ನಿಯಮ ಉಲ್ಲಂಘಿಸಿ ಕಟ್ಡಡ ನವೀಕರಣ ಆರೋಪ; ಕಂಗನಾ ರನೌತ್ ಮುಂಬೈ ಬಂಗಲೆ ಕೆಡವುವ ಕುರಿತು ಬಿಎಂಸಿ ನೋಟಿಸ್
ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವ ಬಾಲಿವುಡ್ ನಟಿ ಕಂಗನಾ ರನೌತ್ ಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ನೋಟಿಸ್ ನೀಡಿದ್ದು, ಅವರ ಮಣಿಕರ್ಣಿಕಾ ಕಚೇರಿ ಕೆಡವುವ ಕುರಿತು ಎಚ್ಚರಿಕೆ ನೀಡಿದೆ.

ಮುಂಬೈ; ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವ ಬಾಲಿವುಡ್ ನಟಿ ಕಂಗನಾ ರನೌತ್ ಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ನೋಟಿಸ್ ನೀಡಿದ್ದು, ಅವರ ಮಣಿಕರ್ಣಿಕಾ ಕಚೇರಿ ಕೆಡವುವ ಕುರಿತು ಎಚ್ಚರಿಕೆ ನೀಡಿದೆ.
ಹೌದು.. ಶಿವಸೇನೆ ನಾಯಕರ ಬೆದರಿಕೆ ಹೊರತಾಗಿಯೂ ಮುಂಬೈಗೆ ಆಗಮಿಸಿರುವ ನಟಿ ಕಂಗನಾ ರನೌತ್ ಗೆ ಮಹಾರಾಷ್ಟ್ರ ಸರ್ಕಾರ ವೈಪ್ಲಸ್ ಭದ್ರತೆ ನೀಡಿದ ಬೆನ್ನಲ್ಲೇ ಇತ್ತ ಬೃಹನ್ ಮುಂಬೈ ಮಹಾನಗರ ಪಾಲಿಕೆ ಕಂಗನಾ ರನೌತ್ ಗೆ ನೋಟಿಸ್ ಜಾರಿ ಮಾಡಿದೆ. ಮುಂಬೈನ ಬಾಂದ್ರಾದಲ್ಲಿರುವ ಮಣಿಕರ್ಣಿಕಾ ಕಚೇರಿಗೆ ನೋಟಿಸ್ ನೀಡಿದ್ದಾರೆ. ಕಂಗನಾ ಅವರು ನಿಯಮ ಬಾಹಿರವಾಗಿ ತಮ್ಮ ನಿವಾಸವನ್ನು ನವೀಕರಿಸಿದ್ದು, ಈ ಸಂಬಂಧ ಕಟ್ಟಡವನ್ನು ಕೆಡವುವ ಕುರಿತು ನೋಟಿಸ್ ನೀಡಿದೆ.
ಈ ಬಗ್ಗೆ ಸ್ವತಃ ಕಂಗನಾ ರನೌತ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, 'ತನ್ನ ಮುಂಬೈ ಕಚೇರಿಯ ಮೇಲೆ ಬಿಎಂಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಬೈನ ತನ್ನ 'ಮಣಿಕರ್ಣಿಕಾ' ಕಚೇರಿಗೆ ಬಿಎಂಸಿ ಅಧಿಕಾರಿಗಳು ಭೇಟಿ ನೀಡಿದ್ದು, ಮಂಗಳವಾರ ಆಸ್ತಿಯನ್ನು ಕೆಡವಬಹುದೆಂದು ರನೌತ್ ಟ್ವಿಟ್ಟರ್ ಗೆ ತಿಳಿಸಿದ್ದಾರೆ.
Because of the criticism that @mybmc received from my friends on social media, they didn’t come with a bulldozer today instead stuck a notice to stop leakage work that is going on in the office, friends I may have risked a lot but I find immense love and support from you all
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


