ರಿಯಾ ಚಕ್ರವರ್ತಿ ಬಂಧನಕ್ಕೊಳಗಾಲೂ ಸಿದ್ಧ: ವಕೀಲ ಸತೀಶ್
ಸುಶಾಂತ್ ಸಿಂಗ್ ರಜ್ಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿರುವ ರಿಯಾ ಚಕ್ರವರ್ತಿ ಬಂಧನಕ್ಕೆ ಒಳಗಾಗುವುದಕ್ಕೂ ಸಿದ್ಧರಿದ್ದಾರೆ ಎಂದು ಅವರ ಪರ ವಕೀಲ ಸತೀಶ್ ಮಾನೆಶಿಂಧೆ ಹೇಳಿದ್ದಾರೆ.

ಮುಂಬೈ: ಸುಶಾಂತ್ ಸಿಂಗ್ ರಜ್ಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿರುವ ರಿಯಾ ಚಕ್ರವರ್ತಿ ಬಂಧನಕ್ಕೆ ಒಳಗಾಗುವುದಕ್ಕೂ ಸಿದ್ಧರಿದ್ದಾರೆ ಎಂದು ಅವರ ಪರ ವಕೀಲ ಸತೀಶ್ ಮಾನೆಶಿಂಧೆ ಹೇಳಿದ್ದಾರೆ.
ಪ್ರೀತಿಸುವುದು ಅಪರಾಧ ಎಂದಾದರೆ, ತಮ್ಮ ಪ್ರೀತಿಗಾಗಿ ಪರಿಸ್ಥಿತಿ ಎದುರಿಸಬೇಕು ಎಂದಾದರೆ ರಿಯಾ ಚಕ್ರವರ್ತಿ ಬಂಧನಕ್ಕೆ ಒಳಗಾಗುವುದಕ್ಕೂ ಸಿದ್ಧರಿದ್ದಾರೆ ಎಂದು ವಕೀಲರು ಹೇಳಿದ್ದಾರೆ.
ರಿಯಾ ಚಕ್ರವರ್ತಿ ಮುಗ್ಧರು, ಯಾವುದೇ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿಲ್ಲ ಎಂದೂ ವಕೀಲರು ಹೇಳಿದ್ದಾರೆ. ಈ ನಡುವೆ ಎನ್ ಸಿಬಿ ಸಮನ್ಸ್ ಹಿನ್ನೆಲೆಯಲ್ಲಿ ಎನ್ ಸಿಬಿ ಕಚೇರಿಗೆ ಭಾನುವಾರ ಬೆಳಿಗ್ಗೆ ರಿಯಾ ಚಕ್ರವರ್ತಿ ತೆರಳಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಎನ್ ಸಿಬಿ ರಿಯಾ ಚಕ್ರವರ್ತಿ ಅವರ ಕಿರಿಯ ಸಹೋದರನನ್ನು ಬಂಧಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


