ಪ್ರಸಿದ್ಧ ಗಾಯಕಿ ಅನುರಾಧ ಪೌಡ್ವಾಲ್ ಪುತ್ರ ಹಾಗೂ ಸಂಗೀತ ನಿರ್ದೇಶಕ ಆದಿತ್ಯ ವಿಧಿವಶ
ಸಂಗೀತ ನಿರ್ದೇಶಕ ಹಾಗೂ ಹಿರಿಯ ಗಾಯಕಿ ಅನುರಾಧ ಪೌಡ್ವಾಲ್ ಅವರ ಪುತ್ರ ಆದಿತ್ಯ ಪೌಡ್ವಾಲ್ ಶನಿವಾರ ನಿಧನರಾಗಿದ್ದಾರೆ.

ಮುಂಬಯಿ: ಸಂಗೀತ ನಿರ್ದೇಶಕ ಹಾಗೂ ಹಿರಿಯ ಗಾಯಕಿ ಅನುರಾಧ ಪೌಡ್ವಾಲ್ ಅವರ ಪುತ್ರ ಆದಿತ್ಯ ಪೌಡ್ವಾಲ್ ಶನಿವಾರ ನಿಧನರಾಗಿದ್ದಾರೆ.
ಆದಿತ್ಯ ಅವರಿಗೆ ಕೇವಲ 35 ವರ್ಷ, ಉತ್ಸಾಹ ಭರಿತ ವ್ಯಕ್ತಿ, ಹಲವು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ಅವರಿಗೆ ಅಧಿಕ ರಕ್ತದೊತ್ತಡವಿತ್ತು ಎಂದು ಗಾಯಕ ಶಂಕರ್ ಮಹದೇವನ್ ತಿಳಿಸಿದ್ದಾರೆ.
ಕಿಡ್ನಿ ವೈಫಲ್ಯದಿಂದ ಅವರು ವಿಧಿವಶರಾಗಿದ್ದಾರೆ, ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆ ಐಸಿಯುನಲ್ಲಿ ದಾಖಲಾಗಿದ್ದರು. ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಆದಿತ್ಯ ನವಾಜುದ್ದೀನ್ ಸಿದ್ಧಕಿ ನಟನೆಯ ಥ್ಯಾಕರೆ ಸಿನಿಮಾಗೆ ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


