ಅವರು ಹಿಂದಿ ಚಿತ್ರರಂಗದಲ್ಲೂ ತಮ್ಮ ಹಾಡುಗಳ ಮೂಲಕ ಮೋಡಿ ಮಾಡಿದವರು.

ಎಸ್‍ಪಿಬಿ ಹಾಡುಗಳು ನನಗೆ ಸ್ಪೆಷಲ್: ಸಲ್ಮಾನ್ ಖಾನ್
ಸಲ್ಮಾನ್ ಖಾನ್ - ಎಸ್ ಪಿಬಿ
Published On :

ಮುಂಬೈ: ಮೇರು ಗಾಯಕ ಎಸ್‍ ಪಿ ಬಾಲಸುಬ್ರಹ್ಮಣ್ಯ ಅವರು ಹಿಂದಿ ಚಿತ್ರರಂಗದಲ್ಲೂ ತಮ್ಮ ಹಾಡುಗಳ ಮೂಲಕ ಮೋಡಿ ಮಾಡಿದವರು.

ಇದನ್ನು ನೆನಪಿಸಿಕೊಂಡಿರುವ ನಟ ಸಲ್ಮಾನ್ ಖಾನ್‍ “ಎಸ್‍ಪಿಬಿಯವರೇ ನಿಮ್ಮ ಹಾಡುಗಳು ನನಗೆ ಸ್ಪೆಷಲ್. ಧನ್ಯವಾದಗಳು” ಎಂದು ಅವರು ಕೊನೆಯುಸಿರೆಳೆಯುವ ಕೆಲ ಸಮಯಕ್ಕೂ ಮುನ್ನ ಟ್ವೀಟ್ ಮಾಡಿದ್ದಾರೆ.

ನಿಧನದ ಬಳಿಕ ಟ್ವೀಟ್ ಮಾಡಿದ ಸಲ್ಮಾನ್ ಖಾನ್, ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಸಾವಿನ ಸುದ್ದಿ ಕೇಳಿ ಆಘಾತವಾಯಿತು… ನಿಮ್ಮ ವಿವಾದಾಸ್ಪದ ಸಂಗೀತ ಪರಂಪರೆಯಲ್ಲಿ ನೀವು ಎಂದೆಂದಿಗೂ ಜೀವಿಸುವಿರಿ! ಕುಟುಂಬಕ್ಕೆ ಸಂತಾಪ ತಿಳಿಸಿದ್ದಾರೆ.

1989ರಲ್ಲಿ ತೆರೆಕಂಡ 'ಮೈನೆ ಪ್ಯಾರ್ ಕಿಯಾ' ಸಿನಿಮಾದಲ್ಲಿನ ಎಲ್ಲ ಹಾಡುಗಳನ್ನು ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದರು. ಆನಂತರದಲ್ಲಿ 'ಹಮ್ ಆಪ್‌ಕೆ ಹೇ ಕೌನ್', 'ಪತ್ತರ್ ಕೆ ಫೂಲ್', 'ಲವ್', 'ಸಾಜನ್', 'ಅಂದಾಜ್ ಅಪ್ನಾ ಅಪ್ನಾ' ಮುಂತಾದ ಸಲ್ಮಾನ್ ನಟನೆಯ ಚಿತ್ರಗಳ ಹಾಡುಗಳಿಗೆ ದನಿಯಾದರು.

'ಹಮ್ ಆಪ್‌ಕೆ ಹೇ ಕೌನ್' ಸಿನಿಮಾದಲ್ಲಿ 14 ಹಾಡುಗಳಿದ್ದವು. ಸಲ್ಮಾನ್ ಖಾನ್, ಮಾಧುರಿ ದೀಕ್ಷಿತ್ ಅವರ ಹಾಡುಗಳೆಲ್ಲವೂವನ್ನು ಎಸ್‌ಪಿಬಿ ಹಾಗೂ ಲತಾ ಮಂಗೇಶ್ಕರ್ ಕಂಠಸಿರಿಯಲ್ಲಿ ಮೂಡಿಬಂದಿದ್ದವು. ಅಲ್ಲದೆ ಎಲ್ಲಾ ಹಾಡುಗಳೂ ಹಿಟ್ ಆಗಿದ್ದವು. 1990ರಲ್ಲಿ ಮಾರಾಟವಾದ 4 ಟಾಪ್ ಆಡಿಯೋಗಳಲ್ಲಿ ಇದು ಕೂಡ ಒಂದಾಗಿತ್ತು. 1989ರಲ್ಲಿ ಅತಿ ಹೆಚ್ಚು ಬೆಲೆಗೆ ಈ ಆಡಿಯೋ ಮಾರಾಟವಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.